IPL 2022 LIVE Auction | ರಾಯುಡುಗೆ 6.75 ಕೋಟಿ ಕೊಟ್ಟ ಚೆನ್ನೈ
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಟೀಂ ಇಂಡಿಯಾದ ಮಾಜಿ ಆಟಗಾರ ಅಂಬಾಟಿ ರಾಯುಡು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.
ರಾಯುಡು ಕಳೆದ ಬಾರಿ ಚೆನ್ನೈ ತಂಡದ ಪರ ಆಡಿದ್ದರು.
2 ಕೋಟಿ ಮೂಲ ಬೆಲೆ ಹೊಂದಿದ್ದ ರಾಯುಡುಗಾಗಿ ಸನ್ ರೈಸರ್ಸ್ ತಂಡ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪೈಪೋಟಿ ನಡೆಸಿದವು.
ಅಂತಿಮವಾಗಿ ಜಿದ್ದಿಗೆ ಬಿದ್ದಂತೆ ಸಿಎಸ್ ಕೆ ತಂಡ ರಾಯುಡು ಅವರನ್ನ ಖರೀದಿಸಿದೆ.









