IPL 2022 : ಆ ಅವಕಾಶಕ್ಕಾಗಿ ಐದು ವರ್ಷಗಳಿಂದ ಕಾಯುತ್ತಿದ್ದೇನೆ
ಕೋಲ್ಕತ್ತಾ ನೈಟ್ ರೈಡರ್ಸ್ ಸತತ ಐದು ಸೋಲಿನ ನಂತರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮತ್ತೆ ಗೆಲುವಿನ ಟ್ರ್ಯಾಕ್ ಗೆ ಬಂದಿದೆ.
ವಾಂಖೆಡೆಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೆಕೆಆರ್ 7 ವಿಕೆಟ್ ಗಳ ಜಯ ಸಾಧಿಸಿದೆ.
ಆದರೆ, ಕೆಕೆಆರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ರಿಂಕು ಸಿಂಗ್.
ನಿತೀಶ್ ರಾಣಾ ಜೊತೆಗೂಡಿ ರಿಂಕು ಸಿಂಗ್ ಕೆಕೆಆರ್ ತಂಡವನ್ನು ಗೆಲುವಿನ ದಡಸೇರಿದರು.
ಈ ಪಂದ್ಯದಲ್ಲಿ 23 ಎಸೆತಗಳನ್ನು ಎದುರಿಸಿದ ರಿಂಕು ಸಿಂಗ್ 42 ರನ್ ಗಳಿಸಿದರು.
ಅಲ್ಲದೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಪಂದ್ಯ ಗೆದ್ದ ಬಳಿಕ ಮಾತನಾಡಿದ ರಿಂಕು ಸಿಂಗ್, ಐಪಿಎಲ್ ನಂತಹ ಮೆಗಾ ಟೂರ್ನಿಯಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಲು ಐದು ವರ್ಷಗಳಿಂದ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು.
2018ಕ್ಕೆ ಐಪಿಎಲ್ ಗೆ ಎಂಟ್ರಿ ಕೊಟ್ಟ ರಿಂಕು ಸಿಂಗ್ ಈವರೆಗೂ 13 ಮ್ಯಾಚ್ ಗಳಲ್ಲಿ ಮಾತ್ರ ಕಣಕ್ಕಿಳಿದಿದ್ದಾರೆ.
“ಅಲಿಘರ್ನಲ್ಲಿ ಅನೇಕ ಆಟಗಾರರು ರಣಜಿ ಕ್ರಿಕೆಟ್ ಆಡಿದ್ದಾರೆ, ಆದರೆ ಐಪಿಎಲ್ನಲ್ಲಿ ಆಡಿದ ಮೊದಲ ವ್ಯಕ್ತಿ ನಾನು.
ಐಪಿಎಲ್ ಒಂದು ಮೆಗಾ ಟೂರ್ನಮೆಂಟ್, ತುಂಬಾ ಒತ್ತಡದಿಂದ ಕೂಡಿರುತ್ತದೆ.
ಕಳೆದ ಐದು ವರ್ಷಗಳಿಂದ ಈ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ. ನಾನು ತುಂಬಾ ಕಷ್ಟಪಟ್ಟೆ.
ಈ ಪಂದ್ಯದಲ್ಲಿ ನಾನು ಬ್ಯಾಟಿಂಗ್ ಮಾಡುತ್ತಿದ್ದಾಗ, ರಾಣಾ ಭಯ್ಯಾ ಮತ್ತು ಕೋಚ್ ಮೆಕಲಮ್ ನನಗೆ ಕೊನೆಯವರೆಗೂ ಇದ್ದು ಪಂದ್ಯವನ್ನು ಮುಗಿಸಲು ಹೇಳಿದರು, ”ಎಂದು ರಿಂಕು ಸಿಂಗ್ ಹೇಳಿದ್ದಾರೆ.
ipl 2022 Rinku singh says i-have-been-waiting-last-five-years-get-chance