IPL 2022 LIVE Auction | ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ರಾಯಲ್ ಮೊತ್ತ.. 10 ಕೋಟಿ
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು ಟೀಂ ಇಂಡಿಯಾದ ಯಂಗ್ ಸ್ಟಾರ್ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಬಂಪರ್ ಲಾಟರಿ ಹೊಡೆದಿದೆ. ರಾಜಸ್ಥಾನ್ ರಾಯಲ್ಸ್ ತಂಡ 10 ಕೋಟಿಗೆ ಕೃಷ್ಣ ಅವರನ್ನ ಕೊಂಡುಕೊಂಡಿದೆ.
1 ಕೋಟಿ ಮೂಲ ಬೆಲೆಯ ಪ್ರಸಿದ್ಧ್ ಕೃಷ್ಣ 10 ಕೋಟಿಗೆ ಮಾರಾಟ
ಪ್ರಸಿದ್ಧ್ ಕೃಷ್ಣಗಾಗಿ ಲಕ್ನೋ ಮತ್ತು ರಾಯಲ್ಸ್ ತಂಡಗಳು ಆರಂಭದಿಂದಲೂ ಜಿದ್ದಿಗೆ ಬಿದ್ದಂತೆ ಮುಗಿಬಿದ್ದವು. ಅಂತಿಮವಾಗಿ ಪಟ್ಟು ಬಿಡದ ರಾಯಲ್ಸ್ 10 ಕೋಟಿಗೆ ಪ್ರಸಿದ್ಧ್ ಅವರನ್ನ ಬುಟ್ಟಿಗೆ ಹಾಕಿಕೊಂಡಿದೆ.
ಪ್ರಸಿದ್ಧ್ ಕೃಷ್ಣ ಕಳೆದ ಐಪಿಎಲ್ ನಲ್ಲಿ ಕೆಕೆಆರ್ ತಂಡದ ಪರ ಕಣಕ್ಕಿಳಿದಿದ್ದರು. ಬಳಿಕ ದೇಶಿ ಕ್ರಿಕೆಟ್ ನಲ್ಲಿ ಮಿಂಚಿ ಟೀಂ ಇಂಡಿಯಾದಲ್ಲಿ ಶೈನ್ ಆಗುತ್ತಿದ್ದಾರೆ.









