Suresh raina | ಬೇರೆ ಲೀಗ್ ಗಳಲ್ಲಿ ಆಡಲು ಚಾನ್ಸ್ ಕೊಡಿ ಪ್ಲೀಸ್..
ಐಪಿಎಲ್ ಮೆಗಾ ಹರಾಜಿನಲ್ಲಿ ಅನ್ ಸೋಲ್ಡ್ ಆದ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಸುರೇಶ್ ರೈನಾ, ಬಿಸಿಸಿಐಗೆ ವಿಶೇಷವಾದ ಮನವಿವೊಂದನ್ನು ಮಾಡಿಕೊಂಡಿದ್ದಾರೆ. ಐಪಿಎಲ್ ನಲ್ಲಿ ಆಡಲು ಅವಕಾಶ ಸಿಗದ ಭಾರತದ ಆಟಗಾರರಿಗೆ ಇತರೆ ದೇಶಗಳಲ್ಲಿ ನಡೆಯುವ ಲೀಗ್ ನಲ್ಲಿ ಆಡಲು ಅವಕಾಶ ಕೊಡಿ ಎಂದು ರೈನಾ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ರೈನಾ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲಿಲ್ಲ. ಹಿನ್ನಲೆಯಲ್ಲಿ ಬೇರೆ ದೇಶಗಳಲ್ಲಿ ನಡೆಯುವ ಟಿ 20 ಲೀಗ್ ಗಳಲ್ಲಿ ಆಡಲು ಅವಕಾಶ ನೀಡುವಂತೆ ಬಿಸಿಸಿಗೆ ಮನವಿ ಮಾಡಿಕೊಂಡಿದ್ದಾರೆ.
BCCI ನಿಯಮಗಳ ಪ್ರಕಾರ, ಮಂಡಳಿಯ ಗುತ್ತಿಗೆ ಹೊಂದಿರುವ ಪುರುಷ ಕ್ರಿಕೆಟಿಗರು ಬಿಗ್ ಬ್ಯಾಷ್ ಲೀಗ್ (BBL) ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್ (CPL) ನಂತಹ ವಿದೇಶಿ ಲೀಗ್ಗಳಲ್ಲಿ ಆಡುವುದು ನಿಷಿದ್ಧವಾಗಿದೆ.
ಭಾರತದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಇತರ ದೇಶಗಳ ಲೀಗ್ಗಳಲ್ಲಿ ಆಡಲು ಅವಕಾಶ ನೀಡಲಾಗಿದೆ. ಆದ್ರೆ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ರೈನಾ, ಐಪಿಎಲ್ ಜೊತೆಗೆ ದೇಶೀಯ ಟೂರ್ನಿಗಳಲ್ಲಿ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ವಿದೇಶಿ ಲೀಗ್ ಗಳಲ್ಲಿ ಆಡುವ ಅವಕಾಶ ಇಲ್ಲದಂತಾಗಿದೆ.
ಅಂದಹಾಗೆ ಈ ಹಿಂದೆಯೂ ರೈನಾ ಈ ವಾದವನ್ನು ಬಿಸಿಸಿಐ ಮುಂದೆ ತಂದಿದ್ದರು. ಆದ್ರೆ ಇದಕ್ಕೆ ಬಿಸಿಸಿಐ ನೋ ಎಂದಿತ್ತು. ಇದೀಗ ರೈನಾ ಮತ್ತೆ ಈ ವಾದವನ್ನು ಬಿಸಿಸಿಐ ಅಂಗಳಕ್ಕೆ ಎಸೆದಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇತ್ತ ಸುರೇಶ್ ರೈನಾ ಮನವಿ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ipl-2022-suresh-raina-special request to bcci saaksha tv









