IPL 2022 | ವಿರಾಟ್ ವಿಕೆಟ್ ಪಡೆದ ಚರಿತ್ರೆ ಸೃಷ್ಠಿಸಿದ ಕನ್ನಡಿಗ..!
ಕನ್ನಡಿಗ ಆಲ್ ರೌಂಡರ್ ಜಗದೀಶ ಸುಚಿತ್ 15 ನೇ ಆವೃತ್ತಿಯ ಐಪಿಎಲ್ ನಲ್ಲಿ ಚರಿತ್ರೆ ಸೃಷ್ಠಿಸಿದ್ದಾರೆ.
ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಸುಚಿತ್, ವಿರಾಟ್ ಕೊಹ್ಲಿ ಅವರನ್ನ ಮೊದಲ ಎಸೆತದಲ್ಲಿಯೇ ಔಟ್ ಮಾಡಿದರು.
ಆ ಮೂಲಕ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದ ಮೂರನೇ ಸ್ಪಿನ್ನರ್ ಎಂಬ ಸಾಧನೆ ಮಾಡಿದರು.
ಮುಂಬೈ ವಾಂಖೇಡೆ ಮೈದಾನದಲ್ಲಿ ಫಾಫ್ ಡುಪ್ಲಸಿಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು.

ವೇಗದ ಬೌಲರ್ ಗಳ ವಿರುದ್ಧ ಉತ್ತಮವಾಗಿ ಬ್ಯಾಟ್ ಬೀಸುವ ವಿರಾಟ್ ಕೊಹ್ಲಿ ಇತ್ತೀಚೆಗೆ ಸ್ಪಿನ್ನರ್ ಗಳಿಗೆ ಬಲಿಯಾಗುತ್ತಿದ್ದಾರೆ.
ಇದರ ಮಾಹಿತಿ ಇದ್ದ ಎಸ್ ಆರ್ ಹೆಚ್ ನಾಯಕ ಕೇನ್ ವಿಲಿಯಮ್ ಸನ್ ಎಡಗೈ ಸ್ಪಿನ್ನರ್ ಸುಚಿತ್ ಕೈಗೆ ಬಾಲ್ ನೀಡಿದರು.
ಕೇನ್ ವ್ಯೂಹದಂತೆ ಬೌಲಿಂಗ್ ಮಾಡಿದ ಸುಚಿತ್, ವಿರಾಟ್ ವಿಕೆಟ್ ಪಡೆಯುವಯಲ್ಲಿ ಯಶಸ್ವಿಯಾಗಿದ್ದಾರೆ.
ಆ ಮೂಲಕ ಐಪಿಎಲ್ ನಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡರು.
ಇದಕ್ಕೂ ಮುನ್ನಾ ಕೆವಿನ್ ಪೀಟರ್ ಸನ್ 2009ರಲ್ಲಿ ಡರ್ಬನ್ ನಲ್ಲಿ ಈ ಸಾಧನೆ ಮಾಡಿದ್ದರು.
ಇದಾದ ಬಳಿಕ ಮರ್ಲಾನ್ ಸ್ಯಾಮ್ಯುಯೆಲ್ಸ್ 2012 ರಲ್ಲಿ ಕಟಕ್ ನಲ್ಲಿ ಈ ಸಾಧನೆ ಮಾಡಿದ್ದಾರೆ.
ipl-2022-Spinners taking a wicket first ball of an IPL J Suchith Mumbai








