IPL 2022 | ಯಾವ ತಂಡ ಯಾರನ್ನ ಉಳಿಸಿಕೊಳ್ಳುತ್ತಿದೆ.. ಪಟ್ಟಿ ಇಲ್ಲಿದೆ IPL 2022 Saaksha tv
ಇಂದು ಐಪಿಎಲ್ ನ ಫ್ರಾಂಚೈಸಿಗಳು ತಮ್ಮ ರಿಟೈನ್ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಾಗಿದೆ. ಹೀಗಾಗಿ ಯಾವ ತಂಡ ಯಾವ ಆಟಗಾರನನ್ನ ರಿಟೈನ್ ಮಾಡಿಕೊಂಡಿದೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ. ಈಗಾಗಲೇ ಐಪಿಎಲ್ ನ ಎಂಟು ತಂಡಗಳು ತಮ್ಮ ರಿಟೈನ್ ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ.
*ಉಳಿಸಿಕೊಂಡವರ ಪಟ್ಟಿ ಹೀಗಿದೆ..
ಚೆನ್ನೈ ಸೂಪರ್ ಕಿಂಗ್ಸ್ CSK – ರವೀಂದ್ರ ಜಡೇಜಾ, ಎಂಎಸ್ ಧೋನಿ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ.
ಕೋಲ್ಕತ್ತಾ ನೈಟ್ ರೈಡರ್ಸ್ KKR – ಸುನಿಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್.
ಸನ್‍ರೈಸರ್ಸ್ ಹೈದರಾಬಾದ್ SRH – ಕೇನ್ ವಿಲಿಯಮ್ಸನ್
ಮುಂಬೈ ಇಂಡಿಯನ್ಸ್ MI- ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) – ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‍ವೆಲ್.
ಡೆಲ್ಲಿ ಕ್ಯಾಪಿಟಲ್ಸ್DC – ರಿಷಬ್ ಪಂತ್, ಪೃಥ್ವಿ ಶಾ, ಅಕ್ಷರ್ ಪಟೇಲ್, ಅನ್ರಿಚ್ ನಾಟ್ರ್ಜೆ.
ರಾಜಸ್ಥಾನ್ ರಾಯಲ್ಸ್ – ಸಂಜು ಸ್ಯಾಮ್ಸನ್
*ಬಿಡುಗಡೆ ಆಗುತ್ತಿರುವ ಆಟಗಾರರ ಪಟ್ಟಿ!
ಕೆಕೆಆರ್ KKR- ಇಯಾನ್ ಮಾರ್ಗನ್ (ನಾಯಕ), ಶುಭ್‍ಮನ್ ಗಿಲ್, ಪ್ಯಾಟ್ ಕಮ್ಮಿನ್ಸ್.
ಎಸ್‍ಎಸ್‍ಆರ್‍ಎಚ್ SRH – ಕೇನ್ ವಿಲಿಯಮ್ಸನ್ ಉಳಿಸಿಕೊಳ್ಳುವುದನ್ನು ಹೊರತುಪಡಿಸಿ ಯಾವುದೇ ಆಟಗಾರನ ಬಗ್ಗೆ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ DC – ಶಿಖರ್ ಧವನ್, ಅಶ್ವಿನ್, ಶ್ರೇಯಸ್ ಅಯ್ಯರ್, ಕಗಿಸೊ ರಬಾಡ
ರಾಜಸ್ಥಾನ್ ರಾಯಲ್ಸ್ RR – ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ರಾಹುಲ್ ತೆವಾಟಿಯಾ
ಪಂಜಾಬ್ ಕಿಂಗ್ಸ್ PBKS- ಯಾವುದೇ ಆಟಗಾರನನ್ನು ಉಳಿಸಿಕೊಳ್ಳುವುದಿಲ್ಲ ಎಂಬ ಮಾಹಿತಿ ಇದೆ.









