IPL 2022 | ಈ ಬಾರಿ ಚಾಂಪಿಯನ್ ಆರ್ ಸಿಬಿಯೇ.. ಭಜ್ಜಿ ಭವಿಷ್ಯ
IPL-2022 ಸೀಸನ್ ಅಂತಿಮ ಹಂತವನ್ನು ತಲುಪಿದೆ.
ಕ್ವಾಲಿಫೈಯರ್-2ರಲ್ಲಿ ಶುಕ್ರವಾರ (ಮೇ 27) ರಾಜಸ್ಥಾನ ರಾಯಲ್ಸ್-ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ನಡೆಯಲಿದೆ.
ಈ ಪಂದ್ಯದಲ್ಲಿ ಗೆಲ್ಲುವ ತಂಡವು ಮೇ 29 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲಿದೆ.
ಈ ಹಿನ್ನಲೆಯಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಈ ಬಾರಿ ಚಾಂಪಿಯನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಈ ಬಾರಿ ಆರ್‌ಸಿಬಿ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆಲ್ಲಲಿದೆ ಎಂದು ಭಜ್ಜಿ ಹೇಳಿದ್ದಾರೆ. ‘‘ಬೆಂಗಳೂರು ತಂಡದಲ್ಲಿ ಶ್ರೇಷ್ಠ ಆಟಗಾರರಿದ್ದಾರೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಗಟ್ಟಿಯಾಗಿದೆ. ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡುವ ಸಾಮರ್ಥ್ಯ ಆಟಗಾರರಲ್ಲಿದೆ.
ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಖಂಡಿತವಾಗಿಯೂ ಗೆಲ್ಲುತ್ತದೆ ಎಂದು ನನ್ನ ಮನಸ್ಸು ಹೇಳುತ್ತಿದೆ.
ಒಂದು ವೇಳೆ ಅದೇ ನಡೆದರೇ ಈ ಬಾರಿ ಆರ್ ಸಿಬಿ ತಂಡ ಕಪ್ ಗೆಲ್ಲೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ipl-2022-harbhajan-singh-makes-big-prediction-title-winner








