ಈ ಸ್ಟಾರ್ ಆಟಗಾರರ ಕಥೆ ಮುಗೀತು.. Ipl-2022 saaksha tv
ಐಪಿಎಲ್ 15ನೇ ಆವೃತ್ತಿಯ ಮೆಗಾ ಹರಾಜಿಗೆ ಸಮಯ ಸಮೀಪಿಸುತ್ತಿದೆ. ಈಗಾಗಲೇ ತಮಗೆ ಬೇಕಾಗಿರುವ ಆಟಗಾರರನ್ನು ಉಳಿಸಿಕೊಂಡಿರುವ ಫ್ರಾಂಚೈಸಿಗಳು, ಮೆಗಾ ಹರಾಜಿನಲ್ಲಿ ತಂಡಕ್ಕೆ ಅವಶ್ಯಕತೆ ಇರುವ ಆಟಗಾರರ ಖರೀದಿಗೆ ಪ್ಲಾನ್ ಮಾಡಿಕೊಂಡಿವೆ. ಈ ಸಂದರ್ಭದಲ್ಲಿ ಕುತೂಹಲಕಾರಿ ಚರ್ಚೆ ಮುನ್ನೆಲೆಗೆ ಬಂದಿದೆ. ಹರಾಜಿನಲ್ಲಿ ಮಾರಾಟವಾಗದೆ ಉಳಿಯುವ ಭಾರತೀಯ ಆಟಗಾರ ಇವರೇ ಎಂದು ಸ್ಟಾರ್ ಆಟಗಾರರ ಹೆಸರುಗಳು ಕೇಳಿಬರುತ್ತಿವೆ.
ಮೊದಲಿಗೆ ಸುರೇಶ್ ರೈನಾ
ಕ್ಯಾಶ್ ರಿಚ್ ಲೀಗ್ ನಲ್ಲಿ ಸುರೇಶ್ ರೈನಾ ದಾಖಲೆಗಳ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ. ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿಪಡೆದಿರುವ ರೈನಾ ಕಳೆದ ವರ್ಷದಿಂದ ಟಚ್ ಕಳೆದುಕೊಂಡಿದ್ದಾರೆ. ಈ ಬಾರಿ ಸಿಎಸ್ ಕೆ ಪರ ಬ್ಯಾಟ್ ಬೀಸಿದ್ದ ರೈನಾ ಕೇವಲ 160 ರನ್ ಗಳಿಸಿದ್ರು. ಈ ಹಿನ್ನೆಲೆಯಲ್ಲಿ ಸಿಎಸ್‌ಕೆ ರೈನಾ ಅವರನ್ನು ಕೈಬಿಟ್ಟಿದೆ. ಹೀಗಾಗಿ ಮೆಗಾ ಹರಾಜಿಗೆ ಬರಲಿದ್ದಾರೆ ಸುರೇಶ್ ರೈನಾ. ಆದ್ರೆ ಸದ್ಯ ಅವರಿರುವ ಫಾರ್ಮ್ ಅನ್ನು ನೋಡಿದ್ರೆ ಅವರನ್ನು ಯಾವುದೇ ಪ್ರಾಂಚೈಸಿ ಖರೀದಿಸೋದು ಅನುಮಾನವಾಗಿದೆ.
ಎರಡನೇಯದಾಗಿ ಅಂಬಾಟಿ ರಾಯುಡು
ಒಂದು ಕಾಲದಲ್ಲಿ ಐಪಿಎಲ್ ನಲ್ಲಿ ಮಿಂಚು ಹರಿಸಿದ್ದ ಅಂಬಾಟಿ ಬ್ಯಾಟ್, ಕಳೆದ ಕೆಲ ವರ್ಷಗಳಿಂದ ಸದ್ದು ಮಾಡುತ್ತಿಲ್ಲ. ಬಾರಿಯ ಐಪಿಎಲ್ ನಲ್ಲೂ ಕೂಡ ರಾಯುಡು ಮಿಂಚಲಿಲ್ಲ. ಹೀಗಾಗಿ ಚೆನ್ನೈ ಫ್ರಾಂಚೈಸಿ ಅವರನ್ನು ಕೈಬಿಟ್ಟಿದೆ. ಐಪಿಎಲ್ ನಲ್ಲಿ ಅನುಭವಿರುವ ಆಟಗಾರನಾಗಿದ್ದರೂ ರಾಯುಡುಗೆ ಫಿಟ್ನೆಸ್ ಮತ್ತು ವಯಸ್ಸು ಅಡ್ಡಿಯಾಗಿದೆ. ಹೀಗಾಗಿ ರಾಯುಡು ಮೆಗಾ ಹರಾಜಿನಲ್ಲಿ ಮಾರಾಟವಾಗುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.
ಮೂರನೇಯದಾಗಿ ಹರ್ಭಜನ್ ಸಿಂಗ್
ಟೀಂ ಟೀಂ ಇಂಡಿಯಾದ ಅನುಭವಿ ಆಟಗಾರ ಹರ್ಭಜನ್ ಸಿಂಗ್ ಅವರನ್ನು ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಖರೀದಿಸಿತ್ತು. ಆದ್ರೆ ಅವರು ಐಪಿಎಲ್-2021 ರಲ್ಲಿ ಯಾವುದೇ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಆಡಿದ ಮೂರು ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ವಿಫಲರಾದರು. ಇದರೊಂದಿಗೆ ಕೆಕೆಆರ್ ಅವರನ್ನು ಕೈಬಿಟ್ಟಿದ್ದು, ರಾಯುಡು ಅವರಂತೆಯೇ ವಯಸ್ಸು ಮತ್ತು ಫಿಟ್ನೆಸ್ ದೃಷ್ಟಿಯಿಂದ ಫ್ರಾಂಚೈಸಿಗಳು ಭಜ್ಜಿಯನ್ನು ಖರೀದಿಸುವ ಸಾಧ್ಯತೆ ಕಡಿಮೆ.
ನಾಲ್ಕನೇಯದಾಗಿ ದಿನೇಶ್ ಕಾರ್ತಿಕ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ದಿನೇಶ್ ಕಾರ್ತಿಕ್ ಅವರನ್ನು ತಂಡ ಉಳಿಸಿಕೊಂಡಿಲ್ಲ. ಕಳೆದ ಎರಡು ಸೀಸನ್‌ಗಳಲ್ಲಿ ಡಿಕೆ ಅಷ್ಟೊಂದು ಪ್ರಭಾವ ಬೀರಿಲ್ಲ. ಅಲ್ಲದೆ…ಡಿಕೆ ಹಲವು ದಿನಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿಲ್ಲ. ಹಾಗಾಗಿ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ದಿನೇಶ್ ಗೆ ಮಣೆ ಹಾಕೋದು ಕಷ್ಟ ಎನ್ನಲಾಗುತ್ತಿದೆ.









