DC vs KKR Match | ಸೇಡು ತೀರಿಸಿಕೊಳ್ಳುತ್ತಾ ಕೆಕೆಆರ್
ಇಂಡಿಯನ್ ಪ್ರಿಮಿಯರ್ ಲೀಗ್ ನ 41 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ. ಈ ಉಭಯ ತಂಡಗಳು ಈ ಸೀಸನ್ ನಲ್ಲಿ ಎರಡನೇ ಬಾರಿಗೆ ಸೆಣಸಾಡಲಿವೆ.
ಸದ್ಯ ಅಂಕಪಟ್ಟಿಯಲ್ಲಿ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಏಳನೇ ಸ್ಥಾನದಲ್ಲಿದೆ. ಶ್ರೇಯಸ್ ಅಯ್ಯರ್ ಸಾರಥ್ಯದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅಂಕಪಟ್ಟಿಯಲ್ಲಿ ಏಂಟನೇ ಸ್ಥಾನದಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈವರೆಗೂ ಏಳು ಪಂದ್ಯಗಳನ್ನಾಡಿದ್ದು, ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಕೆಕೆಆರ್ ಏಂಟು ಪಂದ್ಯಗಳಲ್ಲಿ ಮೂರಲ್ಲಿ ಗೆದ್ದಿದೆ.
ಡೆಲ್ಲಿ ತಂಡ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ 15 ರನ್ ಗಳಿಂದ ಸೋಲು ಕಂಡಿದೆ. ಇತ್ತ ಕೆಕೆಆರ್ ತಂಡ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ 8 ರನ್ ಗಳಿಂದ ಸೋಲು ಕಂಡಿದೆ.
ಉಭಯ ತಂಡಗಳು ಈವರೆಗೂ ಐಪಿಎಲ್ ನಲ್ಲಿ 30 ಮ್ಯಾಚ್ ಗಳಲ್ಲಿ ಮುಖಾಮುಖಿಯಾಗಿದ್ದು, 14 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್, 16 ಪಂದ್ಯದಲ್ಲಿ ಕೆಕೆಆರ್ ತಂಡ ಗೆದ್ದಿದೆ.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಎರಡೂ ತಂಡದಲ್ಲಿ ಸ್ಥಿರ ಆಟದ ಕೊರತೆ ಎದ್ದು ಕಾಣುತ್ತಿದೆ. ಕೋಲ್ಕತ್ತಾ ತಂಡಕ್ಕೆ ಬ್ಯಾಟಿಂಗ್ ವಿಭಾಗ ತಲೆ ನೋವಾಗಿದೆ. ಮುಖ್ಯವಾಗಿ ಆರಂಭಿಕರ ಕೊರತೆ ಕಾಡುತ್ತಿದೆ. ಹಲವು ಪ್ರಯೋಗಗಳನ್ನು ಮಾಡಿದ್ರೂ ಯಾವುದೇ ಪ್ರಯೋಜನೆ ಆಗುತ್ತಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಸತತ ವಿಫಲರಾಗುತ್ತಿರುವ ವೆಂಕಟೇಶ್ ಅಯ್ಯರ್ ಬದಲಿಗೆ ಅಜಿಂಕ್ಯಾ ರಹಾನೆಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಸಿಗಬಹುದು. ಇನ್ನು ನಾಯಕ ಶ್ರೇಯಸ್ ಅಯ್ಯರ್, ರಸೆಲ್ ತಂಡದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ. ಫಿಂಚ್, ಸ್ಯಾಮ್ ಬಿಲ್ಲಿಂಗ್ಸ್, ಆಲ್ ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್ ಮಿಂಚುತ್ತಿಲ್ಲ. ಬೌಲಿಂಗ್ ವಿಭಾಗದಲ್ಲಿ ಹೊಸ ಚೆಂಡನ್ನು ಉಮೇಶ್ ಯಾದವ್ ಹಾಗೂ ಟೀಮ್ ಸೌಥಿ ಹಂಚಿಕೊಂಡು ಬಿಗುವಿನ ದಾಳಿ ನಡೆಸುತ್ತಿದ್ದಾರೆ.
ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಪವರ್ ಫುಲ್ ಆರಂಭ ನೀಡುತ್ತಿದ್ದಾರೆ. ಆದ್ರೆ ಮಿಡಲ್ ಆರ್ಡರ್ ಶೇಕಿ ಶೇಕಿಯಾಗಿದೆ. ಸರ್ಫರಾಜ್ ಖಾನ್, ರಿಷಭ್ ಪಂತ್, ಲಲಿತ್ ಯಾದವ್ ತಮ್ಮ ಜವಾಬ್ದಾರಿಯನ್ನು ಅರಿತು ಆಡಬೇಕಿದೆ. ಪೊವೆಲ್, ಶರ್ದೂಲ್ ಆಲ್ ರೌಂಡರ್ ಆಟ ಆಡಬೇಕಿದೆ. ಡೆಲ್ಲಿ ತಂಡದ ಪರ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ವೇಗದ ಬೌಲರ್ ಖಲೀಲ್ ಅಹ್ಮದ್ ಸಹ ತಮ್ಮ ಜವಾಬ್ದಾರಿಯನ್ನು ತಿಳಿದು ಬೌಲ್ ಮಾಡುತ್ತಿದ್ದಾರೆ. ಮುಷ್ತಾಫಿಜುರ್ ರಹಮಾನ್, ಶಾರ್ದೂಲ್ ಠಾಕುರ್ ಸರಿಯಾದ ಸ್ಥಳದಲ್ಲಿ ಚೆಂಡನ್ನು ಎಸೆದು ಎದುರಾಳಿಗೆ ಕಾಟ ನೀಡಬೇಕಿದೆ.









