IPL 2023 Auction: ಹರಾಜಿನಲ್ಲಿ ನೊಂದಾಯಿಸಿಕೊಂಡ 991 ಆಟಗಾರರು…
ಇಂಡಿಯನ್ ಪ್ರೀಮಿಯರ್ ಲೀಗ್ 2023 ಗಾಗಿ ಸಿದ್ಧತೆಗಳು ಪ್ರಾರಂಭವಾಗಿವೆ. ಈ ಋತುವಿಗಾಗಿ 23 ಡಿಸೆಂಬರ್ 2022 ರಂದು ಕೊಚ್ಚಿಯಲ್ಲಿ ಹರಾಜು ನಡೆಯಲಿದೆ. ಐಪಿಎಲ್ 2023 ಹರಾಜಿಗೆ ಒಟ್ಟು 991 ಆಟಗಾರರು ನೋಂದಾಯಿಸಿಕೊಂಡಿದ್ದಾರೆ.
ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಹೆಸರನ್ನ ಐಪಿಎಲ್ ಬಹಿರಂಗಪಡಿಸಿದೆ. ಭಾರತದ 714 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಐಪಿಎಲ್ ತಿಳಿಸಿದೆ. ವಿದೇಶದ 277 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ 185 ಕ್ಯಾಪ್ಡ್ ಆಟಗಾರರಿದ್ದಾರೆ. 786 ಅನ್ಕ್ಯಾಪ್ಡ್ ಆಟಗಾರರಿದ್ದಾರೆ. ಇದೇ ಸಮಯದಲ್ಲಿ, 20 ಆಟಗಾರರು ರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ.
ಭಾರತದ ಕ್ಯಾಪ್ಡ್ ಆಟಗಾರ ಸಂಖ್ಯೆ 19. ಇಂಡಿಯನ್ ಪ್ರೀಮಿಯರ್ ಲೀಗ್ನ ಕೊನೆಯ ಋತುವಿನ ಭಾಗವಾಗಿದ್ದ 91 ಅನ್ಕ್ಯಾಪ್ಡ್ ಭಾರತೀಯ ಆಟಗಾರರು ಹರಾಜಿನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾ 57 ಆಟಗಾರರು, ದಕ್ಷಿಣ ಆಫ್ರಿಕಾದ 52 ಆಟಗಾರರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಅಫ್ಘಾನಿಸ್ತಾನದ 14, ಬಾಂಗ್ಲಾದೇಶದ 6, ಇಂಗ್ಲೆಂಡ್ನ 31, ಐರ್ಲೆಂಡ್ನಿಂದ 8, ನಮೀಬಿಯಾದಿಂದ 5, ನೆದರ್ಲ್ಯಾಂಡ್ನಿಂದ 7, ನ್ಯೂಜಿಲೆಂಡ್ನಿಂದ 27, ಸ್ಕಾಟ್ಲೆಂಡ್ನಿಂದ 2, ಶ್ರೀಲಂಕಾದಿಂದ 23, ಯುಎಇಯಿಂದ 6, ಜಿಂಬಾಬ್ವೆಯಿಂದ 6 ಮತ್ತು 33 ವೆಸ್ಟ್ ಇಂಡೀಸ್ ಆಟಗಾರರು IPL ಗೆ ನೊಂದಾಯಿಸಿಕೊಂಡಿದ್ದಾರೆ.
IPL 2023 Auction: 991 players registered for auction…








