IPL 2022 | ಹಾರ್ದಿಕ್ ಅತ್ಯುತ್ತಮ ನಾಯಕ
ಗುಜರಾತ್ ಟೈಟಾನ್ಸ್ ಐಪಿಎಲ್-2022ರ ಚಾಂಪಿಯನ್ ಆಗಿರುವುದು ಗೊತ್ತಿರುವ ವಿಚಾರವೇ.
ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಚೊಚ್ಚಲ ಸೀಸನ್ ನಲ್ಲಿಯೇ ತಂಡವನ್ನು ಚಾಂಪಿಯನ್ ಮಾಡಿದ್ದಕ್ಕಾಗಿ ಅವರನ್ನ ಮಾಜಿ ಕ್ರಿಕೆಟಿಗರು ಹೊಗಳುತ್ತಿದ್ದಾರೆ. ಅಲ್ಲದೆ ಹಾರ್ದಿಕ್ ಈ ಋತುವಿನಲ್ಲಿ ಆಲ್ ರೌಂಡರ್ ಆಗಿಯೂ ಮಿಂಚು ಹರಿಸಿದ್ದಾರೆ.
ಈ ನಡುವೆ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಯುವ ಆಟಗಾರ ರವಿ ಸಾಯಿ ಕಿಶೋರ್ ಮಾತನಾಡಿದ್ದು, ಮೆಚ್ಚುಗೆ ಸುರಿಮಳೆಗೈದಿದ್ದಾರೆ. ಅಲ್ಲದೇ ಅವರನ್ನ ಧೋನಿ ಜೂನಿಯರ್ ವರ್ಷನ್ ಎಂದು ಹೊಗಳಿದ್ದಾರೆ.

ಧೋನಿ ಮತ್ತು ಹಾರ್ದಿಕ್ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಧೋನಿಯಂತೆ ಹಾರ್ದಿಕ್ ಕೂಡ ತಮ್ಮ ತಂಡದಲ್ಲಿರುವ ಆಟಗಾರರನ್ನು ಬೆಂಬಲಿಸುತ್ತಾರೆ ಮತ್ತು ಅವರಿಂದ ಅತ್ಯುತ್ತಮ ಪ್ರದರ್ಶನ ಹೊರತರಲು ಶ್ರಮಿಸುತ್ತಾರೆ.
ಹಾರ್ದಿಕ್ ಕೂಡ ಧೋನಿಯಂತೆ ಶ್ರೇಷ್ಠ ನಾಯಕನಾಗಲಿದ್ದಾರೆ. ಹಾಗಾಗಿ ಹಾರ್ದಿಕ್ ಅವರನ್ನು ಧೋನಿಯ ಜೂನಿಯರ್ ವರ್ಷನ್ ಎಂದು ಬಣ್ಣಿಸುತ್ತೇನೆ. ಇದು ನನಗೆ ಉತ್ತಮ ಸೀಸನ್ ಎಂದಿದ್ದಾರೆ.








