LSG vs PBKS Match | ತಂಡಗಳ ಬಲಾಬಲ.. ಪ್ಲೇಯಿಂಗ್ 11
ಇಂಡಿಯನ್ ಪ್ರಿಮಿಯರ್ ಲೀಗ್ ನ 42 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಮಹಾರಾಷ್ಟ್ರದ ಎಂಸಿಎ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಈ ಆವೃತ್ತಿಯಲ್ಲಿ ಉಭಯ ತಂಡಗಳು ಎರಡನೇ ಬಾರಿ ಎದುರುಬದುರು ಆಗುತ್ತಿವೆ.
ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಏಳನೇ ಸ್ಥಾನದಲ್ಲಿದೆ. ಲಕ್ನೋ ತಂಡ ನಾಲ್ಕನೇ ಸ್ಥಾನಲ್ಲಿದೆ.
ಪಂಜಾಬ್ 8 ಪಂದ್ಯಗಳನ್ನಾಡಿ ತಲಾ ನಾಲ್ಕು ಸೋಲು, ನಾಲ್ಕು ಗೆಲುವುಗಳನ್ನು ಕಂಡಿದೆ. ಲಕ್ನೋ ತಂಡ 8 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದು, ಮೂರಲ್ಲಿ ಸೋಲು ಕಂಡಿದೆ.
ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಿದ್ದು, 11 ರನ್ ಗಳಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಶಿಖರ್ 88 ರನ್, ರಾಜಪಕ್ಸೆ 42 ರನ್ ಸಿಡಿಸಿದ್ದರು.
ಮತ್ತೊಂದು ಕಡೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ 36 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ರಾಹುಲ್ 103 ರನ್ ಗಳಿಸಿದ್ದರು.

ಪಂಜಾಬ್ ತಂಡಕ್ಕೆ ಸ್ಥಿರ ಆಟದ ಕೊರತೆ ಕಾಡುತ್ತಿದೆ. ಬ್ಯಾಟಿಂಗ್ ನಲ್ಲಿ ಶಿಖರ್ ಧವನ್ ಮೇಲೆ ತಂಡ ಹೆಚ್ಚು ಅವಲಂಭಿತವಾಗಿದೆ. ಮಯಾಂಕ್ ಅಗರ್ ವಾಲ್, ಜಾನಿ ಬೈರ್ ಸ್ಟೋ ಲಿವಿಂಗ್ ಸ್ಟೋನ್ ಶಿಖರ್ ಗೆ ಸಾಥ್ ನೀಡಬೇಕಿದೆ. ಇನ್ನು ಬೌಲಿಂಗ್ ನಲ್ಲಿ ಅರ್ಷ್ ದೀಪ್ ಸಿಂಗ್ ಇಂಪ್ರೆಸ್ಸೀವ್ ಆಗಿದ್ದು, ಅವರಿಗೆ ರಿಷಿ ಧವನ್, ಕಗಿಸೋ ರಬಾಡ, ಸಂದೀಪ್ ಶರ್ಮಾ ಸಾಥ್ ನೀಡಬೇಕಿದೆ.
ಪ್ಲೇಯಿಂಗ್ 11
ಪಂಜಾಬ್ ತಂಡ : ಮಯಾಂಕ್ ಅಗರ್ವಾಲ್ (c), ಶಿಖರ್ ಧವನ್, ಜಾನಿ ಬೈರ್ಸ್ಟೋವ್, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (WK), ಭಾನುಕಾ ರಾಜಪಕ್ಸೆ, ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಸಂದೀಪ್ ಶರ್ಮಾ, ಅರ್ಷ್ದೀಪ್ ಸಿಂಗ್
ಇನ್ನು ಲಕ್ನೋ ತಂಡದಲ್ಲಿ ಯಾವುದೇ ಸಮಸ್ಯೆ ಕಾಣಿಸುತ್ತಿಲ್ಲ. ಮಿಡಲ್ ಆರ್ಡರ್ ನಲ್ಲಿ ತಂಡ ಸ್ವಲ್ಪ ಶೇಕಿ ಶೇಕಿ ಆಗಿದೆ. ಮನೀಷ್ ಪಾಂಡ್ಯ, ದೀಪಕ್ ಹೂಡಾ, ಆಯುಷ್ ಬಡೋನಿ ಸ್ಥಿರವಾಟ ಆಡಬೇಕಿದೆ. ಓಪನರ್ ಗಳಾಗಿ ರಾಹುಲ್, ಡಿ ಕಾಕ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಸ್ಟೋಯ್ನಿಸ್, ಕೃನಾಲ್, ಜೇಸನ್ ಹೋಲ್ಡರ್ ಆಲ್ ರೌಂಡರ್ ಆಟ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಬೌಲಿಂ್ ನಲ್ಲಿ ಚಮೀರಾ ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ.
ಪ್ಲೇಯಿಂಗ್ 11
ಲಕ್ನೋ ಸೂಪರ್ ಜೈಂಟ್ಸ್ ತಂಡ : ಕ್ವಿಂಟನ್ ಡಿ ಕಾಕ್ (wk), KL ರಾಹುಲ್ (c), ಮನೀಶ್ ಪಾಂಡೆ, ದೀಪಕ್ ಹೂಡಾ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಮೊಹ್ಸಿನ್ ಖಾನ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್ ipl 2022 lsg-vs-pbks-match- preview








