IPL 2022 : ಸೋತಿದ್ದೇವೆ.. ಮುಂದಿನ ಪಂದ್ಯದಲ್ಲಿ ನಾವು ಏನೆಂದು ತೋರಿಸುತ್ತೇವೆ
ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 91 ರನ್ ಗಳ ಹೀನಾಯ ಸೋಲು ಕಂಡಿದೆ. ದೆಹಲಿ ಸೋಲಿನ ಬಗ್ಗೆ ಮುಖ್ಯ ಕೋಚ್ ರಿಕಿ ಪ್ಯಾಟಿಂಗ್ ಪ್ರತಿಕ್ರಿಯಿಸಿದ್ದಾರೆ.
ಸಿಎಸ್‌ಕೆ ವಿರುದ್ಧದ ಭಾರಿ ಅಂತರದ ಸೋಲು ತಂಡದ ರನ್ ರೇಟ್ ಗೆ ಧಕ್ಕೆ ತಂದಿದೆ ಎಂದು ಪ್ಯಾಟಿಂಗ್ ಹೇಳಿದ್ದಾರೆ.
“ನಾವು ಈ ಪಂದ್ಯವನ್ನು 91 ರನ್‌ಗಳಿಂದ ಸೋಲು ಕಂಡಿದ್ದೇವೆ. ಈ ಸೋಲು ನಮ್ಮ ರನ್ ರೇಟ್ ಮೇಲೆ ಭಾರಿ ಪರಿಣಾಮ ಬೀರಿದೆ.
ನಮ್ಮ ಮುಂದಿನ ಪಂದ್ಯದಲ್ಲಿ ನಾವು ಬಲವಾಗಿ ಪುಟಿದೇಳಬೇಕಾಗಿದೆ.

ಮುಂದಿನ ಮೂರು ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್ ತಲುಪುವ ಸಾಧ್ಯತೆಗಳಿವೆ. ಪ್ಲೇಆಫ್ ತಲುಪಲು ಎಂಟು ಪಂದ್ಯಗಳನ್ನು ಗೆಲ್ಲಬೇಕಾಗಿದೆ, ಆದರೆ ದೊಡ್ಡ ಅಂತರದ ಗೆಲುವು ನಮ್ಮ ತಂಡದ ರನ್ ರೇಟ್ ಸುಧಾರಿಸುವಂತೆ ಮಾಡುತ್ತದೆ.
ಅದೇ ರೀತಿ ನಾನು ಮೈದಾನದಲ್ಲಿ ನಾಯಕ ಪಂತ್ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ.
ಒತ್ತಡದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಯಾವುದೇ ನಾಯಕನಿಗೆ ಸುಲಭವಲ್ಲ.
ನಾಯಕ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ತಂಡದ ಗೆಲುವಿಗಾಗಿಯೇ ಆಗಿರುತ್ತದೆ ಎಂದಿದ್ದಾರೆ ರಿಕಿ ಪಾಂಟಿಂಗ್. ipl-2022-we bounce-back-strongly-says-ricky-ponting








