IPL 2022 | ಐಪಿಎಲ್ ನಲ್ಲಿ ಚಹಾಲ್ ಹೊಸ ಇತಿಹಾಸ
ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಸ್ಪಿನ್ನರ್ ಯಜ್ವೇಂದ್ರ ಚಹಾಲ್ ಐಪಿಎಲ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಒಂದು ಐಪಿಎಲ್ ಋತುವಿನಲ್ಲಿ ಸ್ಪಿನ್ನರ್ ಆಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಅಪರೂಪದ ಸಾಧನೆ ಮಾಡಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡುವ ಮೂಲಕ ಚಹಾಲ್ ಈ ಋತುವಿನ 27ನೇ ವಿಕೆಟ್ ಪಡೆದರು.
ಇದರೊಂದಿಗೆ ಚಹಾಲ್ 17 ಪಂದ್ಯಗಳಲ್ಲಿ 7.75 ಎಕಾನಮಿ ರೇಟ್ ನಲ್ಲಿ 27 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡರು.

ಇದಲ್ಲದೇ ಚಹಾಲ್, ಇಮ್ರಾನ್ ತಾಹಿರ್ (26 ವಿಕೆಟ್) ದಾಖಲೆ ಮುರಿದು ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ. ಇದಕ್ಕೂ ಮುನ್ನ 2019ರಲ್ಲಿ ಸಿಎಸ್‌ಕೆ ಪರ ಇಮ್ರಾನ್ ತಾಹಿರ್ 26 ವಿಕೆಟ್ ಪಡೆದಿದ್ದರು.
ಐಪಿಎಲ್ 2022 ರ ಋತುವಿನಲ್ಲಿ ಆರ್‌ಸಿಬಿಯನ್ನು ಪ್ರತಿನಿಧಿಸುತ್ತಿರುವ ಲಂಕಾ ಸ್ಪಿನ್ನರ್ ವನಿಂದು ಹಸರಂಗಾ ಅವರು 26 ವಿಕೆಟ್‌ಗಳೊಂದಿಗೆ ತಾಹಿರ್ ಅವರೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.
2012ರಲ್ಲಿ ಕೆಕೆಆರ್ ಪರ ಸ್ಪಿನ್ನರ್ ಆಗಿ ಸುನಿಲ್ ನರೈನ್ 24 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದರು. 2013ರಲ್ಲಿ ಮುಂಬೈ ಇಂಡಿಯನ್ಸ್ ಪರ ಹರ್ಭಜನ್ 24 ವಿಕೆಟ್ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.








