ಟೂರ್ನಿಯಿಂದ KKR ಔಟ್.. ನನಗೇನೂ ನೋವಿಲ್ಲ ಎಂದ ಶ್ರೇಯಸ್
“ನಾನು ಹೆಚ್ಚು ತಲೆಕೆಡೆಸಿಕೊಳ್ಳುವುದಿಲ್ಲ. ನಾನು ಆಡಿದ ಅತ್ಯುತ್ತಮ ಪಂದ್ಯಗಳಲ್ಲಿ ಇದು ಕೂಡ ಒಂದು. ನಮ್ಮ ತಂಡದ ಪರಿಶ್ರಮ ಅತ್ಯುತ್ತಮವಾಗಿದೆ.
ವಿಶೇಷವಾಗಿ ರಿಂಕು ನಮ್ಮನ್ನು ಗೆಲ್ಲಿಸಲು ಕಠಿಣ ಹೋರಾಟ ನಡೆಸಿದರು. ಆದರೆ ದುರದೃಷ್ಟವಶಾತ್ ಅದು ಆಗಲಿಲ್ಲ.
ಅವರು ತುಂಬಾ ನಿರಾಶೆಗೊಂಡರು ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ರಿಂಕು ಸಿಂಗ್ ಗೆಲುವಿನ ರುವಾರಿಯಾಗಿ ಹೀರೋ ಆಗಿ ನಿಲ್ಲುತ್ತಾರೆ ಎಂಬ ಭರವಸೆ ಇತ್ತು.
ಆದ್ರೆ ಅದು ಆಗಲ್ಲ, ಆದಾಗ್ಯೂ ಅವರ ಪ್ರಭಾವಶಾಲಿ ಇನ್ನಿಂಗ್ಸ್ ನನ್ನನ್ನು ರೋಮಾಂಚನಗೊಳಿಸಿದೆ. ನಿರ್ಣಾಯಕ ಪಂದ್ಯದಲ್ಲಿ ನಮ್ಮ ತಂಡ ಆಡಿದ ರೀತಿ ತೃಪ್ತಿ ತಂದಿದೆ ಎಂದು ಅಯ್ಯರ್ ಹೇಳಿದ್ದಾರೆ.
ಈ ಪಂದ್ಯದಲ್ಲಿ ಕೆಕೆಆರ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 2 ರನ್ಗಳಿಂದ ಸೋತಿದೆ. ಇದರೊಂದಿಗೆ ಪ್ಲೇ ಆಫ್ ರೇಸ್ನಿಂದ ನಿರ್ಗಮಿಸಿದೆ.
ಈ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ನಾಯಕ ಶ್ರೇಯಸ್ ಅಯ್ಯರ್, ‘ಪವರ್ ಪ್ಲೇ’ನಲ್ಲಿ ಎರಡು ವಿಕೆಟ್ ಕಳೆದುಕೊಂಡ ಬಳಿಕವೂ ನಾವು ಕೊನೆಯವರೆಗೂ ಹೋರಾಡಿದ ರೀತಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು.

ವಾಸ್ತವವಾಗಿ ನಾವು ಈ ಋತುವಿನಲ್ಲಿ ಉತ್ತಮ ಆರಂಭವನ್ನು ಪಡೆದಿದ್ದೇವು. ಆದರೆ ಸತತ ಐದು ಪಂದ್ಯಗಳನ್ನು ಸೋತಿದ್ದು, ಗಾಯದ ಸಮಸ್ಯೆಗಳು, ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಗಳು ತಂಡದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಎಂದು ತಂಡದ ವೈಫಲ್ಯಕ್ಕೆ ಕಾರಣಗಳನ್ನು ಬಿಚ್ಚಿಟ್ಟರು.
ಅದೇ ರೀತಿ .. “ಈ ಋತುವಿನಲ್ಲಿ ನಮಗೆ ರಿಂಕು ಅವರಂತಹ ಶ್ರೇಷ್ಠ ಆಟಗಾರ ಸಿಕ್ಕಿದ್ದಾರೆ. ಡ್ರೆಸ್ಸಿಂಗ್ ರೂಂನಲ್ಲಿ ಸಕಾರಾತ್ಮಕ ವಾತಾವರಣವಿತ್ತು
ಅದರಲ್ಲೂ ಕೋಚ್ ಮೆಕಲಮ್ .. ಯಾವುದೇ ಸಂದರ್ಭದಲ್ಲೂ ನಮ್ಮ ಬೆಂಬಲಕ್ಕೆ ನಿಂತಿದ್ದರು. ಅವರಿಗೆ ನಾವೆಲ್ಲರೂ ಸಮಾನರು. ಒಂದು ಹೆಚ್ಚು .. ಒಂದು ಕಡಿಮೆ ಎಂಬುವ ಭಾವನೆ ಇರಲಿಲ್ಲ. ಯಾವುದೇ ಸಮಯದಲ್ಲಿ ನಮಗೆ ಅಗತ್ಯವಿರುವ ಸಹಾಯ ಮತ್ತು ಮಾರ್ಗದರ್ಶನವನ್ನು ನೀಡಲು ಅವರು ಸಿದ್ಧರಾಗಿದ್ದರು ಎಂದು ಅಯ್ಯರ್ ತಿಳಿಸಿದರು.
ಈ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 14 ಪಂದ್ಯಗಳಲ್ಲಿ ಕೇವಲ ಆರು ಪಂದ್ಯಗಳನ್ನು ಗೆದ್ದು 12 ಅಂಕಗಳನ್ನು ಗಳಿಸಿದೆ. ಇದರಿಂದ ಆರನೇ ಸ್ಥಾನಕ್ಕೆ ಸೀಮಿತವಾಗಿದೆ.
IPL 2022 shreyas iyer reaction after post match