IPL 2022 | ಹೈದ್ರಾಬಾದ್ ತಂಡಕ್ಕೆ ಮಿಸ್ಟರ್ ಐಪಿಎಲ್ ರೈನಾ ipl-2022-SRH may-buy-suresh-raina saaksha tv
IPL-2022 ಮೆಗಾ ಹರಾಜು ಸಮೀಪಿಸುತ್ತಿರುವಂತೆಯೇ, ಯಾವ ಫ್ರಾಂಚೈಸ್ ಯಾವ ಆಟಗಾರನನ್ನು ಖರೀದಿಸುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಮೆಗಾ ಹರಾಜಿನಲ್ಲಿ 1214 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇದರ ಹೊರತಾಗಿ ಈ ವರ್ಷದಿಂದ ಕ್ಯಾಶ್ ರೀಚ್ ಲೀಗ್‌ಗೆ ಎರಡು ಹೊಸ ತಂಡಗಳು ಸೇರ್ಪಡೆಗೊಂಡಿರುವುದರಿಂದ ಹರಾಜು ಮತ್ತಷ್ಟು ರೋಚಕತೆ ಪಡೆದುಕೊಳ್ಳಲಿದೆ.
ಐಪಿಎಲ್-2022 ಮೆಗಾ ಹರಾಜು ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ. ಇದರ ಮಧ್ಯೆ ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.
ಅದೇನಂದರೇ ಮುಂದಿನ ಋತುವಿನ ಐಪಿಎಲ್ ನಲ್ಲಿ ಮಿಸ್ಟರ್ ಐಪಿಎಲ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಲಿದ್ದಾರಂತೆ.
ಹೇಗಾದರೂ ಮಾಡಿ ಮೆಗಾ ಹರಾಜಿನಲ್ಲಿ ರೈನಾ ಅವರನ್ನು ವಶಪಡಿಸಿಕೊಳ್ಳಬೇಕೆಂದು ಸನ್‌ರೈಸರ್ಸ್ ಮ್ಯಾನೇಜ್‌ಮೆಂಟ್ ಪ್ಲಾನ್ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ.
ಸುರೇಶ್ ರೈನಾ ಐಪಿಎಲ್ ಆರಂಭವಾದಾಗಿನಿಂದಲೂ ಎರಡು ವರ್ಷ ಹೊರತುಪಡಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.
ಆದರೆ, ಐಪಿಎಲ್-2022 ಮೆಗಾ ಹರಾಜಿಗೂ ಮುನ್ನ ಸಿಎಸ್‌ಕೆ ಫ್ರಾಂಚೈಸಿ ರೈನಾ ಅವರನ್ನು ರಿಟೈನ್ಡ್ ಮಾಡಿಕೊಂಡಿಲ್ಲ. ಹೀಗಾಗಿ ಅವರು ಮೆಗಾ ಹರಾಜಿಗೆ ಬರಲಿದ್ದು, ಯಾರ ಪಾಲಾಗಲಿದ್ದಾರೆ ಅನ್ನೋದು ಸದ್ಯದ ಕುತೂಹಲವಾಗಿದೆ.









