IPL 2022 Mega Auction Day 2 : ಟಿಮ್ ಡೇವಿಡ್ ಗೆ ಬಂಪರ್
IPL 2022 Mega Auction Day 2 : Uncapped all-rounder Tim David is SOLD to mi for INR 8.25 crore
ಸಿಂಗಪೂರ್ ದೇಶದ ಕ್ರಿಕೆಟಿಗ ಟಿಮ್ ಡೇವಿಡ್ ಗೆ ಬಂಪರ್ ಲಾಟರಿ ಹೊಡೆದಿದೆ.
ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ಸಂಚಲನ ಸೃಷ್ಟಿಸಿರುವ ಡೇವಿಡ್, ಆರಂಭಿಕನಾಗಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ತನ್ನ ಸಾಮರ್ಥ್ಯವನ್ನು ತೆರೆಟಿದ್ದಾರೆ.
ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ 8.25 ಕೋಟಿ ರುಪಾಯಿಗೆ ಅವರನ್ನ ಕೊಂಡುಕೊಂಡಿದೆ.
40 ಲಕ್ಷ ಮೂಲ ಬೆಲೆ ಹೊಂದಿದ್ದ ಟಿಮ್ 8.25 ಕೋಟಿಗೆ ಸೇಲ್ ಆಗುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಟಿಮ್ ಡೇವಿಡ್ ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ಪಾಳಯದಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರವೀಣ್ ದುಬೈ ಅವರನ್ನ 50 ಲಕ್ಷ ರುಪಾಯಿಗೆ ಕೊಂಡುಕೊಂಡಿದೆ.