SRH | ಸನ್ ರೈಸರ್ಸ್ ತಂಡದ ಆರಂಭಿಕರು ಇವರೇ..
ಬಹು ನಿರೀಕ್ಷಿತ ಐಪಿಎಲ್ ಮೆಗಾ ಹರಾಜು ಯಶಸ್ವಿಯಾಗಿ ನೆರವೇರಿದೆ. 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಿದ್ದಾರೆ.
ಇನ್ನೇನಿದ್ದರೂ ತಂಡದ ಪ್ಲೇಯಿಂಗ್ ಇಲೆವೆನ್ ಸೆಲೆಕ್ಷನ್ ಅಷ್ಟೆ ಬಾಕಿ ಇದೆ. ಈ ವಿಷಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೊಂಚ ಮುಂದಿರುವ ರೀತಿಯಲ್ಲಿ ಕಾಣಿಸುತ್ತಿದೆ.
ಯಾಕಂದರೇ ಎಸ್ ಆರ್ ಹೆಚ್ ತಂಡದ ಬೌಲಿಂಗ್ ಕೋಚ್ ಮುತ್ತಯ್ಯ ಮುರಳೀಧರನ್ ತಂಡದ ಆರಂಭಿಕ ಜೋಡಿ ಬಗ್ಗೆ ಒಂದು ಕ್ಲಾರಿಟಿ ಕೊಟ್ಟಿದ್ದಾರೆ.
ಐಪಿಎಲ್ 2022 ರಲ್ಲಿ ಸನ್ರೈಸರ್ಸ್ ಇನ್ನಿಂಗ್ಸ್ ಅನ್ನು ಯುವ ಆಟಗಾರ ಅಭಿಷೇಕ್ ಶರ್ಮಾ ಮತ್ತು ನಾಯಕ ಕೇನ್ ವಿಲಿಯಮ್ಸನ್ ಪ್ರಾರಂಭಿಸಲಿದ್ದಾರೆ ಎಂದು ಮುರಳೀಧರನ್ ಬಹಿರಂಗ ಪಡಿಸಿದ್ದಾರೆ.
ಅಭಿಷೇಕ್ ಶರ್ಮಾ ಈ ಹಿಂದೆ ಮಿಡಲ್ ಆರ್ಡರ್ ನಲ್ಲಿ ಬ್ಯಾಟ್ ಬೀಸಿದ್ದರು. ಈಗ ಅವರಿಗೆ ಪ್ರಮೋಷನ್ ನೀಡಲಾಗಿದೆ.
ಮೆಗಾ ಹರಾಜಿನಲ್ಲಿ ಈ ಯುವ ಆಲ್ರೌಂಡರ್ಗಾಗಿ ಎಸ್ಆರ್ಹೆಚ್ ಒಟ್ಟಾಗಿ 6.5 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಐಪಿಎಲ್ನಲ್ಲಿ ಅಭಿಷೇಕ್ ಶರ್ಮಾ ಇದುವರೆಗೆ 22 ಪಂದ್ಯಗಳಲ್ಲಿ 241 ರನ್ ಗಳಿಸಿ 17.2 ವಿಕೆಟ್ ಹಾಗೂ 7 ವಿಕೆಟ್ ಪಡೆದಿದ್ದಾರೆ.









