ಕೆಟ್ಟ ದಾಖಲೆ ಪಟ್ಟಿಯಲ್ಲಿ ಪರ್ಪಲ್ ಕ್ಯಾಪ್ ಹೋಲ್ಡರ್ಸ್..!
ಕ್ಯಾಶ್ ರಿಚ್ ಲೀಗ್ ಐಪಿಎಲ್ ಎಂದರೆ ಕ್ರಿಕೆಟ್ ಪ್ರೇಮಿಗಳಿಗೆ ಎಲ್ಲಿಲ್ಲದ ಉತ್ಸಾಹ. ಕ್ರಿಕೆಟಿಗರು ಬೌಂಡರಿ, ಸಿಕ್ಸರ್ ಬಾರಿಸುತ್ತಿದ್ದರೆ ಕ್ರೀಡಾಂಗಣ ಶಿಳ್ಳೆ, ಚೆಪ್ಪಾಳೆಗಳೊಂದಿಗೆ ರಿ ಸೌಂಡ್ ಬರುತ್ತದೆ. ಬ್ಯಾಟರ್ ಗಳು ಅಬ್ಬರಿಸುತ್ತಿದ್ದರೇ ಬಲಿಪಶುವಾಗೋದು ಬೌಲರ್ ಗಳು.
ವಿಶೇಷ ಏನಂದರೇ ಈ ಟೂರ್ನಿಯಲ್ಲಿ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದ್ರೂ ಹೆಚ್ಚು ರನ್ ಗಳನ್ನು ಬಿಟ್ಟುಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ 2022ರಲ್ಲಿ ಅತ್ಯಧಿಕ ಸಿಕ್ಸರ್ ಗಳನ್ನು ಕೊಟ್ಟ ಬೌಲರ್ ಗಳ ಪಟ್ಟಿ ಹೀಗಿದೆ.
1.ಮೊಹಮ್ಮದ್ ಸಿರಾಜ್
ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭಕ್ಕೂ ಮುನ್ನಾಆರ್ ಸಿಬಿ ಫ್ರಾಂಚೈಸಿ ಸಿರಾಜ್ ಅವರನ್ನ ರಿಟೈನ್ಡ್ ಮಾಡಿಕೊಂಡಿತ್ತು. ಅವರು ಐಪಿಎಲ್-2022 ರಲ್ಲಿ 15 ಪಂದ್ಯಗಳನ್ನು ಆಡಿದ್ದು, 514 ರನ್ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅದರಲ್ಲಿ 31 ಸಿಕ್ಸರ್ ಗಳು ಸೇರಿವೆ. ಈ ಮೂಲಕ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಿಟ್ಟುಕೊಟ್ಟ ಬೌಲರ್ ಎಂಬ ಕೆಟ್ಟ ದಾಖಲೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
- ವನಿಂದು ಹಸರಂಗ
ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗ ಈ ಬಾರಿ ಐಪಿಎಲ್ ನಲ್ಲಿ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಎಲ್ಲರ ಗಮನ ಸೆಳೆದರು. ಅಲ್ಲದೇ ಈ ಆವೃತ್ತಿಯಲ್ಲಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದಾರೆ. ಆದ್ರೂ 180 ರನ್ ಗಳನ್ನು ಕೇವಲ 30 ಸಿಕ್ಸರ್ ಗಳ ಮೂಲಕ ಬಿಟ್ಟುಕೊಟ್ಟಿದ್ದಾರೆ. ಈ ಸೀರಿಸ್ ನಲ್ಲಿ ಅವರು 430 ರನ್ ನೀಡಿದ್ದಾರೆ.
![ipl-2022-top-5-bowlers-who-conceded-most-sixes saaksha tv](http://saakshatv.com/wp-content/uploads/2022/06/chahal-300x186.jpg)
- ಯಜುವೇಂದ್ರ ಚಹಾಲ್
ಯಜುವೇಂದ್ರ ಚಹಾಲ್ ಐಪಿಎಲ್-2022 ರಲ್ಲಿ ಪರ್ಪಲ್ ಕ್ಯಾಪ್ ವಿಜೇತ ಬೌಲರ್. ಈ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿರುವ ಟೀಂ ಇಂಡಿಯಾದ ಸ್ಪಿನ್ನರ್ ಒಟ್ಟು 27 ವಿಕೆಟ್ ಪಡೆದಿದ್ದಾರೆ. ಈ ಸೀರಿಸ್ ನಲ್ಲಿ ಅವರು 527 ರನ್ ಗಳನ್ನು ನೀಡಿದ್ದಾರೆ. ಇದರಲ್ಲಿ 27 ಸಿಕ್ಸರ್ ಗಳನ್ನು ಬಿಟ್ಟುಕೊಟ್ಟಿದ್ದಾರೆ.
- ಶಾರ್ದೂಲ್ ಠಾಕೂರ್
ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಶಾರ್ದೂಲ್ ಠಾಕೂರ್ ಈ ಋತುವಿನಲ್ಲಿ 14 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 473 ರನ್ ಬಿಟ್ಟುಕೊಟ್ಟು 15 ವಿಕೆಟ್ ಪಡೆದಿದ್ದಾರೆ. ಅದರಲ್ಲಿ 23 ಸಿಕ್ಸರ್ಗಳು ಸೇರಿವೆ. ಮೆಗಾ ಹರಾಜಿನಲ್ಲಿ ಶರ್ದೂಲ್ ಠಾಕೂರ್ ಅವರನ್ನ 10.75 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಖರೀಸಿದಿಸಿದೆ.
- ಕುಲದೀಪ್ ಯಾದವ್
ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಕುಲದೀಪ್ ಯಾದವ್ ಪರ್ಪಲ್ ಕ್ಯಾಪ್ಗಾಗಿ ಚಾಹಲ್ ಅವರೊಂದಿಗೆ ಪೈಪೋಟಿ ನಡೆಸಿದ್ದರು. ಚೈನಾಮನ್ ಸ್ಪಿನ್ನರ್ ಈ ಋತುವಿನಲ್ಲಿ 14 ಪಂದ್ಯಗಳಲ್ಲಿ 21 ವಿಕೆಟ್ ಪಡೆದಿದ್ದಾರೆ. ಒಟ್ಟು 419 ರನ್ ನೀಡಿದ್ದಾರೆ. ಇದರಲ್ಲಿ 22 ಸಿಕ್ಸರ್ ಗಳಿವೆ.