RCB ಗೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್..!!!
ಇನ್ನೇನು ಕೆಲವೇ ದಿನಗಳಲ್ಲಿ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭವಾಗಲಿದೆ. ಆದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು ಎಂಬೋದು ಇನ್ನೂ ಘೋಷಣೆ ಆಗಿಲ್ಲ.
ಇಂದು ನಡೆಯುತ್ತಿರುವ ಆರ್ ಸಿಬಿ ಇನ್ ಬಾಕ್ಸ್ ಕಾರ್ಯಕ್ರಮದ ಮೂಲಕ ತಂಡದ ನಾಯಕ ಯಾರು..? ಹೊಸ ಜರ್ಸಿ ಹೇಗಿರಲಿದೆ..? ಸೇರಿದಂತೆ ಹಲವು ಕುತೂಹಲಗಳಿಗೆ ಉತ್ತರ ಸಿಗಲಿದೆ.
ಇನ್ನು ಆರ್ ಸಿಬಿ ಇನ್ ಬಾಕ್ಸ್ ಕಾರ್ಯಕ್ರಮದ ಭಾಗವಾಗಿ ಗುರುವಾರ ವಿರಾಟ್ ಕೊಹ್ಲಿ ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
‘‘ಪುನರುತ್ತೇಜ. ಐಪಿಎಲ್ ಸೀಸನ್ ಆರಂಭಕ್ಕೆ ಎದುರು ನೋಡುತ್ತಿದ್ದೇನೆ. ನಾನು ನಿಮಗೆ ಮುಖ್ಯವಾದ ವಿಷಯವನ್ನು ಹೇಳಬೇಕಾಗಿದೆ, ಎಂದು ವಿರಾಟ್ ಹೇಳುತ್ತಿದ್ದಂತೆ.. ಕೊಹ್ಲಿ ಮಾತುಗಳನ್ನು RCB ಮ್ಯೂಟ್ ಮಾಡಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದೆ.
ಈ ವಿಡಿಯೋಗೆ ಸಾಕಷ್ಟು ಕಮೆಂಟ್ ಗಳು ಬರುತ್ತಿದ್ದು, “ವಿರಾಟ್ ನೀನೇ ಕ್ಯಾಪ್ಟನ್ ಆಗಬೇಕು. ನೀನೇ ಆರ್ ಸಿಬಿ ಕ್ಯಾಪ್ಟನ್ ಎನ್ನುತ್ತಿದ್ದಾರೆ.
ಅಂದಹಾಗೆ ಇನ್ನೊಂದು ಮೂಲಗಳ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲಸಿಸ್ ಆಗಲಿದ್ದಾರೆ ಎನ್ನಲಾಗುತ್ತಿದೆ.









