IPL 2022 : ಎಲಿಮಿನೇಟರ್ ನಲ್ಲಿ ಗೆದ್ದ ಬೀಗಿದ ಆರ್ಸಿಬಿ
ಕೊಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬೀಗಿದೆ.
15 ನೇ ಆವೃತ್ತಿ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ ಸಿಬಿ 14 ರನ್ ಗಳಿಂದ ಜಯ ಸಾಧಿಸಿದೆ.
ಲಕ್ನೋ ವಿರುದ್ಧ 14 ರನ್ಗಳ ಬೊಂಬಾಟ್ ಗೆಲುವು ಸಾಧಿಸಿರುವ ಆರ್ಸಿಬಿ ಇದೀಗ ಪ್ರಶಸ್ತಿ ಗೆಲುವಿಗೆ ಎರಡೇ ಹೆಜ್ಜೆ ದೂರವಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು, ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಈ ಟಾರ್ಗೆಟ್ ಬೆನ್ನತ್ತಿದ ಲಕ್ನೋ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 193 ರನ್ಗಳಿಸಿತು. ಆ ಮೂಲಕ 14 ರನ್ಗಳ ಜಯಭೇರಿ ಬಾರಿಸಿರುವ ಆರ್ಸಿಬಿ, ಇದೀಗ ಎರಡನೇ ಎಲಿಮಿನೇಟರ್ ಪಂದ್ಯಕ್ಕೆ ಲಗ್ಗೆಯಿಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಫಾಫ್ ಡುಪ್ಲಸಿಸ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ವೇಳೆ ವಿರಾಟ್ ಕೊಹ್ಲಿ ಜೊತೆಯಾದ ರಜತ್ ಪಟಿದಾರ್ ಎರಡನೇ ವಿಕೆಟ್ ಗೆ 64 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಆದ್ರೆ ವಿರಾಟ್ ಕೊಹ್ಲಿ ಹೋರಾಟ 25 ರನ್ ಗಳಿಗೆ ಅಂತ್ಯವಾಯ್ತು.
ಮ್ಯಾಕ್ಸ್ ವೆಲ್ 9 ರನ್, ಮಹಿಪಾಲ್ ಲೋಮ್ರೊರ್ 14 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ 5ನೇ ವಿಕೆಟ್ಗೆ ಜೊತೆಯಾದ ಪಟಿದಾರ್ ಹಾಗೂ ದಿನೇಶ್ ಕಾರ್ತಿಕ್ 37*(23) ಪಂದ್ಯದ ದಿಕ್ಕನ್ನೇ ಬದಲಿಸಿದರು ಆರಂಭದಿಂದಲೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಪಟಿದಾರ್, ಕೇವಲ 54 ಬಾಲ್ಗಳಲ್ಲಿ 12 ಬೌಂಡರಿ, 7 ಸಿಕ್ಸ್ ಮೂಲಕ ಐಪಿಎಲ್ ಟೂರ್ನಿಯ ಚೊಚ್ಚಲ ಶತಕ(112* ರನ್) ಸಿಡಿಸಿ ಅಬ್ಬರಿಸಿದರು. ಇವರಿಬ್ಬರು 5ನೇ ವಿಕೆಟ್ ಜೊತೆಯಾಟದಲ್ಲಿ 91 ರನ್ ಕಲೆಹಾಕಿದ ಪರಿಣಾಮ, ಆರ್ಸಿಬಿ 20 ಓವರ್ಗಳಲ್ಲಿ 206 ರನ್ಗಳಿಸಿತು.
207 ರನ್ಗಳ ಕಠಿಣ ಟಾರ್ಗೆಟ್ ಬೆನ್ನತ್ತಿದ ಲಕ್ನೋ ಆರಂಭದಲ್ಲೇ ಕ್ವಿಂಟನ್ ಡಿಕಾಕ್(6) ವಿಕೆಟ್ ಕಳೆದುಕೊಂಡಿತು. ನಂತರ ಬಂದ ಮನನ್ ವೋಹ್ರ(19) ಬಿರುಸಿನ ಆಟವಾಡಿ ಹೊರನಡೆದರು. ಈ ವೇಳೆ ಜೊತೆಯಾದ ಕೆ.ಎಲ್.ರಾಹುಲ್(79) ಹಾಗೂ ದೀಪಕ್ ಹೂಡ(45) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಈ ಜೋಡಿ 3ನೇ ವಿಕೆಟ್ಗೆ 96 ರನ್ ಕಲೆಹಾಕಿತು. ತಂಡದ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ರಾಹುಲ್, 19ನೇ ಓವರ್ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ತಂಡದ ಹೋರಾಟ ಕೂಡ ಅಂತ್ಯಗೊಂಡಿತು.
ಪರಿಣಾಮ ಲಕ್ನೋ 20 ಓವರ್ಗಳಲ್ಲಿ 193 ರನ್ಗಳಿಸಲಷ್ಟೇ ಶಕ್ತವಾಯಿತು. ಆರ್ಸಿಬಿ ಪರ ಹೇಜ಼ಲ್ವುಡ್ 3 ವಿಕೆಟ್ ಪಡೆದು ಮಿಂಚಿದರೆ. ಹಸರಂಗ, ಸಿರಾಜ್ ಹಾಗೂ ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.
ಮೇ 27ರಂದು ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿ ನಡೆಸಲಿವೆ.ipl-2022-rcb beat lucknow by 14 runs








