IPL – ಮುಂದಿನ ತಿಂಗಳು 23 ರಂದು ಐಪಿಎಲ್ ಹರಾಜು
ನವದೆಹಲಿ : ಮುಂಬರುವ ಇಂಡಿಯನ್ ಪ್ರಿಮಿಯರ್ ಲೀಗ್ ಟಿ 20 ಕ್ರಿಕೆಟ್ ಟೂರ್ನಿಗೆ ಸಂಬಂಧಿಸಿದಂತೆ ಮಿನಿ ಹರಾಜಿಗೆ ಕೇರಳದ ಕೊಚ್ಚಿ ನಗರದಲ್ಲಿ ವೇದಿಕೆ ಸಜ್ಜಾಗಿದೆ.
ಡಿಸೆಂಬರ್ 23 ರಂದು ಈ ಮಿನಿ ಹರಾಜು ನಡೆಯಲಿದೆ.
ಈ ಬಾರಿ ಮೆಗಾ ಹರಾಜಲ್ಲದೇ ಮಿನಿ ಹರಾಜು ನಡೆಯಲಿದೆ.
ಈ ತಿಂಗಳ 15ರೊಳಗೆ ತಂಡಗಳು ತಾವು ಬಿಟ್ಟುಕೊಡಲಿಚ್ಚಿಸುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಬೇಕಾಗಿದೆ.
ಇದಕ್ಕೂ ಮೊದಲು ಇಸ್ತಾಂಬುಲ್ ನಗರ ಸೇರಿದಂತೆ ಬೆಂಗಳೂರು, ನ್ಯೂಡೆಲ್ಲಿ, ಮುಂಬೈ, ಹೈದರಾಬಾದ್ ನಲ್ಲಿ ಹರಾಜು ನಡೆಸಲು ಬಿಸಿಸಿಐ ನಿರ್ಧರಿಸಿತ್ತು.
ಕೊನೆಗೆ ಕೊಚ್ಚಿನಲ್ಲಿ ಮಿನಿ ಹರಾಜಿಗೆ ವೇದಿಕೆ ಫಿಕ್ಸ್ ಆಗಿದೆ.