IPL 2022 : ಮಯಾಂಕ್ ಅಗರ್ ವಾಲ್ ನಿಜವಾದ ನಾಯಕ
ಮಯಾಂಕ್ ಅಗರ್ವಾಲ್ ನಿಜವಾದ ನಾಯಕ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ.
ತಮ್ಮ ತಂಡದ ಸಲುವಾಗಿ ಆರಂಭಿಕ ಸ್ಥಾನವನ್ನು ತ್ಯಾಗ ಮಾಡಿದ್ದಾರೆ ಎಂದು ಮಯಾಂಕ್ ಹೇಳಿದ್ದಾರೆ.
ಆರಂಭದಲ್ಲಿ ಅಗರ್ವಾಲ್, ಶಿಖರ್ ಧವನ್ ಜೊತೆಗೆ ಐಪಿಎಲ್-2022 ರಲ್ಲಿ ಪಂಜಾಬ್ ಇನ್ನಿಂಗ್ಸ್ ಆರಂಭಿಸಿದ್ದರು.
ಆದಾಗ್ಯೂ, ಮಯಾಂಕ್ ಅವರು ತಂಡದ ಹಾರ್ಡ್ ಹಿಟ್ಟರ್ ಜಾನಿ ಬೈರ್‌ಸ್ಟೋವ್‌ಗಾಗಿ ತಮ್ಮ ಆರಂಭಿಕ ಸ್ಥಾನವನ್ನು ತ್ಯಾಗ ಮಾಡಿದ್ದಾರೆ.
ಇತ್ತ ಆರಂಭಿಕರಾಗಿ ಬಂದ ಬೈರ್‌ಸ್ಟೋ ಉತ್ತಮವಾಗಿ ಆಡುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬೈರ್‌ಸ್ಟೋವ್ ಅರ್ಧಶತಕಗಳನ್ನು ಬಾರಿಸಿ ತಂಡಕ್ಕೆ ನೆರವಾಗಿದ್ದಾರೆ.
ಈ ಹಿನ್ನೆಲೆಯಲ್ಲಿ “ಮಯಾಂಕ್ ಅಗರ್ವಾಲ್ ನಿಜವಾದ ನಾಯಕ.
ಬೈರ್‌ಸ್ಟೋಗೆ ಅವಕಾಶ ನೀಡಲು ಅವರು ತಮ್ಮ ಆರಂಭಿಕ ಸ್ಥಾನವನ್ನು ತ್ಯಾಗ ಮಾಡಿದ್ದಾರೆ.
ಹಾಗಾಗಿ ಮಯಾಂಕ್ ಅವರ ನಿರ್ಧಾರ ಸರಿಯಾಗಿದೆ,” ಎಂದು ಮಂಜ್ರೇಕರ್ ಹೇಳಿದ್ದಾರೆ. ipl-2022-sanjay-manjrekar-praises-mayank-agarwal