IPL 2022 : ಮುಂಬೈ ವಿನ್… ಮೈದಾನದಲ್ಲಿ ರಣವೀರ್ ಸಿಂಗ್ ಸೆಲೆಬ್ರೆಷನ್
ಶುಕ್ರವಾರ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 5ರನ್ ಗಳಿಂದ ಜಯ ಸಾಧಿಸಿದೆ.
ಗುಜರಾತ್ ಗೆ ಕೊನೆಯ ಓವರ್ ನಲ್ಲಿ 9 ರನ್ ಗಳ ಅವಶ್ಯಕತೆ ಇತ್ತು.
ಮುಂಬೈ ನಾಯಕ ರೋಹಿತ್ ಶರ್ಮಾ ಡೆನಿಯಲ್ ಸ್ಯಾಮ್ಸ್ ಅವರ ಕೈಯಲ್ಲಿ ಬೌಲಿಂಗ್ ಮಾಡಿಸಿದರು.
ರೋಹಿತ್ ನಂಬಿಕೆಯನ್ನು ಸ್ಯಾಮ್ಸ್ ಉಳಿಸಿಕೊಂಡರು.
9 ರನ್ ಗಳನ್ನು ಡಿಫೆಂಡ್ ಮಾಡಿದ ಸ್ಯಾಮ್ಸ್ ಮೂರು ರನ್ ಗಳನ್ನು ಕೊಟ್ಟು, ಮುಂಬೈಗೆ ಐದು ರನ್ ಗಳ ಜಯ ತಂದುಕೊಟ್ಟರು.
ಈ ಹಿನ್ನೆಲೆಯಲ್ಲಿ ಮುಂಬೈ ಅಭಿಮಾನಿಗಳು ಮುಂಬೈ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದರು.
ಇದೇ ವೇಳೆ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ರಣವೀರ್ ಸಿಂಗ್ ಸದ್ದು ಮಾಡಿದರು.
ಪಂದ್ಯದ ಆರಂಭದಿಂದಲೇ ಮುಂಬೈ ತಂಡವನ್ನು ರಣವೀರ್ ಸಿಂಗ್ ಪ್ರೋತ್ಸಾಹಿಸಿದರು.
ತಂಡದ ಬ್ಯಾಟ್ಸ್‌ಮನ್‌ಗಳು ಬೌಂಡರಿ ಬಾರಿಸಿದಾಗಲೆಲ್ಲಾ ರಣವೀರ್ ಚಪ್ಪಾಳೆ ತಟ್ಟಿ ಬೆಂಬಲಿಸುತ್ತಿದ್ದರು.
ಅಂತಿಮ ಓವರ್‌ನಲ್ಲಿ ಮುಂಬೈ ಗೆಲ್ಲುತ್ತಿದ್ದಂತೆ ರಣವೀರ್ ಸಿಂಗ್ ವೈಲ್ಡ್ ಸೆಲೆಬ್ರೇಷನ್ ಮಾಡಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. IPL 2022 ranveer-singh-breaks-wild-celebration









