IPL 2022 | ಲಕ್ನೋ ಗೆಲುವಿಗೆ ಕಂಟಕವಾದ ಕುಲ್ ದೀಪ್..
ಐಪಿಎಲ್ ನಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಮುನ್ನುಗ್ಗುತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ ಬ್ರೇಕ್ ಹಾಕಿದೆ.
ರಾಜಸ್ಥಾನ್ ತಂಡದ ರಾಯಲ್ ಬೌಲಿಂಗ್ ಮುಂದೆ ಲಕ್ನೋ ಸೂಪರ್ ಜೈಂಟ್ಸ್ ಆಟ ನಡೆಯಲೇ ಇಲ್ಲ.
ಪರಿಣಾಮ 15 ನೇ ಆವೃತ್ತಿ ಇಂಡಿಯನ್ ಪ್ರಿಮಿಯರ್ ಲೀಗ್ ನ 20 ನೇ ಪಂದ್ಯದಲ್ಲಿ ಲಕ್ನೋ ತಂಡ ಮೂರು ರನ್ ಗಳೊಂದಿಗೆ ಸೋಲು ಕಂಡಿದೆ.
ಇತ್ತ ಲಕ್ನೋ ವಿರುದ್ಧ ಗೆದ್ದ ರಾಜಸ್ಥಾನ್ ತಂಡ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಶಿಮ್ರಾನ್ ಹಿಟ್ಮೇಯರ್ ಆಸರೆಯಾದ್ರು.
ಹಿಟ್ಮೆಯರ್ 36 ಎಸೆತಗಳನ್ನು ಎದುರಿಸಿ 1 ಬೌಂಡರಿ, 6 ಸಿಕ್ಸರ್ ಗಳ ನೆರವಿನಿಂದ 59 ರನ್ ಗಳಿಸಿದ್ರು.
ಪರಿಣಾಮ ರಾಜಸ್ಥಾನ್ ತಂಡ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.
ರಾಯಲ್ಸ್ ಪರ ಬಟ್ಲರ್ 13 ರನ್, ಸ್ಯಾಮ್ಸನ್ 13 ರನ್, ಪಡಿಕಲ್ 29 ರನ್ ಸಿಡಿಸಿ ಬೇಗ ಪೆವಿಲಿಯನ್ ಸೇರಿಕೊಂಡರು.
ಬಳಿಕ ಹಿಟ್ಮೆಯರ್ ಮತ್ತು ಅಶ್ವಿನ್ ಜೋಡಿ ತಂಡಕ್ಕೆ ನೆರವಾದ್ರು. ಅಶ್ವಿನ್ 28 ರನ್ ಗಳಿಸಿದ್ರು.
ರಾಯಲ್ಸ್ ನೀಡಿದ 166 ರನ್ ಗಳ ಗುರಿಯನ್ನು ಬೆನ್ನುಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ.
ನಾಯಕ ಕೆ.ಎಲ್ ರಾಹುಲ್ ಶೂನ್ಯಕ್ಕೆ ಔಟ್ ಆದ್ರು. ಕೆ ಗೌತಮ್ ಕೂಡ ಖಾತೆ ತೆರೆಯಲಿಲ್ಲ. ಬಳಿಕ ಹೊಲ್ಡರ್ 8 ರನ್, ಬದೋನಿ 5 ರನ್, ಕೃನಾಲ್ಡ್ ಪಾಂಡ್ಯ 22 ರನ್ ಸಿಡಿಸಿದರು.
ಅಂತಿಮವಾಗಿ ಸ್ಟೋಯ್ನಿಸ್ 17 ಎಸೆತಗಳಲ್ಲಿ 38 ರನ್ ಗಳಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ.
ಕೊನೆಯ ಓವರ್‌ನಲ್ಲಿ ಲಕ್ನೋ ಗೆಲುವಿಗೆ 15 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್ ಬೌಲ್ ಮಾಡಿದ ರಾಜಸ್ಥಾನದ ಬೌಲರ್ ಕುಲದೀಪ್ ಸೇನ್, ಸ್ಟೋನ್ಸ್ ಗೆ ಕಡಿವಾಣ ಹಾಕಿದ್ರು.
ಕುಲದೀಪ್ ಎಸೆದ ಮೊದಲ ಎಸೆತಕ್ಕೆ ಅವೇಶ್ ಖಾನ್ ಒಂದು ರನ್ ಕದ್ದರು. ನಂತರದ ಮೂರು ಎಸೆತಗಳಲ್ಲಿ ಸ್ಟೊಯಿನಿಸ್ ರನ್ ಗಳಿಸಲು ವಿಫಲರಾದರು.
ಪರಿಣಾಮ ಲಖನೌ ಗೆಲುವಿನ 2 ಎಸೆತಗಳಲ್ಲಿ 14ರನ್ ಬೇಕಾಯಿತು. ಸ್ಟೋಯ್ನಿಸ್ ಐದನೇ ಎಸೆತಕ್ಕೆ ಬೌಂಡರಿ… ಕೊನೆಯ ಎಸೆತಕ್ಕೆ ಸಿಕ್ಸ್ ಸಿಡಿಸಿದ್ರೂ ಮೂರು ರನ್ ಗಳ ಅಂತರದೊಂದಿಗೆ ಪಂದ್ಯ ಸೋಲಬೇಕಾಯ್ತು.
ipl-2022-rr-vs-lsg-rajasthan-beat-lucknow-3-runs









