RCB ಗೆ KGF ತಾಕತ್ತು
ಆರ್ ಸಿಬಿ.. ಆರ್ ಸಿಬಿ.. ಆರ್ ಸಿಬಿ.. ಇದು ಕೇವಲ ಐಪಿಎಲ್ ನಲ್ಲಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಲ್ಲ. ಆರ್ ಸಿಬಿ ಕೋಟ್ಯಂತರ ಅಭಿಮಾನಿಗಳ ಎಮೋಷನ್..!! ಕನ್ನಡಿಗರ ಹೆಮ್ಮೆ..!!
ರಾಯಲ್ ಚಾಲೆಂಜರ್ಸ್ ಬೆಂಗಳೂರು..!! ಇಂಡಿಯನ್ ಪ್ರಿಮಿಯರ್ ಲೀಗ್ ನ ಸೂಪರ್ ಸ್ಟಾರ್. ಪಂದ್ಯ ಸೋತರೂ, ಗೆದ್ದರೂ ನಾವು ಹೇಳೋದು ಒಂದೇ ಈ ಸಲ ಕಪ್ ನಮ್ದೆ..!! ಇದು ಆರ್ ಸಿಬಿಯನ್ಸ್ ಅಭಿಯಾನ ಅಭಿಮಾನ..!!
ಬಹುಶಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇರುವ ಅಭಿಮಾನಿಗಳ ಬಲ, ವಿಶ್ವದ ಯಾವುದೇ ಕ್ರಿಕೆಟ್ ತಂಡಕ್ಕೆ ಇಲ್ಲ ಅಂದರೆ ತಪ್ಪಾಗಲಾರದು.
ಅದೆನೋ ಹೇಳ್ತಾರೆ ಅಲ್ವಾ.. ಪ್ರತೀ ಸೀಸನ್ ನಲ್ಲಿ ಒಂದೊಂದು ಕ್ರಶ್ ಹುಟ್ಟುಕೊಳ್ಳುತ್ತೆ ಅಂತಾ. ಹಾಗೇ ಪ್ರತಿಬಾರಿ ಐಪಿಎಲ್ ಶುರುವಾದಗಲೂ ಹುಟ್ಟುವ ಕ್ರಶ್ ರಾಯಲ್ ಚಾಲೆಂಜರ್ಸ್ ಬೆಂಗಳೂರು..!!
ಇದೇ ಕಾರಣಕ್ಕೆ ಆರ್ ಸಿಬಿ ಪಂದ್ಯ ಅಂದ್ರೆ ಅವತ್ತು ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತೆ. ಟ್ವಿಟ್ಟರ್ ನಲ್ಲಿ ಈ ಸಲ ಕಪ್ ನಮ್ದೆ ಟ್ರೆಂಡ್ ಆಗುತ್ತೆ.
ಫೇಸ್ ಬುಕ್ ನಲ್ಲಿ ತಂಡದ ಪೋಸ್ಟರ್ ಗಳು ರಾರಾಜಿಸುತ್ವೆ. ಇನ್ ಸ್ಟಾಗ್ರಾಮ್ ನಲ್ಲಿ ಫೋಟೋಗಳು ಶೈನ್ ಆಗುತ್ವೆ. ಒಟ್ಟಾರೆ ಸೋಶಿಯಲ್ ಮೀಡಿಯಾಗೆ ಬೆಂಕಿ ಬೀಳುತ್ತೆ.
ಇನ್ನು ಆರ್ ಸಿಬಿಯನ್ಸ್ ಕೂಡ ಚಿತ್ರ ವಿಚಿತ್ರವಾಗಿ, ಭಿನ್ನ ವಿಭಿನ್ನವಾಗಿ ತಂಡಕ್ಕೆ ಬೆಂಬಲ ನೀಡುತ್ತಲೇ ಇರುತ್ತಾರೆ. ಅದೇ ರೀತಿ ಈಗ ಆರ್ ಸಿಬಿಯಲ್ಲಿ ಕೆಜಿಎಫ್ ಹವಾ ಶುರುವಾಗಿದೆ.
ಹೌದು..! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಪ್ರಕಾರ ಕೆಜಿಎಫ್ ಅಂದರೆ, ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಆಟಗಾರರ ಮ್ಯಾಕ್ಸ್ವೆಲ್, ಹೊಸದಾಗಿ ಆರ್ಸಿಬಿ ತಂಡ ಸೇರ್ಪಡೆಯಾಗಿರುವ ಫಾಫ್ ಡು ಪ್ಲೆಸಿಸ್ ..
ಆರ್ಸಿಬಿ ಅಭಿಮಾನಿಗಳು ಈ ಮೂವರ ಹೆಸರುಗಳನ್ನು ಬಳಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್ ಅಂದ್ರೆ ಆರ್ಸಿಬಿ ಅಂತ ಸಿಕ್ಕಾಪಟ್ಟೆ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.
ಕೆ ಅಂದ್ರೆ ಕೊಹ್ಲಿ, ಜಿ ಅಂದ್ರೆ ಗ್ಲೇನ್ ಮ್ಯಾಕ್ಸ್ ವೆಲ್, ಎಫ್ ಅಂದ್ರೆ ಫಾಪ್ ಡುಪ್ಲಸಿಸ್.. ಹೀಗೆ ಈ ಮೂವರ ಹೆಸರುಗಳಲ್ಲಿನ ಅಕ್ಷರಗಳನ್ನ ತೆಗೆದುಕೊಂಡು ಅಭಿಮಾನಿಗಳು ಕೆಜಿಎಫ್ ಪೋಸ್ಟರ್ ರೆಡಿ ಮಾಡಿದ್ದಾರೆ.
ಆರ್ ಸಿ ಬಿ ಫ್ರಾಂಚೈಸಿ ಕೂಡ ವಿರಾಟ್, maxwell, ಫಾಫ್ ಡು ಪ್ಲೆಸಿಸ್ ಇರೋ ಫೋಟೋ ಹಾಕಿ ಅಭಿಮಾನಿಗಳ ಒತ್ತಾಯದ ಮೇರೆಗೆ ಅಂತ ಪೋಸ್ಟರ್ ಶೇರ್ ಮಾಡಿದೆ.
ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಅಭಿಮಾನಿಗಳು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ.
IPL 2022 RCB KGF Virat kohli









