IPL 2023 Auction : ಮಿನಿ ಹರಾಜಿಗೂ ಮುನ್ನ ಹೆಸರು ಹಿಂಪಡೆದ ವಿದೇಶಿ ಆಟಗಾರರು..
ಐಪಿಎಲ್ ಮಿನಿ ಹರಾಜಿಗೆ ಕೊಚ್ಚಿಯಲ್ಲಿ ಕ್ಷಣಗಣನೆ ಆರಂಭವಾಗಿದೆ. ಐಪಿಎಲ್‌ನ 10 ತಂಡಗಳು 206.5 ಕೋಟಿ ರೂ ಯನ್ನ ಬಿಡ್ ಮಾಡಲಿವೆ. ಅದರಲ್ಲಿ ಹೈದರಾಬಾದ್ ಗರಿಷ್ಠ 42.25 ಕೋಟಿ ಹಣವನ್ನ ಹೊಂದಿದೆ. 10 ತಂಡಗಳಿಂದ 87 ಆಟಗಾರರನ್ನ ಖರೀದಿಸಬೇಕಾಗಿದ್ದು, 405 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಐಪಿಎಲ್ ಮಿನಿ ಹರಾಜಿನಿಂದ ಬಿಗ್ ಅಪ್ಡೇಟ್.
1. IPL ಹರಾಜಿನಿಂದ ಹಿಂದೆ ಸರಿದ ವಿದೇಶಿ ಆಟಗಾರರು…
ಹರಾಜಿಗೂ ಒಂದು ದಿನ ಮೊದಲು, 18 ವರ್ಷದ ಇಂಗ್ಲೆಂಡ್ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಬಾನ್ ಮೆಕ್‌ಡರ್ಮಾಟ್ ಹರಾಜಿಗೂ ಮನ್ನ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ.
2. ಪೂರ್ತಿ ಸೀಸನ್ ಆಡಲಿದ್ದಾರೆ ಇಂಗ್ಲಿಷ್-ಆಸ್ಟ್ರೇಲಿಯನ್ ಆಟಗಾರರು.
ಬೆನ್ ಸ್ಟೋಕ್ಸ್, ಕ್ಯಾಮರೂನ್ ಗ್ರೀನ್ ಮತ್ತು ಸ್ಯಾಮ್ ಕರ್ರಾನ್ ಅವರಂತಹ ಟಾಪ್ ಇಂಗ್ಲಿಷ್ ಮತ್ತು ಆಸ್ಟ್ರೇಲಿಯಾದ ಆಟಗಾರರು ಸಂಪೂರ್ಣ IPL 2023 ಸೀಸನ್‌ಗೆ ಲಭ್ಯವಿರಲಿದ್ದಾರೆ.
ಐಪಿಎಲ್ ತಂಡಗಳಿಗೆ ಕಳುಹಿಸಿದ ಪತ್ರದಲ್ಲಿ ಬಿಸಿಸಿಐ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳು ಇಡೀ ಐಪಿಎಲ್ ಸೀಸನ್ ಗೆ ತಮ್ಮ ಆಟಗಾರರ ಲಭ್ಯತೆಯನ್ನು ಖಚಿತಪಡಿಸಿವೆ ಎಂದು ಹೇಳಿದೆ.
IPL 2023 Auction: Foreign players whose names were withdrawn before the mini auction..








