IPL 2022 : ಚೆನ್ನೈ ಮಣಿಸಿ 2ನೇ ಸ್ಥಾನಕ್ಕೇರಿದ ರಾಜಸ್ಥಾನ್
ಬೆಂಗಳೂರು : ಇಂಡಿಯನ್ ಪ್ರಿಮಿಯರ್ ಲೀಗ್ ನ 68 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದು ವಿಕೆಟ್ ಗಳಿಂದ ಸೋಲು ಅನುಭವಿಸಿದೆ.
ಯಶಸ್ವಿ ಜೈಸ್ವಾಲ್ ಅವರ 59 ರನ್ , ರವಿಚಂದ್ರನ್ ಅಶ್ವಿನ್ ಅವರ 40 ರನ್ ಗಳ ಜವಾಬ್ದಾರಿಯುತ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಐದು ವಿಕೆಟ್ ಗಳಿಂದ ಜಯ ಸಾಧಿಸಿದೆ.
ಇದರೊಂದಿಗೆ ಅಂಕಪಟ್ಟಿಯಲ್ಲಿ ರಾಯಲ್ ತಂಡ ಎರಡನೇ ಸ್ಥಾನಕ್ಕೆ ಏರಿ ಪ್ಲೇ ಆಫ್ಸ್ ಗೆ ಎಂಟ್ರಿಪಡೆದುಕೊಂಡಿದೆ.
ಬ್ರೆಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 150 ರನ್ಗಳಿಸಿತು.
ಈ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 19.4 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 151 ರನ್ಗಳಿಸುವ ಮೂಲಕ ಗೆಲುವಿನ ನಗೆಬೀರಿತು.
ಈ ಗೆಲುವಿನ ಮೂಲಕ ಸೀಸನ್ನಲ್ಲಿ 9ನೇ ಗೆಲುವು ಸಾಧಿಸಿದ ರಾಜಸ್ಥಾನ್ 18 ಪಾಯಿಂಟ್ಸ್ ಪಡೆದರು, ಉತ್ತಮ ರನ್ರೇಟ್ ಆಧಾರದಿಂದ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿತು.
ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ಪರ ಇನ್ನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್ವಾಡ್(2), ಡ್ವೇನ್ ಕಾನ್ವೆ(16) ರನ್ ಗಳಿಸಿ ಔಟ್ ಆದರು.
ನಂತರ ಬಂದ ಜಗದೀಸನ್(1) ಹಾಗೂ ಅಂಬಟಿ ರಾಯುಡು(3)ರನ್ ಗಳಿಸಿ ಬಹುಬೇಗನೆ ನಿರ್ಗಮಿಸಿದರು.
ಆದರೆ 1ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಯಿನ್ ಅಲಿ 93 ರನ್ ಗಳಿಸಿ ತಂಡಕ್ಕೆ ನೆರವಾದರು. ರಾಜಸ್ಥಾನ್ ಬೌಲರ್ಗಳ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದ ಮೊಯಿನ್, 93 ರನ್ಗಳ ಅದ್ಭುತ ಮೊತ್ತ ಕಲೆಹಾಕಿದರು.
ಇವರಿಗೆ ಸಾಥ್ ನೀಡಿದ ನಾಯಕ ಎಂ.ಎಸ್.ಧೋನಿ 26 ರನ್ ಗಳಿಸಿ ಉಪಯುಕ್ತ ಕಾಣಿಕೆ ನೀಡಿದರು. ಪರಿಣಾಮ ಸಿಎಸ್ಕೆ 20 ಓವರ್ಗಳಲ್ಲಿ 150 ರನ್ಗಳಿಸಲು ಸಾಧ್ಯವಾಯಿತು.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 151 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ರಾಜಸ್ಥಾನ್ ರಾಯಲ್ಸ್ ಗೆ ಉತ್ತಮ ಆರಂಭ ಸಿಗಲಿಲ್ಲ.
ಆರಂಭಿಕನಾಗಿ ಕಣಕ್ಕಿಳಿದ ಜಾಸ್ ಬಟ್ಲರ್(2), ಸಂಜೂ ಸ್ಯಾಮ್ಸನ್(15), ದೇವದತ್ ಪಡಿಕ್ಕಲ್(3) ಹಾಗೂ ಹೆಟ್ಮಾಯೆರ್(6) ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿಕೊಂಡರು.
ಆದರೆ ಜವಾಬ್ದಾರಿಯ ಆಟವಾಡಿದ ಯಶಸ್ವಿ ಜೈಸ್ವಾಲ್ 59 ರನ್ ಸಿಡಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಬಂದ ಆರ್. ಅಶ್ವಿನ್ ಉತ್ತಮ ಆಟವಾಡಿದರು. ಕೇವಲ 23 ಬಾಲ್ಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸ್ ಮೂಲಕ 40* ರನ್ಗಳಿಸಿದ ಅಶ್ವಿನ್, ತಂಡವನ್ನ ಗೆಲುವಿನ ದಡಸೇರಿಸುವಲ್ಲಿ ಯಶಸ್ವಿಯಾದರು. ipl-2022-rajasthan royals beat chennai super kings