CSK : ಚೆನ್ನೈ ತಂಡಕ್ಕೆ ಗಾಯದ ಮೇಲೆ ಬರೆ… ಸ್ಟಾರ್ ವೇಗಿ ಆಸ್ಪತ್ರೆ ಪಾಲು
ಐಪಿಎಲ್ 2022ರ ಸೀಸನ್ ಗೆ ಹಾಲಿ ಚಾಂಪಿಯನ್ ಆಗಿ ಎಂಟ್ರಿಕೊಟ್ಟು, ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆ ಮತ್ತೊಂದು ಆಘಾತ ಎದುರಾಗಿದೆ.
ಕೋಟಿ ಕೋಟಿ ಖರ್ಚು ಮಾಡಿ ಖರೀದಿಸಿರುವ ಆಲ್ ರೌಂಡರ್ ದೀಪಕ್ ಚಹಾರ್ ಗಾಯದಿಂದಾಂಗಿ ಲೀಗ್ ನಿಂದ ಹೊರಗುಳಿದಿದ್ದಾರೆ.
ಈ ನಡುವೆ ಡೆತ್ ಓವರ್‌ಗಳ ಸ್ಪೆಷಲಿಸ್ಟ್ ಬೌಲರ್ ಕ್ರಿಸ್ ಜೋರ್ಡಾನ್ ಟಾನ್ಸಿಲ್ಸ್ ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಕೆಲ ದಿನಗಳಿಂದ ಟಾನ್ಸಿಲ್ಸ್ ನಿಂದ ಬಳಲುತ್ತಿರುವ ಜೋರ್ಡಾನ್ ಇದೀಗ ಆಸ್ಪತ್ರೆಗೆ ಸೇರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಲ್ಲದೇ ಮತ್ತೊಬ್ಬ ವಿದೇಶಿ ವೇಗಿ ಆಡಮ್ ಮಿಲ್ನೆ ಅವರದ್ದು ಕೂಡ ಇದೇ ಪರಿಸ್ಥಿತಿಯಾಗಿದೆ.
ಕೆಕೆಆರ್ ಜೊತೆಗಿನ ಪಂದ್ಯದ ವೇಳೆ ಕಣಕ್ಕೆ ಇಳಿದ ಮಿಲ್ನೆ ಎರಡನೇ ಪಂದ್ಯಕ್ಕೂ ಮುನ್ನ ಗಾಯಗೊಂಡಿದ್ದರು. ಅವರ ಗಾಯ ಕೂಡ ಗಂಭೀರವಾಗಿದೆ ಎಂದು ವರದಿಯಾಗಿದೆ.
ಇನ್ನು ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೂರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಪ್ರಸ್ತುತ ಸಿಎಸ್ ಕೆ ಬೌಲಿಂಗ್ ವಿಭಾಗದಲ್ಲಿ ಮುಖೇಶ್ ಚೌಧರಿ, ತುಷಾರ್ ದೇಶಪಾಂಡೆ, ಡ್ವೇನ್ ಬ್ರಾವೋ, ಮೊಯಿನ್ ಅಲಿ, ಶಿವಂ ದುಬೆ ಮತ್ತು ಡ್ವೇನ್ ಪ್ರಿಟೋರಿಯಸ್ ಮಾತ್ರ ಲಭ್ಯವಿದ್ದಾರೆ.









