IPL 2022 | ಕೋಟಿಗೊಬ್ಬ ಯಾರು…?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15 ನೇ ಸೀಸನ್ ಸಂಭ್ರಮ ಶುರುವಾಗಿದೆ. ಇದೇ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ipl-2022-mega-auction these-players-have-huge-demand saakshatv
ಜನವರಿ 22 ರಂದು ಮೆಗಾ ಹರಾಜಿಗಾಗಿ ಒಟ್ಟು 1,214 ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಫ್ರಾಂಚೈಸಿಗಳ ಕೋರಿಕೆ ಮೇರೆಗೆ ಮಂಗಳವಾರ ಬಿಸಿಸಿಐ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.
ಇದರೊಂದಿಗೆ ಮೆಗಾ ಹಜಾರಿನಲ್ಲಿ ಭಾಗವಹಿಸುವವರ ಸಂಖ್ಯೆ 590ಕ್ಕೆ ಇಳಿದಿದೆ. 590 ಮಂದಿಯ ಪೈಕಿ 370 ಭಾರತೀಯ ಕ್ರಿಕೆಟಿಗರು ಮತ್ತು 220 ವಿದೇಶಿ ಆಟಗಾರರು ಇದ್ದಾರೆ.
ಆಸ್ಟ್ರೇಲಿಯಾದಿಂದ ಗರಿಷ್ಠ 47 ವಿದೇಶಿ ಆಟಗಾರರು ಹರಾಜಿಗೆ ಶಾರ್ಟ್ಲಿಸ್ಟ್ ಆಗಿದ್ದಾರೆ. 590 ಮಂದಿಯಲ್ಲಿ, 228 ಈಗಾಗಲೇ ತಮ್ಮ ತಮ್ಮ ದೇಶಗಳಿಗಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ…
355 ‘ಅನ್ಕ್ಯಾಪ್ಡ್‘ ಆಟಗಾರರಿದ್ದು, 7 ಮಂದಿ ಅಸೋಸಿಯೇಟ್ ದೇಶದವರಾಗಿದ್ದಾರೆ. ಐಪಿಎಲ್ನಲ್ಲಿ ಭಾಗವಹಿಸುವ ಪ್ರತಿ ತಂಡ ಗರಿಷ್ಠ 25 ಸದಸ್ಯರನ್ನು ಹೊಂದಿರುತ್ತದೆ.
ಹರಾಜಿಗೂ ಮುನ್ನ ಎಂಟು ತಂಡಗಳು 27 ಆಟಗಾರರನ್ನು ಉಳಿಸಿಕೊಂಡಿವೆ. ಎರಡು ಹೊಸ ತಂಡಗಳು 6 ಆಟಗಾರರನ್ನು ಆಯ್ಕೆ ಮಾಡಿದೆ. ಒಟ್ಟಾರೆ ಈ 33 ಮಂದಿ ತಂಡಗಳಲ್ಲಿದ್ದು, ಸದ್ಯ 217 ಸ್ಥಾನಗಳು ಖಾಲಿಯಾಗಿವೆ.
ರೂ. 2 ಕೋಟಿ ಕನಿಷ್ಠ ಮೌಲ್ಯದೊಂದಿಗೆ 48 ಮಂದಿ ಐಪಿಎಲ್ ಹರಾಜಿಗೆ ಕಾಲಿಡುತ್ತಿದ್ದು, 1.5 ಕೋಟಿ ಪಟ್ಟಿಯಲ್ಲಿ 20 ಮಂದಿ, ಕನಿಷ್ಠ 1 ಕೋಟಿ ರೂ. ಪಟ್ಟಿಯಲ್ಲಿ 34 ಮಂದಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಹಲವು ವರ್ಷಗಳ ಬಳಿಕ ನಡೆಯುತ್ತಿರುವ ‘ಮೆಗಾ ಹರಾಜು’ ಹಾಗೂ ಎರಡು ಹೊಸ ತಂಡಗಳ ಆಗಮನದಿಂದ ಸ್ಟಾರ್ ಆಟಗಾರರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಕಮ್ಮಿನ್ಸ್ (ಆಸ್ಟ್ರೇಲಿಯಾ), ಡಿ ಕಾಕ್, ರಬಾಡ, ಡುಪ್ಲೆಸಿಸ್ (ದಕ್ಷಿಣ ಆಫ್ರಿಕಾ), ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್), ಶ್ರೇಯಸ್ ಅಯ್ಯರ್, ಅಶ್ವಿನ್, ಶಿಖರ್ ಧವನ್, ಇಶಾನ್ ಕಿಶನ್, ಹರ್ಷಲ್ ಪಟೇಲ್, ಶಮಿ (ಭಾರತ) , ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), ಜೇಸನ್ ಹೋಲ್ಡರ್, ಆಟಗಾರರನ್ನು ಎಲ್ಲಾ ಫ್ರಾಂಚೈಸಿಗಳು ಬಯಸುತ್ತವೆ. ಹೀಗಾಗಿ ಮೆಗಾ ಹರಾಜಿನಲ್ಲಿ ಇವರು ದಾಖಲೆ ಮಟ್ಟದ ಬೆಲೆ ಪಡೆಯಬಹುದು ಎಂದು ಅಂದಾಜಿಸಲಾಗುತ್ತಿದೆ.
ಇದಲ್ಲದೇ ಫ್ರಾಂಚೈಸಿಗಳನ್ನು ಬಯಸದ ಭಾರತದ ಆಟಗಾರರಾದ ಭುವನೇಶ್ವರ್, ಉಮೇಶ್ ಯಾದವ್, ರಹಾನೆ, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ಚಹಾಲ್ ಮತ್ತು ಶಾರ್ದೂಲ್ ಠಾಕೂರ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.









