IPL-2022 | ಸನ್ ರೈಸರ್ಸ್ ತಂಡಕ್ಕೆ ಚಾಹಲ್ ipl-2022-yuzvendra-chahal-play for SRH saaksha tv
IPL-2022 ಮೆಗಾ ಹರಾಜಿಗೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಹರಾಜು ನಡೆಸಲು ಬಿಸಿಸಿಐ ಎಲ್ಲಾ ರೀತಿಯಲ್ಲೂ ರೆಡಿ ಮಾಡಿಕೊಳ್ಳುತ್ತಿದೆ.
ಐಪಿಎಲ್ ನ ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ರಿಟೈನ್ಡ್ ಆಟಗಾರರ ಪಟ್ಟಿಯನ್ನು ರಿಲೀಸ್ ಮಾಡಿವೆ. ಇತ್ತ ಹೊಸ ಪ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್, ತಂಡಗಳು ತಮಗೆ ಬೇಕಾದ ಮೂವರು ಆಟಗಾರರ ಹೆಸರನ್ನು ಬಿಸಿಸಿಐಗೆ ನೀಡಿದೆ.
ಈ ಮಧ್ಯೆ ಸನ್ ರೈಸರ್ಸ್ ಫ್ರಾಂಚೈಸಿ ಟೀಂ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರ ಖರೀದಿಗೆ ಆಸಕ್ತಿ ತೋರಿದೆ ಎಂದು ವರದಿಯಾಗಿದೆ.
ಮೆಗಾ ಹರಾಜು ಹಿನ್ನೆಲೆಯಲ್ಲಿ ಎಸ್ ಆರ್ ಹೆಚ್ ಫ್ರಾಂಚೈಸಿ, ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ರನ್ನು ಉಳಿಸಿಕೊಂಡಿಲ್ಲ.
ಇದರೊಂದಿಗೆ ರಶೀದ್ ಅವರನ್ನು ಅಹಮದಾಬಾದ್ ಫ್ರಾಂಚೈಸಿ ಖರೀದಿಸಿದೆ. ಹೀಗಾಗಿ ಅವರ ಸ್ಥಾನ ತುಂಬಲು ಸನ್ ರೈಸರ್ಸ್ ಮ್ಯಾನೇಜ್ ಮೆಂಟ್ ಭಾರತದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರತ್ತ ಮುಖ ಮಾಡಿದೆ ಎಂದು ಹೇಳಲಾಗುತ್ತಿದೆ
ಸನ್ ರೈಸರ್ಸ್ ತಂಡವು ಈಗಾಗಲೇ ಚಹಾಲ್ ಜೊತೆ ಮಾತುಕತೆ ನಡೆಸಿದೆಯಂತೆ. ಇತ್ತ IPL-2022 ಮೆಗಾ ಹರಾಜು ಹಿನ್ನೆಲೆಯಲ್ಲಿ RCB ಚಾಹಲ್ ಅವರನ್ನು ಉಳಿಸಿಕೊಂಡಿರಲಿಲ್ಲ.
ಇನ್ನು ಕಳೆದ ಕೆಲ ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಡಿದ್ದ ಚಾಹಲ್, 6 ಕೋಟಿ ಸಂಭಾವನೆ ಪಡೆದಿದ್ದಾರೆ.
ಈ ಬಾರಿಯ ಹರಾಜಿನಲ್ಲಿ ಚಾಹಲ್ ಗಾಗಿ ಸಾಕಷ್ಟು ಫ್ರಾಂಚೈಸಿಗಳು ಪೈಪೋಟಿ ನಡೆಸುವ ಸಾಧ್ಯತೆಗಳಿವೆ ಎಂದು ಕ್ರಿಕೆಟ್ ಪಂಡಿತರು ಅಂದಾಜಿಸುತ್ತಿದ್ದಾರೆ. ಅಲ್ಲದೇ ಚಹಾಲ್ ಗಾಗಿ 5 ಕೋಟಿಯಿಂದ 10 ಕೋಟಿ ರುಪಾಯಿ ವರೆಗೂ ಬಿಡ್ ಮಾಡಬಹುದು ಎಂದು ಹೇಳಲಾಗುತ್ತಿದೆ.