IPL 2022 | ಕೇನ್ ವಿಲಿಯಮ್ಸ್ ಗೆ ಭಾರಿ ಶಾಕ್…
IPL-2022 ಸೀಸನ್‌ನ ತನ್ನ ಮೊದಲ ಪಂದ್ಯದಲ್ಲಿಯೇ ಸೋಲುಂಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ನಿಧಾನಗತಿಯ ಬೌಲಿಂಗ್ ನಿಂದಾಗಿ ಐಪಿಎಲ್ ಆಯೋಜಕರು ಭಾರೀ ದಂಡವನ್ನು ವಿಧಿಸಿದ್ದಾರೆ.
ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೇನ್ ವಿಲಿಯಂ ಸನ್ ನಿಧಾನಗತಿಯ ಬೌಲಿಂಗ್ ನಿಂದಾಗಿ 12 ಲಕ್ಷ ರೂ. ದಂಡ ಕಟ್ಟಬೇಕಾಗಿದೆ. ಈ ಸಂಬಂಧ ಬಿಸಿಸಿಐ ಪ್ರಕಟಣೆ ಹೊರಡಿಸಿದೆ.
“ಟಾಟಾ ಪ್ರೀಮಿಯರ್ ಲೀಗ್ 2022 ರ ಭಾಗವಾಗಿ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾರಣದಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ದಂಡ ವಿಧಿಸಲಾಗುತ್ತಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಗೆ 12 ಲಕ್ಷ ರೂ ದಂಡ ವಿಧಿಸಲಾಗಿದೆ. ಇದಕ್ಕೂ ಮುನ್ನ ದೆಹಲಿ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಕೂಡ ದಂಡಕ್ಕೆ ತುತ್ತಾಗಿದ್ದರು.
ನಾಯಕ ಮತ್ತೊಮ್ಮೆ ಇದೇ ತಪ್ಪನ್ನು ಮಾಡಿದರೆ, ಈ ದಂಡವು ದ್ವಿಗುಣಗೊಳ್ಳಬಹುದು. ಮೂರನೇ ಬಾರಿ ಈ ತಪ್ಪು ಎಸಗಿದರೆ, ದಂಡದೊಂದಿಗೆ ಒಂದು ಪಂದ್ಯದ ನಿಷೇಧವನ್ನೂ ವಿಧಿಸಬಹುದು. ipl-2022-kane-williamson-fined-massive-amount