IPL 2022 | ಮುಂಬೈಗೆ ಕೆಕೆಆರ್ ಢಿ… ಸೋತರೇ ಶ್ರೇಯಸ್ ಸೇನಾ..?
ಐಪಿಎಲ್ ನಲ್ಲಿ ಇಂದು ಮತ್ತೊಂದು ಆಸಕ್ತಿದಾಯಕ ಸಮರ ನಡೆಯಲಿದೆ.
ಈಗಾಗಲೇ ಪ್ಲೇ ಆಫ್ಸ್ ರೇಸ್ ನಿಂದ ದೂರ ಇರುವ ಮುಂಬೈ ಇಂಡಿಯನ್ಸ್ ತಂಡ.. ಪ್ಲೇ ಆಫ್ಸ್ ರೇಸ್ ನಲ್ಲಿರುವ ಕೆಕೆಆರ್ ತಂಡಕ್ಕೆ ಢಿ ಹೊಡೆಯಲಿದೆ.
ಮುಂಬೈನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಕಳೆದ ಏಳು ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಸೋತಿರುವ ಕೆಕೆಆರ್ ತಂಡ ಇದೀಗ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಇತ್ತ ಮುಂಬೈ ಏಂಟು ಮ್ಯಾಚ್ ಗಳಲ್ಲಿ ಸೋತು ಈಗ ಗೆಲುವಿನ ಟ್ರ್ಯಾಕ್ ಗೆ ಬಂದಿದೆ.
ಈ ಪಂದ್ಯದಲ್ಲಿ ಮುಂಬೈ ಸೋತರೇ ಯಾವುದೇ ನಷ್ಟವಿಲ್ಲ. ಆದ್ರೆ ಕೆಕೆ ಆರ್ ತಂಡ ಸೋತರೇ ಪ್ಲೇ ಆಫ್ಸ್ ರೇಸ್ ನಿಂದ ಅಧೃಕೃತವಾಗಿ ಹೊರಬೀಳಲಿದೆ.
ಇಂದಿನ ಪಂದ್ಯಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ನಿರೀಕ್ಷೆ ಮಾಡಿಲ್ಲ.

ಆದ್ರೆ ಕೆಕೆಆರ್ ತಂಡದಲ್ಲಿ ಭಾರಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಗುಜರಾತ್ ಟೈಟಾನ್ಸ್ ವಿರುದ್ಧ ಕಣಕ್ಕಿಳಿದ ತಂಡವನ್ನೇ ಮುಂಬೈ ಕಣಕ್ಕಿಳಿಸಲಿದೆ.
ಇತ್ತ ಕೆಕೆಆರ್ ಲಕ್ನೋ ವಿರುದ್ಧ ಸೆಣಸಿದ್ದ ತಂಡದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿವೆ.
ಒಂದು ವೇಳೆ ಅರ್ಜುನ್ ತೆಂಡುಲ್ಕರ್ ಗೆ ಅವಕಾಶ ನೀಡಬೇಕು ಎಂದುಕೊಂಡರೇ ಮುಂಬೈ ತಂಡದಲ್ಲಿ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದೆ.
ಕೆಕೆಆರ್ ತಂಡದಲ್ಲಿ ಅರೋನ್ ಫಿಂಚ್, ಬಾಬಾ ಇಂದ್ರಜಿತ್, ಅನುಕುಲ್ ರಾಯ್, ಹಾರ್ಷಿತ್ ರಾಣಾ ಅವರಿಗೆ ಕೋಕ್ ನೀಡುವ ಸಾಧ್ಯತೆಗಳಿವೆ.
ಇವರ ಬದಲಿಗೆ ಶೆಲ್ಡನ್ ಜಾಕ್ಸನ್, ಸ್ಯಾಮ್ ಬಿಲ್ಲಿಂಗ್ಸ್, ವೆಂಕಟೇಶ್ ಅಯ್ಯರ್, ಅಮಾನ್ ಹಾಕಿಮ್ ಖಾನ್ ಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
ipl-2022-mumbai-look-deliver-final-blow-kkr-playoff-chances








