IPL 2022 | ರಾಹುಲ್ ಒಂದು ದಾಖಲೆ ಹಲವು ದಾಖಲೆಗಳು
ಮುಂಬೈ ವಿರುದ್ಧ ಬ್ರಬೋರ್ನ್ನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅಮೋಘ ಶತಕ ಸಿಡಿಸಿದ್ದಾರೆ.
ಐಪಿಎಲ್ ಕೆರಿಯರ್ ನಲ್ಲಿ 100ನೇ ಪಂದ್ಯವನ್ನಾಡುತ್ತಿರುವ ರಾಹುಲ್ ಕೇವಲ 56 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು.
ಬೌಂಡರಿಯೊಂದಿಗೆ ಶತಕದ ಗಡಿ ದಾಟಿದ ರಾಹುಲ್ ಈ ಕ್ರಮದಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ನಾಯಕನಾಗಿ ಎರಡನೇ ಶತಕ ಬಾರಿಸಿರುವ ರಾಹುಲ್, ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ನಂತರ ನಾಯಕನಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ ಎರಡನೇ ಆಟಗಾರ.
ಆರ್ಸಿಬಿ ನಾಯಕನಾಗಿ ವಿರಾಟ್ ಕೊಹ್ಲಿ ಗರಿಷ್ಠ ಐದು ಶತಕ ಬಾರಿಸಿದ್ದಾರೆ. ಈ ಶತಕದ ಮೂಲಕ ರಾಹುಲ್ ಮತ್ತೊಂದು ದಾಖಲೆ ಬರೆದಿದ್ದಾರೆ.
ಕ್ರಿಸ್ ಗೇಲ್ (ಪಂಜಾಬ್ ವಿರುದ್ಧ 2 ಶತಕ), ವಿರಾಟ್ ಕೊಹ್ಲಿ (ಗುಜರಾತ್ ಲಯನ್ಸ್ ವಿರುದ್ಧ 2 ಶತಕ) ಮತ್ತು ಡೇವಿಡ್ ವಾರ್ನರ್ (ಕೆಕೆಆರ್ ವಿರುದ್ಧ 2 ಶತಕ) ಒಂದೇ ತಂಡದ ವಿರುದ್ಧ ಎರಡು ಶತಕಗಳನ್ನು ಗಳಿಸಿದ್ದು, ಮುಂಬೈ ವಿರುದ್ಧ ರಾಹುಲ್ ಶತಕ ಸಿಡಿಸುವ ಮೂಲಕ ಆಪಟ್ಟಿಗೆ ಸೇರಿಕೊಂಡರು.
ಮುಂಬೈ ವಿರುದ್ಧದ ಪಂದ್ಯದಲ್ಲಿ ರಾಹುಲ್ ಆಕರ್ಷಕ ಶತಕದ ನೆರವಿನಿಂದ ಲಕ್ನೋ ನಿಗದಿತ ಓವರ್ಗಳಲ್ಲಿ 4 ವಿಕೆಟ್ಗೆ 199 ರನ್ ಗಳಿಸಿದೆ. ಕೆಎಲ್ 60 ಎಸೆತಗಳಲ್ಲಿ ಅಜೇಯ 103 ರನ್ ಗಳಿಸಿದ್ದಾರೆ, ipl-2022-kl-rahul-scores-century-100th-ipl-match









