IPL2022 | ಪಂಜಾಬ್ ಗೆ ಕಮಿನ್ಸ್ ಕಿಂಗ್
ಈ ಬಾರಿಯ ಐಪಿಎಲ್ ಮೆಗಾ ಹರಾಜು ಈ ಹಿಂದಿನ ಎಲ್ಲಾ ಹಜಾರುಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದಕ್ಕೆ ಹಲವು ಕಾರಣಗಳಿವೆ. IPL 2022 punjub-kings-might-target-pat-cummins
ಆ ಪೈಕಿ ಮುಖ್ಯವಾಗಿ ಆರ್ ಸಿಬಿ, ಪಂಜಾಬ್ ಕಿಂಗ್ಸ್, ಕೆಕೆಆರ್ ತಂಡಗಳ ನಾಯಕ ಯಾರಾಗುತ್ತಾರೆ ಅನ್ನೋ ಪ್ರಶ್ನೆಗೆ ಮೆಗಾ ಹರಾಜು ಉತ್ತರ ನೀಡಲಿದೆ.
ಹೌದು..! ಮೆಗಾ ಹರಾಜಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಕಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೆ ನಾಯಕರ ಅವಶ್ಯಕತೆ ಇದೆ.
ಹೀಗಾಗಿ ಮೆಗಾ ಹರಾಜಿನಲ್ಲಿ ಈ ಮೂರು ತಂಡಗಳು ನಾಯಕರ ಹುಡುಕಾಟ ನಡೆಸಲಿವೆ. ಹೀಗಾಗಿ ಮುಂಬರುವ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಪ್ಯಾಟ್ ಕಮಿನ್ಸ್ ಗಾಗಿ ಮೂರು ತಂಡಗಳು ಪೈಪೋಟಿ ಬೀಳಲಿವೆ.
ಕಳೆದ ಸೀಸನ್ ಗಳಲ್ಲಿ ಕಮಿನ್ಸ್ ಕೆಕೆಆರ್ ತಂಡದ ಪರ ಆಡಿದ್ದರು. ಆದ್ರೆ IPL-2022 ಮೆಗಾ ಹರಾಜಿನ ಮೊದಲು KKR ಅವರನ್ನು ಉಳಿಸಿಕೊಳ್ಳಲಿಲ್ಲ.
ಇದರೊಂದಿಗೆ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪೈಪೋಟಿ ನಡೆಸುವ ಸಾಧ್ಯತೆಗಳಿವೆ. ಅದರಲ್ಲೂ ಪಂಜಾಬ್ ಕಿಂಗ್ಸ್ ಹೇಗಾದರೂ ಮಾಡಿ ಪ್ಯಾಟ್ ಕಮ್ಮಿನ್ಸ್ ಅವರನ್ನ ಖರೀಸಿ. ನಾಯಕನ ಪಟ್ಟ ನೀಡಲು ಪ್ಲಾನ್ ಮಾಡಿಕೊಂಡಿದೆ.
ಮೆಗಾ ಹರಾಜಿನ ಮೊದಲು ಪಂಜಾಬ್ ಕಿಂಗ್ಸ್ ಕೆಎಲ್ ರಾಹುಲ್ ಅವರನ್ನು ಉಳಿಸಿಕೊಳ್ಳಲಿಲ್ಲ. ಪಂಜಾಬ್ ಮಯಾಂಕ್ ಅಗರ್ವಾಲ್ ಅವರನ್ನು ಉಳಿಸಿಕೊಂಡಿದೆ.
ಹೀಗಾಗಿ ಮಯಾಂಕ್ ಅವರಿಗೇ ನಾಯಕತ್ವ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿತ್ತು. ಆದ್ರೆ ಮಯಾಂಕ್ ಅಗರ್ವಾಲ್ ನಾಯಕನಾಗಿ ಅನುಭವ ಹೊಂದಿಲ್ಲವಾದ್ದರಿಂದ ಪಂಜಾಬ್ ಕಿಂಗ್ಸ್ ಮ್ಯಾನೇಜ್ ಮೆಂಟ್ ಪ್ಯಾಟ್ ಕಡೆ ಗಮನ ಹರಿಸಿದೆಯಂತೆ.
ಈ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಿದ್ದ ಪ್ಯಾಟ್ ಕಮಿನ್ಸ್‌ಗೆ ನಾಯಕತ್ವ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.