IPL | ಮುಂಬೈನಲ್ಲಿ 55 ಪಂದ್ಯ.. ಐಪಿಎಲ್ ಬಗ್ಗೆ ಮೇಜರ್ ಅಪ್ ಡೇಟ್
2022ರ ಐಪಿಎಲ್ ಬಗ್ಗೆ ಮೇಜರ್ ಅಪ್ ಡೇಟ್ ಬಂದಿದೆ.
ಲೀಸ್ ಹಂತದ ಮ್ಯಾಚ್ ಗಳು ನಡೆಯುವ ಸ್ಥಳಗಳನ್ನು ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಬಾರಿಯ ಐಪಿಎಲ್ ನ ಲೀಗ್ ನಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ.
ಈ ಪೈಕಿ 55 ಪಂದ್ಯಗಳು ಮುಂಬೈನ ವಾಂಖೆಡೆ, ಬ್ರಬೋರ್ನ್ ಮತ್ತು ಡಿವೈ ಪಾಟೀಲ್ ಸ್ಟೇಡಿಯಂಗಳಲ್ಲಿ ನಡೆಯಲಿವೆ.
ಉಳಿದ 15 ಪಂದ್ಯಗಳು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ಆದರೆ, ಐಪಿಎಲ್ ಆರಂಭದ ದಿನಾಂಕದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಸೀಸನ್ 15 ಮಾರ್ಚ್ 26 ಅಥವಾ 27 ರಂದು ಪ್ರಾರಂಭವಾಗಲಿದೆ.
ಬಿಸಿಸಿಐ ಆರಂಭದಲ್ಲಿ ಈ ವರ್ಷದ ಮಾರ್ಚ್ 27 ರಂದು ಕ್ಯಾಶ್ ರಿಚ್ ಲೀಗ್ ಅನ್ನು ಪ್ರಾರಂಭಿಸಲು ಯೋಜಿಸಿತ್ತು.
ಆದ್ರೆ ಲೀಗ್ ನ ಅಧಿಕೃತ ಪ್ರಸಾರಕ ಸ್ಟಾರ್ ಇಂಡಿಯಾದ ಕೋರಿಕೆಯ ಮೇರೆಗೆ ಬಿಸಿಸಿಐ ಮಾರ್ಚ್ 26 ರಂದು ಲೀಗ್ ಅನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿದೆ ಎಂದು ತಿಳಿದುಬಂದಿದೆ.
ಇದರೊಂದಿಗೆ ನಾಳೆ (ಫೆಬ್ರವರಿ 24) ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಲೀಗ್ ವೇಳಾಪಟ್ಟಿ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.









