RCB ಲವರ್ಸ್ vs Haters..!
ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಅನುಭವಿಸುತ್ತಿದ್ದಂತೆ ಆರ್ ಸಿಬಿ ಹೇಟರ್ಸ್ಗೆ ಹಾಲು ಕುಡಿದಷ್ಟೇ ಸಂತೋಷವಾಗಿದೆ. ಕಾರಣವೇ ಇಲ್ಲದೇ ಆರ್ ಸಿಬಿ ತಂಡವನ್ನು ವಿರೋಧಿಸುವವರು ವಾಟ್ಸಾಪ್ ಸ್ಟೇಟಸ್ ಗಳಲ್ಲಿ ತಾವು ಕಪ್ ಗೆದ್ದಷ್ಟೇ ಖುಷಿ ಪಡುತ್ತಿದ್ದಾರೆ. ಆರ್ ಸಿಬಿ ಅಭಿಮಾನಿಗಳನ್ನು ಹೀಯಾಳಿಸುತ್ತಾ, ಆರ್ ಸಿಬಿ ಆಟಗಾರರನ್ನು ಟ್ರೋಲ್ ಮಾಡುತ್ತಾ ವಿಕೃತಿ ಮೆರೆಯುತ್ತಿದ್ದಾರೆ. ಅದರಲ್ಲಿ ಹೆಚ್ಚಿನವರು ನಮ್ಮ ಕರ್ನಾಟಕದವರೇ ಅನ್ನೋದು ಬೇಸರದ ಸಂಗತಿ.
ಆ ಹೇಟರ್ಸ್ ಹುಚ್ಚಾಟಕ್ಕೆ ಆರ್ ಸಿಬಿಯನ್ಸ್ ಎಂದಿನಂತೆ ಸಕ್ಕತ್ತಾಗಿಯೇ ಉತ್ತರ ನೀಡುತ್ತಿದ್ದಾರೆ. ಸೋತ್ರೂ ಗೆದ್ರೂ ಎಂದೆಂದಿಗೂ ನಾವು ಆರ್ ಸಿಬಿಯನ್ಸ್ ಅಂತಾ ಅಭಿಮಾನ ಮೆರೆಯುತ್ತಿದ್ದಾರೆ. ಆರ್ ಸಿಬಿ ಫರ್ ಎವರ್ ಅಂತಾ ಸಾರುತ್ತಿದ್ದಾರೆ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಆರ್ ಸಿಬಿ ಲವರ್ಸ್ ವರ್ಸಸ್ ಹೇಟರ್ಸ್ ಯುದ್ಧ ನಡೆಯುತ್ತಿದೆ.
ಆದ್ರೆ ಆರ್ ಸಿಬಿ ತಂಡವನ್ನು ವಿರೋಧಿಸುವವರಿಗೆ ಯಾವುದೇ ನಿರ್ದಿಷ್ಠ ಕಾರಣವಿಲ್ಲ. ಸುಖಾಸುಮ್ಮನೆ ಆರ್ ಸಿಬಿಯನ್ನ ವಿರೋಧಿಸುವವರೇ ಹೆಚ್ಚು. ಅದರಲ್ಲಿ ಆರ್ ಸಿಬಿಯ ಫ್ಯಾನ್ಸ್ ಫಾಲೋಯಿಂಗ್ ನೋಡಿ ಹೊಟ್ಟೆ ಕಿಚ್ಚು ಪಡುವವರು. ಮತ್ತು ಆರ್ ಸಿಬಿಯ ಮೇಲಿನ ಅಭಿಮಾನವನ್ನ ಅರಗಿಸಿಕೊಳ್ಳದ ಅತೃಪ್ತ ಆತ್ಮಗಳುಳ್ಳವರೇ ಹೆಚ್ಚಾಗಿದ್ದಾರೆ.
ಗೊತ್ತು ಗುರಿ ಇಲ್ಲದೇ ಓಡೋ ಕುದುರೆ ಹಿಂದೆ ಓಡಿ ವಾಟ್ಸಾಪ್ ನಲ್ಲಿ ಸ್ಟೇಟಸ್, ಫೇಸ್ ಬುಕ್ ನಲ್ಲಿ ಪೋಸ್ಟ್, ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವರಿಗೆ ಆರ್ ಸಿಬಿಯ ಗತ್ತು ಏನು ಗೊತ್ತು…? ಅಂತಾ ಆರ್ ಸಿಬಿ ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ.

ಹೌದು..! ಆರ್ ಸಿಬಿ ಈ ಬಾರಿಯೂ ಕಪ್ ಗೆದ್ದಿಲ್ಲ. ಮುಂದಿನ ಬಾರಿ ಕಪ್ ಏನಾಗುತ್ತೋ ಗೊತ್ತಿಲ್ಲ. ಆದ್ರೆ ಅಭಿಮಾನಿಗಳು ಮಾತ್ರ ಆರ್ ಸಿಬಿ ಜೊತೆ ಇರುತ್ತಾರೆ, ಯಾಕಂದರೇ ಆರ್ ಸಿಬಿ ಇದೀಗ ಕೇವಲ ಒಂದು ತಂಡವಾಗಿ ಉಳಿದಿಲ್ಲ. ಬದಲಿಗೆ ಒಂದು ರಿಲೀಜಿಯನ್ ಆಗಿದೆ. ಕೋಟ್ಯಾಂತರ ಹೃದಯಗಳನ್ನು ಒಂದು ಮಾಡುವ ಎಮೋಷನ್ ಆಗಿದೆ. ಇದೇ ಕಾರಣಕ್ಕೆ ವಿಶ್ವದ ಯಾವುದೇ ಕ್ರಿಕೆಟ್ ತಂಡಕ್ಕೆ ಇಲ್ಲದ, NEVER BEFORE EVERT AFTER ಅಭಿಮಾನಗಳ ಬಳಗ ಆರ್ ಸಿಬಿಗೆ ಇದೆ.
ಅಂದಹಾಗೆ ಆರ್ ಸಿಬಿಗೆ ಈ ಮಟ್ಟಿನ ಅಭಿಮಾನಿಗಳು ಹುಟ್ಟಿಕೊಳ್ಳಲು ಒಂದು ರೀತಿಯಾಗಿ ಆರ್ ಸಿಬಿಯ ವಿರೋಧಿಗಳೇ ಆಗಿದ್ದಾರೆ.
ಯಾಕಂದರೇ ಪ್ರತಿ ಬಾರಿ ಆರ್ ಸಿಬಿ ಸೋತಾಗ ವಿರೋಧಿಗಳ ಅತಿರೇಕದ ವರ್ತನೆ, ಹೀಯಾಳಿಸುವುದು ಆರ್ ಸಿಬಿ ಅಭಿಮಾನಿಗಳನ್ನ ಮತ್ತಷ್ಟು ಗಟ್ಟಿ ಮಾಡುತ್ತಿದೆ. ಯಾವುದೇ ಕಾರಣ ನಮ್ಮ ತಂಡವನ್ನು ಬಿಟ್ಟುಕೊಡಬಾರದು ಎನ್ನುತ್ತಾ ಸೋತರು, ಗೆದ್ದರೂ ಎಂದೆಂದಿಗೂ ಆರ್ ಸಿಬಿ ಎನ್ನುತ್ತಿದ್ದಾರೆ.
ಇಲ್ಲಿ ಕೆಜಿಎಫ್ ಸಿನಿಮಾ ಡೈಲಾಗ್ ವೊಂದನ್ನ ಉಲ್ಲೇಖಿಸಿ ಹೇಳೋದಾದ್ರೆ, ಆರ್ ಸಿಬಿಯನ್ಸ್ ಬೆಂಕಿ ಇದ್ದಾಗೆ, ಆರ್ ಸಿಬಿ haters ಪೆಟ್ರೋಲ್..!!
Haters ಜಾಸ್ತಿಯಾದಷ್ಟು ಆರ್ ಸಿಬಿ ಮೇಲಿನ ಅಭಿಮಾನ ಧಗ ಧಗ ಅಂತಾ ಉರಿಯುತ್ತಲೇ ಇರುತ್ತದೆ. ಕೊನೆದಾಗಿ ಒಂದು ಮಾತು ಆರ್ ಸಿಬಿ ಕಳೆದ 14 ವರ್ಷಗಳಿಂದ ಕಪ್ ಗೆದ್ದಿಲ್ಲ, ಈ ಬಾರಿಯೂ ಗೆದ್ದಿಲ್ಲ, ಮುಂದೆ ಗೆಲ್ಲುತ್ತೋ ಗೆಲ್ಲಲ್ವೋ ಗೊತ್ತಿಲ್ಲ. ಆದ್ರೆ ಒಂದಾಲ್ಲ ಒಂದು ದಿನ ಆರ್ ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ, ಅವತ್ತು ಪಟಾಕಿ ಯಾರದ್ದೇ ಆಗಿರ್ಲಿ, ಬೆಂಕಿ ಹಚ್ಚೋದು ಮಾತ್ರ ಆರ್ ಸಿಬಿಯನ್ಸ್ ಆಗಿರ್ತಾರೆ.IPL 2022 RCB Lovers vs Haters








