ಅಸಂಭವನೀಯ ಗೆಲುವುಗಳನ್ನು ಕಂಡಿರುವ ಆರ್ಸಿಬಿ ಮತ್ತು ಡೆಲ್ಲಿ ತಂಡಗಳು ಇಂದು ಮುಖಾಮುಖಿಯಾಗಲಿದ್ದು ಗೆಲುವಿಗಾಗಿ ಮಹಾ ಹೋರಾಟವನ್ನೆ ಮಾಡಲಿವೆ. ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳು ಗುಣಮಟ್ಟದ ಬ್ಯಾಟಿಂಗ್ ಪ್ರದರ್ಶಿಸಲಿವೆ. ಆರ್ಸಿಬಿ ತಂಡ ಅಂಕಪಟ್ಟಿಯಲ್ಲಿ ಡೆಲ್ಲಿಗಿಂತ ಉತ್ತಮ ಸ್ಥಾನದಲ್ಲಿದೆ.
ಆರ್ಸಿಬಿಗೆ ಕೊಹ್ಲಿ ಬಲ
ವಿರಾಟ್ ಕೊಹ್ಲಿ ಆಡುತ್ತಿರುವುದರಿಂದ ಕ್ರೀಡಾಂಗಣ `ಭರ್ತಿಯಾಗಲಿದೆ. ಡೆಲ್ಲಿ ಕದನಕ್ಕೆ ವಿರಾಟ್ ಕೊಹ್ಲಿ ನೆಟ್ಸ್ನಲ್ಲಿ ಹೆಚ್ಚಿನ ಹೊತ್ತು ಅಭ್ಯಾಸ ಮಾಡಿದ್ದಾರೆ. ಅರ್ಸಿಬಿಯಿಂದ ಅಚ್ಚರಿ ಕರೆ ಪಡೆದಿರುವ ಕೇದಾರ್ ಜಾಧವ್ ತಂಡದ ಮಧ್ಯಮ ಕ್ರಮಾಂಕದ ಸಮಸ್ಯೆಯನ್ನು ಬಗೆಹರಿಸಬೇಕಿದೆ.
ಕಠಿಣವಾದ ಲಖನೌ ಪಿಚ್ನಲ್ಲಿ ಆರ್ಸಿಬಿ ಬೌಲರ್ಗಳು ಅಮೋಘ ಪ್ರದರ್ಶನ ನೀಡಿದರು. ವೇಗಿ ಮೊಹ್ಮದ್ ಸಿರಾಜ್ ತಂಡದ ಸಹ ಬೌಲರ್ಗಳಾದ ಜೋಶ್ ಹೇಜ್ಲ್ವುಡ್ ಸಾಥ್ ನೀಡಬೇಕಿದೆ. ಈ ಇಬ್ಬರು ಬೌಲರ್ಗಳು ಹೊಸ ಚೆಂಡಿನಲ್ಲಿ ದೊಡ್ಡ ತಿರುವು ನೀಡಿದ್ದಾರೆ.
ತಂಡದ ಸ್ಪಿನ್ನರ್ಗಳಾದ ಕರಣ್ ಶರ್ಮಾ ಹಾಗೂ ವನಿಂದು ಹಸರಂಗಗೆ ಫಿಚ್ ನೆರವು ನೀಡಲಿದ್ದು ಕಠಿಣ ಸವಾಲನ್ನು ಎದುರಿಸಲಿದ್ದಾರೆ.
ಡೆಲ್ಲಿ ತಂಡ ಟೂರ್ನಿ ಆರಂಭದ ಕಹಿಯನ್ನು ಮರೆತು ಗುಜರಾತ್ ಟೈಟಾನ್ಸ್ ವಿರುದ್ಧ ನೀಡಿದ ಪ್ರದರ್ಶನವನ್ನು ಮುಂದುವರೆಸಬೇಕಿದೆ.
ಡೆಲ್ಲಿ ಪರ ಖಲೀಲ್ ಅಹ್ಮದ್ ಮತ್ತು ಇಶಾಂತ್ ಶರ್ಮಾ ಮೂರು ವಾರಗಳ ಬಳಿಕ ತಂಡದಲ್ಲಿ ಆಡುತ್ತಿದ್ದು ತಂಡದ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಡೆಲ್ಲಿ ತಂಡಕ್ಕೆ ನೈತಿಕ ಸ್ಥೈರ್ಯ ಹೆಚ್ಚಿದ್ದು ಆರ್ಸಿಬಿ ವಿರುದ್ಧ ಒಳ್ಳೆಯ ಬ್ಯಾಟಿಂಗ್ ಮಾಡಬೇಕಿದೆ.
ನಾಯಕ ಡೇವಿಡ್ ವಾರ್ನರ್ಗೆ ತಂಡದ ಬ್ಯಾಟಿಂಗ್ ದೊಡ್ಡ ತಲೆ ನೋವಾಗಿದೆ. ಕಳೆದ ಪಂದ್ಯದಲ್ಲಿ ಅಮನ್ ಹಖಿಮ್ ಮತ್ತು ರಿಪಲ್ ಪಟೇಲ್ ಬ್ಯಾಟಿಂಗ್ಗೂ ಮುನ್ನ ಭಾರತೀಯ ಬ್ಯಾಟರ್ಗಳ ಪ್ರದರ್ಶನ ಕಳಪೆಯಾಗಿತ್ತು.
ಅಗ್ರ ಕ್ರಮಾಂಕದಲ್ಲಿ ಆಡುತ್ತಿರುವ ಫಿಲ್ ಸಾಲ್ಟ್ ನಾಲ್ಕು ಅವಕಾಶಗಳನ್ನು ಕೈಚೆಲ್ಲಿದ್ದಾರೆ. ಇನ್ನು ನಾಯಕ ಡೇವಿಡ್ ವಾರ್ನರ್ ಕಳೆದ 3 ಇನ್ನಿಂಗ್ಸ್ಗಳಿಂದ ರನ್ ಗಳಿಸಿಲ್ಲ. ನಾಯಕ ವಾರ್ನರ್ ಅವರ ಸ್ಟ್ರೈಕ್ ರೇಟ್ ಚರ್ಚೆಯ ವಿಚಾರವಾಗಿದೆ. ಮೂರನೆ ಕ್ರಮಾಂಕದಲ್ಲಿ ಆಡುತ್ತಿರುವ ಪ್ರಿಯಮ್ ಗರ್ಗ್ ವೇಗಿಗಳೆದರು ವೈಫಲ್ಯ ಅನುಭವಿಸಿದ್ದಾರೆ.ಸಾಮರ್ಥ್ಯವನ್ನು ಸಾಬೀತು ಮಾಡಬೇಕಿದೆ.ಅನುಭವಿ ಬ್ಯಾಟರ್ ಮನೀಶ್ ಪಾಂಡೆ ಅವರಿಂದ ಹೆಚ್ಚಿನ ನಿರೀಕ್ಷೆ ಮಾಡುತ್ತಿದೆ. ಫಾರ್ಮ್ನಲ್ಲಿರುವ ಅಕ್ಸರ್ ಪಟೇಲ್ ಆರನೆ ಕ್ರಮಾಂಕದಲ್ಲಿ ಆಡುತ್ತಿದ್ದು ಅಗ್ರ ಕ್ರಮಾಂಕದಲ್ಲೂ ಕಣಕ್ಕಿಳಿಸಬಹುದಾಗಿದೆ.