IPL 2022 | ಪಡಿಕ್ಕಲ್ ಸಿಕ್ಸರ್’ನ ಬೆಲೆ 5 ಲಕ್ಷ!
ಮಂಗಳವಾರ ನಡೆದ ಇಂಡಿಯನ್ ಪ್ರಿಮಿಯರ್ ಲೀಗ್ ನ ಐದನೇ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ ರಾಜಸ್ತಾನ್ ರಾಯಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ರಾಜಸ್ಥಾನ ತಂಡದ ಬ್ಯಾಟರ್ ಗಳು ಹೈದರಾಬಾದ್ ತಂಡದ ಬೌಲರ್ ಗಳ ಬೆಂಡಿತ್ತಿದ್ರು. ಈ ಪಂದ್ಯದಲ್ಲಿ ಒಟ್ಟಾರೆ ಬರೋಬ್ಬರಿ 27 ಬೌಂಡರಿ ಹಾಗೂ 20 ಸಿಕ್ಸರ್ಗಳು ಸಿಡಿದಿವು. ಅದರಲ್ಲಿ ಒಂದು ಸಿಕ್ಸರ್ ಬಗ್ಗೆ ಇದೀಗ ಸಾಕಷ್ಟು ಚರ್ಚೆ ಯಾಗುತ್ತಿದೆ. ಯಾಕಂದ್ರೆ ಆ ಸಿಕ್ಸರ್ ಬೆಲೆ 5 ಲಕ್ಷ ರೂಪಾಯಿ..
ಹೌದು..! ಐಪಿಎಲ್ ಸೀಸನ್ 15 ರ ಅಧಿಕೃತ ಪ್ರಾಯೋಜಕರಾದ ಟಾಟಾ ಗ್ರೂಪ್, ಋತುವಿನ ಆರಂಭಕ್ಕೂ ಮುನ್ನ ದೊಡ್ಡ ಘೋಷಣೆ ಮಾಡಿತ್ತು. ಈ ಬಾರಿಯ ಐಪಿಎಲ್ನಲ್ಲಿ ಟಾಟಾ ಪಂಚ್ ಬೋರ್ಡ್ನಲ್ಲಿ ಬ್ಯಾಟ್ಸ್ಮನ್ಗಳ ಹೊಡೆತ ಬಿದ್ದರೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ 5 ಲಕ್ಷ ರೂಪಾಯಿ ನೀಡುವುದಾಗಿ ಟಾಟಾ ಗ್ರೂಪ್ ಹೇಳಿತ್ತು.

ಅದರಂತೆ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಟಾಟಾ ಪಂಚ್ ಬೋರ್ಡ್ನಲ್ಲಿ ಸಿಕ್ಸರ್ ಬಾರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ನ ಇನ್ನಿಂಗ್ಸ್ನಲ್ಲಿ 12 ನೇ ಓವರ್ ಅನ್ನು ಟಿ ನಟರಾಜನ್ ಎಸೆದರು. ಈ ಒವರ್ ಮೊದಲ ಎಸೆತದಲ್ಲಿ ಪಡಿಕ್ಕಲ್, ಸಿಕ್ಸರ್ ಬಾರಿಸಿದ್ರು. ಈಗ ಟಾಟಾ ಗ್ರೂಪ್ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ 5 ಲಕ್ಷ ರೂಪಾಯಿಗಳನ್ನು ನೀಡಲಿದೆ. ಈ ಸಿಕ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಅಂದಹಾಗೆ ಕಳೆದ ಕೆಲ ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡದ ಪರ ಬ್ಯಾಟ್ ಬೀಸಿದ್ದ ಪಡಿಕಲ್, ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿದಿದ್ದಾರೆ. ಸಾಮಾನ್ಯವಾಗಿ ಆರಂಭಕ ಬ್ಯಾಟರ್ ಆಗಿರುವ ದೇವದತ್, ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದರು. ಅಲ್ಲದೇ ಬಿರುಸಿನ ಬ್ಯಾಟಿಂಗ್ ನಡೆಸಿ 29 ಎಸೆತಗಳಲ್ಲಿ 41 ರನ್ ಗಳಿಸಿದರು. ಈ ವೇಳೆ ಅವರ ಬ್ಯಾಟ್ನಿಂದ ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳು ಬಂದವು. ipl-2022-ipl-costs-rs-5-lakh-fans-are-also-surprised-to-know-the-reason








