IPL 2022 : ಸೂಪರ್ ಸೈನಿ.. ತಲೆಗೆ ಏಟು ಬಿದ್ದರೂ ಕ್ಯಾಚ್ ಬಿಡದ ಸೈನಿ..
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ನವದೀಪ್ ಸೈನಿ ಅದ್ಭುತ ಕ್ಯಾಚ್ ಹಿಡಿದಿದ್ದಾರೆ.
ಮುಂಬೈ ಇಂಡಿಯನ್ಸ್ ನ ಇನ್ನಿಂಗ್ಸ್ 13 ಓವರ್ ಎಸೆದ ಟ್ರೆಂಟ್ ಬೌಲ್ಟ್ ಬೌಲಿಂಗ್ ನಲ್ಲಿ .. ಕಿಶನ್ ಡೀಪ್ ಸ್ವೇರ್ ಲೆಗ್ ಕಡೆಗೆ ಪುಲ್ ಶಾಟ್ ಆಡಿದರು.
ಇತ್ತ ಸ್ವೇರ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸೈನಿ ಓಡಿ ಬಂದು ಅತ್ಯುತ್ತಮ ಕ್ಯಾಚ್ ಪಡೆದರು. ಆದ್ರೆ ಕ್ಯಾಚ್ ಹಿಡಿಯುವ ಸಮಯದಲ್ಲಿ ಅವರ ತಲೆಗೆ ಏಟು ಬಿತ್ತು. ಆದರೂ ಸೈನಿ ಕ್ಯಾಚ್ ಬಿಡಲಿಲ್ಲ.
ನಂತರ ಫಿಸಿಯೋ ಬಂದು ಪರೀಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಇದರೊಂದಿಗೆ ಸೈನಿ ಫೀಲ್ಡಿಂಗ್ ನಲ್ಲಿ ಮುಂದುವರೆದರು.
ಜೊತೆಗೆ ಮುಂಬೈ ಇನಿಂಗ್ಸ್ ನ ಅಂತಿಮ ಓವರ್ ನಲ್ಲಿ ಸೈನಿ ಕೇವಲ ಐದು ರನ್ ನೀಡಿ ವಿಕೆಟ್ ಪಡೆದರು.
ಈ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿದ ಸೈನಿ 36 ರನ್ ನೀಡಿ ಎರಡು ವಿಕೆಟ್ ಪಡೆದರು. ಇನ್ನು ಸೈನಿ ಕ್ಯಾಚ್ ಹಿಡಿದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೇ ರಾಜಸ್ಥಾನ್ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 24 ರನ್ ಗಳಿಂದ ಜಯ ಸಾಧಿಸಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು.
ಮುಂಬೈ 170 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು 170 ರನ್ ಗಳಿಸಿತು. ipl-2022-navdeep-saini-falls-his-head-after-taking catch
https://twitter.com/i/status/1510244074720165888









