ipl-2022-live-auction-jbairstow21 is sold to PunjabKings
IPL 2022 LIVE Auction | 6.75 ಕೋಟಿಗೆ ಜಾನಿ ಬೈರ್ ಸ್ಟ್ರೋ ಸೇಲ್
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜಾನಿ ಬೈರ್ ಸ್ಟ್ರೋ ಗೆ ಲಾಟರಿ ಹೊಡೆದಿದೆ. 6.75 ಕೋಟಿ ರುಪಾಯಿಗೆ ಜಾನಿ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ.
ಜಾನಿ ಬೈರ್ ಸ್ಟ್ರೋ ಗಾಗಿ ಪಂಜಾಬ್ ಕಿಂಗ್ಸ್ ತಂಡ ಮತ್ತು ಸನ್ ರೈಸರ್ಸ್ ತಂಡ ಜಿದ್ದಿಗೆ ಬಿದ್ದವು. ಅಂತಿಮವಾಗಿ ಪಂಜಾಬ್ ತಂಡ ಜಾನಿಗೆ ಮಣೆ ಹಾಕಿದೆ.
ಜಾನಿ ಬೈರ್ ಸ್ಟ್ರೋ ಕಳೆದ ಸೀಸನ್ ಗಳಲ್ಲಿ ಸನ್ ರೈಸರ್ಸ್ ತಂಡದ ಪರ ಅಧ್ಬುತ ಪ್ರದರ್ಶನ ನೀಡಿದ್ದರು.
ವಿಕೆಟ್ ಕೀಪರ್ ಜೊತೆಗೆ ಓಪನರ್ ಆಗಿರುವ ಜಾನಿ ಬೈರ್ ಸ್ಟ್ರೋ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರನಾಗಿದ್ದಾರೆ.