IPL 2022 | ಅಮ್ಮನಿಗೆ ಮನೆ ಕೊಡಿಸುತ್ತೇನೆ : ವೈಭವ್ ಅರೋರಾ
ಪಂಜಾಬ್ ಕಿಂಗ್ಸ್ ವೇಗಿ ವೈಭವ್ ಅರೋರಾ ಐಪಿಎಲ್ ಪದಾರ್ಪಣೆ ಪಂದ್ಯದಲ್ಲಿಯೇ ಎಲ್ಲರ ಗಮನ ಸೆಳೆದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅರೋರಾ ನಾಲ್ಕು ಓವರ್ ಬೌಲಿಂಗ್ ಮಾಡಿ 21 ರನ್ ನೀಡಿ, ಎರಡು ವಿಕೆಟ್ ಪಡೆದರು.
ಆ ಮೂಲಕ ವೈಭವ್ ಅರೋರಾ ಎಲ್ಲರ ಗಮನ ಸೆಳೆದಿದ್ದಾರೆ.
ಅಂದಹಾಗೆ ಕ್ಯಾಶ್ ರಿಚ್ ಲೀಗ್ ಆರಂಭಕ್ಕೂ ಮುನ್ನ ಸ್ಥಳೀಯ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅರೋರಾ ಮಾತನಾಡಿದ್ದು, ಐಪಿಎಲ್ ನಿಂದ ಬಂದ ಹಣದಿಂದ ತನ್ನ ತಾಯಿಗಾಗಿ ಮನೆ ಖರೀದಿಸಲು ಮತ್ತು ತನ್ನ ತಂದೆಗೆ ಆರ್ಥಿಕವಾಗಿ ಸಹಾಯ ಮಾಡುತ್ತೇನೆ ಎಂದಿದ್ದಾರೆ.

ನಮ್ಮ ತಂದೆ ನಮಗಾಗಿ ತುಂಬಾ ಕಷ್ಟಪಡುತ್ತಿದ್ದಾರೆ. ಅವರ ವಯಸ್ಸು ಕೂಡ ಸಹಕರಿಸುತ್ತಿಲ್ಲ.
ನಾನು ಕೆಲಸ ಮಾಡುವುದನ್ನು ನಿಲ್ಲಿಸಿ ಅಂತಾ ತಂದೆಗೆ ಹೇಳಿದ್ದೇನೆ. ಐಪಿಎಲ್ ನಿಂದ ಬರುವ ಹಣದಲ್ಲಿ ಅವರಿಗೆ ಸಹಾಯ ಮಾಡಲು ನಾನು ಬಯಸುತ್ತೇನೆ.
ನಮ್ಮ ಅಮ್ಮನಿಗೆ ಒಂದು ಒಳ್ಳೆಯ ಮನೆಯನ್ನು ಉಡುಗೊರೆಯಾಗಿ ಕೊಡಲು ಇಚ್ಛಿಸುತ್ತೇನೆ” ಎಂದು ಅರೋರಾ ಹೇಳಿದ್ದಾರೆ.
ಐಪಿಎಲ್-2021ರಲ್ಲಿ ಕೋಲ್ಕತ್ತಾ ತಂಡದ ಭಾಗವಾಗಿದ್ದ ಅರೋರಾಗೆ ಐಪಿಎಲ್ಗೆ ಪದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ. IPL-2022 ಮೆಗಾ ಹರಾಜಿನಲ್ಲಿ ಅವರಿಗೆ ರೂ. ಪಂಜಾಬ್ ಕಿಂಗ್ಸ್ 2 ಕೋಟಿಗೆ ಖರೀದಿಸಿದೆ. ipl-2022-i want-buy-house-for-my-mother vaibhav-arora








