RCB ಗೆ ಮನೀಷ್ ಕ್ಯಾಪ್ಟನ್..! ಇದು ಫಿಕ್ಸ್ IPL 2022 RCB manish pandey Virat kohli saaksha tv
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಂತಾಗಿದೆ. ಅಂತೂ ಇಂತೂ ಆರ್ ಸಿ ಬಿ ಫ್ರಾಂಚೈಸಿ ಕನ್ನಡಿಗ ಮನೀಷ್ ಪಾಂಡೆಗೆ ಕ್ಯಾಪ್ಟನ್ಸಿ ಜವಾಬ್ದಾರಿ ನೀಡಲು ಮುಂದಾಗಿದೆ ಎಂದು ಆರ್ ಸಿಬಿಯ ಮೂಲಗಳಿಂದಲೇ ತಿಳಿದು ಬಂದಿದೆ. ಹೀಗಾಗಿ ಮೆಗಾ ಹಜಾರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನೂರಕ್ಕೆ ನೂರರಷ್ಟು ಮನೀಷ್ ಪಾಂಡ್ಯೆಗೆ ಮಣೆ ಹಾಕಲಿದೆ.
ಅಂದಹಾಗೆ ಆರ್ ಸಿಬಿ ತಂಡದ ನಾಯಕ ಸ್ಥಾನಕ್ಕೆ ವಿರಾಟ್ ರಾಜೀನಾಮೆ ನೀಡುತ್ತಿದ್ದಂತೆ, ಕೊಹ್ಲಿ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದಕ್ಕೆ ಉತ್ತರಗಳೆಂಬಂತೆ ಮ್ಯಾಕ್ಸ್ ವೆಲ್, ಶ್ರೇಯಸ್ ಅಯ್ಯರ್, ಡೇವಿಡ್ ವಾರ್ನರ್, ಕೆ.ಎಲ್.ರಾಹುಲ್ ಹೆಸರುಗಳು ಕೇಳಿಬಂದಿವೆ.
ಈ ನಡುವೆ ಆರ್ ಸಿಬಿ ಕ್ಯಾಪ್ಟನ್ಸಿ ರೇಸ್ ನಲ್ಲಿ ಕನ್ನಡಿಗ ಮನೀಷ್ ಪಾಂಡೆ ಕೇಳಿಬಂದಿತ್ತು. ಏಕಾಏಕಿ ಮನೀಷ್ ಪಾಂಡೆ ಹೆಸರು ಯಾಕೆ ಬಂತು. ಮುನ್ನಲೆಗೆ ತಂದಿದ್ದು ಯಾರು ಎಂಬುವುದಕ್ಕೆ ಯಾವುದ್ದಕ್ಕೂ ಉತ್ತರವಿಲ್ಲ. ಆದ್ರೆ ಮನೀಷ್ ಪಾಂಡೆ ಹೆಸರು ಮಾತ್ರ ಪದೇ ಪದೇ ಕೇಳಿಬರುತ್ತಲೇ ಇದೆ.
ಇದೀಗ ಹೊಸ ವಿಚಾರ ಏನಪ್ಪಾ ಅಂದರೇ ಮನೀಷ್ ಪಾಂಡೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗೋದು ಪಕ್ಕಾ ಆಗಿದೆ. ಇದು ಮೆಗಾ ಹರಾಜಿನ ಬಳಿಕ ಅಧಿಕೃತವಾಗಲಿದೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ.
ಹಾಗಾದ್ರೆ ಮನೀಷ್ ಗೆ ಪಟ್ಟ ಯಾಕೆ..?
ಅನ್ನೋ ಪ್ರಶ್ನೆಗೆ ಉತ್ತರ.. ಮನೀಷ್ ಮೂಲತಃ ಕರ್ನಾಟಕದವರು. ಜೊತೆಗೆ ಆರ್ ಸಿಬಿಯ ಮಾಜಿ ಆಟಗಾರ. ದೇಶಿ ಕ್ರಿಕೆಟ್ ನಲ್ಲಿ ಕರ್ನಾಟಕ ತಂಡವನ್ನ ಮುನ್ನಡೆಸಿದ್ದಾರೆ. ಮಿಡಲ್ ಆರ್ಡರ್ ನಲ್ಲಿ ಭರವಸೆ ಬ್ಯಾಟರ್, ಜೊತೆ ಜೊತೆಗೆ ಅದ್ಭತವಾದ ಫೀಲ್ಡರ್. ಮುಖ್ಯವಾಗಿ ವಿರಾಟ್ ಕೊಹ್ಲಿ ಜೊತೆಗೆ ಮನೀಷ್ ಗೆ ಹಲವು ವರ್ಷಗಳ ಸ್ನೇಹವಿದೆ. 2008ರ ಅಂಡರ್ 19 ವಿಶ್ವಕಪ್ ನಲ್ಲಿ ಮನೀಷ್, ವಿರಾಟ್ ಜೊತೆಯಾಗಿ ಆಡಿದ್ದರು. ಆಗ ವಿರಾಟ್ ಕ್ಯಾಪ್ಟನ್ ಆಗಿದ್ದರೇ ಮನೀಷ್ ಕೊಹ್ಲಿಯ ಡೆಪ್ಯೂಟಿಯಾಗಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಇನ್ನು ಮನೀಷ್ ಕ್ಯಾಪ್ಟನ್ ಆದ್ರೆ ತಂಡದಲ್ಲಿ ಯಾವುದೇ ಗೊಂದಲಗಳಿವೆ ಆಸ್ಪದ ನೀಡದೇ ತಂಡವನ್ನು ಮುನ್ನಡೆಸುತ್ತಾರೆ. ಅತ್ತ ಸ್ಟಾರ್ ಆಟಗಾರರ ಜೊತೆಗೆ ಹೊಂದಾಣಿಕೆಯಿಂದ, ಕಿರಿಯ ಆಟಗಾರರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಸಾಮರ್ಥ್ಯ ಮನೀಷ್ ಗೆ ಇದೆ. ಈ ಎಲ್ಲಾ ಕಾರಣಗಳಿಂದ ಮನೀಷ್ ಗೆ ಮಣೆ ಹಾಕಲು ಆರ್ ಸಿಬಿ ಫ್ರಾಂಚೈಸಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.









