IPL 2022 | ಗಿಲ್ ಔಟ್ ಬಗ್ಗೆ ಅಪೀಲ್.. ನೋ ಬಾಲ್ ಕೊಟ್ಟಿದ್ದೇಕೆ ಅಂಪೈರ್..?
ಐಪಿಎಲ್ 2022 ರಲ್ಲಿ ಶನಿವಾರ ಗುಜರಾತ್ ಟೈಟಾನ್ಸ್ ಮತ್ತು ಆರ್ಸಿಬಿ ನಡುವಿನ ಪಂದ್ಯದ ವೇಳೆ ಒಂದು ಕುತೂಹಲಕಾರಿ ಘಟನೆ ನಡೆಯಿತು.
ಗುಜರಾತ್ ನ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ವಿಷಯದಲ್ಲಿ ಥರ್ಡ್ ಅಂಪೈರ್ ನೋ ಬಾಲ್ ಕೊಟ್ಟಿದ್ದು ಮಾಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಗುಜರಾತ್ ಇನ್ನಿಂಗ್ಸ್ನಲ್ಲಿ 9ನೇ ಓವರ್ನಲ್ಲಿ ಶಹಬಾಜ್ ಅಹ್ಮದ್ ಬೌಲಿಂಗ್ ಗೆ ಬಂದರು. ಆಗಲೇ ಗಿಲ್ 24 ರನ್ ಗಳೊಂದಿಗೆ ಒಳ್ಳೆ ಟಚ್ ನಲ್ಲಿ ಕಾಣಿಸಿಕೊಂಡಿದ್ದರು.
ಆದರೆ, ನಾಲ್ಕನೇ ಎಸೆತದಲ್ಲಿ ಶಾಟ್ ಬಾರಿಸುವ ಯತ್ನದಲ್ಲಿ ಗಿಲ್ ಬಾಲ್ ಮಿಸ್ ಮಾಡಿದರು.
ಚೆಂಡು ಬದಲಿ ಕೀಪರ್ ಅನುಜ್ ರಾವತ್ ಕೈಗೆ ಹೋಗಿ ಬಿದ್ದಿತು. ಅನುಜ್ ಕ್ಯಾಚ್ಗಾಗಿ ಅಂಪೈರ್ಗೆ ಮನವಿ ಮಾಡಿದರು
ಫೀಲ್ಡ್ ಅಂಪೈರ್ ಕೂಡ ಔಟ್ ಎಂದು ಘೋಷಿಸಿದರು. ಆದರೆ ಗಿಲ್ ತಕ್ಷಣ ಡಿಆರ್ಎಸ್ ಕೇಳಿದರು.

ಥರ್ಡ್ ಅಂಪೈರ್ ಅಲ್ಟ್ರಾ ಎಡ್ಜ್ ಪರೀಕ್ಷೆ ನಡೆಸಿ ನಾಟೌಟ್ ನೀಡಿದರು.
ಅಲ್ಲದೇ ನೋ ಬಾಲ್ ಎಂದು ಘೋಷಿಸಿದರು. ಈ ನಿರ್ಧಾರ ಕೇಳಿದ ಆರ್ಸಿಬಿ ಆಟಗಾರರು ಶಾಕ್ ಆದರು.
ಸ್ವತಃ ವಿರಾಟ್ ಕೊಹ್ಲಿ ಫೀಲ್ಡ್ ಅಂಪೈರ್ ಬಳಿ ಬಂದು ನೋಬಲ್ ಯಾಕೆ ಎಂದು ಕೇಳಿದರು.
ಅಸಲಿಗೆ ಅಲ್ಲಿ ಹಾಗಿದ್ದು ಏನಂದರೇ ಅನುಜ್ ರಾವತ್ ಕ್ಯಾಚ್ ಪಡೆಯುವ ಮೊದಲೇ ಗ್ಲೌವ್ಸ್ ಸ್ಟಂಪ್ ಲೈನ್ ಗೂ ಮುಂದೆ ಬಂದಿದ್ದವು.
ಕ್ರಿಕೆಟ್ ಕಾನೂನಿನ ಪ್ರಕಾರ, ಬ್ಯಾಟ್ಸ್ಮನ್ ಆಡುವ ಮೊದಲೇ ಕೀಪರ್ ಉದ್ದೇಶಪೂರ್ವಕವಾಗಿ ಗ್ಲೌಸ್ ಗಳನ್ನು ಸ್ಟಂಪ್ ಬಳಿಗೆ ತೆಗೆದುಕೊಂಡು ಬಂದರೇ ಅದನ್ನ ನೋ ಬಾಲ್ ಎಂದು ಘೋಷಿಸಲಾಗುತ್ತದೆ.
ಇದೇ ನಿಯಮವನ್ನು ಅನುಜ್ ರಾವತ್ ಪ್ರಕರಣದಲ್ಲಿ ಮೂರನೇ ಅಂಪೈರ್ ಅಪ್ಲೇ ಮಾಡಿದರು.
ipl-2022-shubman-gill-drs anuj-rawat-no-ball








