IPL 2023 : ರಾಯಲ್ ಚಾಲೆಂಜರ್ಸ್ ನೂತನ ಜೆರ್ಸಿ ಅನಾವರಣ ಗೊಳಿಸಿದ ಕೊಹ್ಲಿ, ಡುಪ್ಲೆಸಿಸ್…
ಇಂಡಿಯನ್ ಪ್ರೀಮಿಯರ್ ಲೀಗ್ನ 16 ನೇ ಆವೃತ್ತಿಗೆ ಕೆಲವೇ ದಿನಗಳು ಬಾಕಿ ಇದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈವೆಂಟ್ ನಲ್ಲಿ ಹೊಸ ಜೆರ್ಸಿಯನ್ನ ಅನಾವರಣ ಮಾಡಿದೆ. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಜೆರ್ಸಿಯನ್ನ ಅನಾವರಣ ಮಾಡಿದರು. ಈ ಬಾರಿ ಕತಾರ್ ಏರ್ ವೇಸ್ ಈ ಋತುವಿನ ಪ್ರಮುಖ ಪ್ರಾಯೋಜಕತ್ವವನ್ನ ವಹಿಸಿಕೊಂಡಿದೆ.
ಜೆರ್ಸಿಯಲ್ಲಿ ಟಿ-ಶರ್ಟ್ನ ಮಾದರಿ ಬದಲಾಯಿಸಲಾಗಿದ್ದು, ಅದನ್ನ ಹೊರತು ಪಡಿಸಿ ಯಾವುದೇ ಗಮನಾರ್ಹ ಬದಲಾವಣೆ ಮಾಡಲಾಗಿಲ್ಲ. ಲೋಗೋ ಬಂಗಾರದ ಬಣ್ಣದಲ್ಲಿದ್ದು, ಟ್ರಾಕ್ ಪ್ಯಾಂಟ್ ಮತ್ತೊಮ್ಮೆ ಕೆಂಪು ಬಣ್ಣಕ್ಕೆ ಬಂದಿದೆ.
ಜೆರ್ಸಿ ಬಿಡುಗಡೆಯ ಹೊರತಾಗಿ ಆರ್ ಸಿಬಿ ಅನ್ಬಾಕ್ಸ್ ಈವೆಂಟ್ ನಲ್ಲಿ RCBಯ ಇಬ್ಬರು ಮಾಜಿ ಪ್ರಮುಖ ಆಟಗಾರರಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರನ್ನ ಹಾಲ್ ಆಫ್ ಫೇಮ್ ಗೆ ಸೇರ್ಪಡಿಸಿ ಗೌರವಿಸಲಾಯಿತು. ಕ್ರೀಡಾಂಗಣ ಎಬಿಡಿ, ಗೇಲ್ ಕೊಹ್ಲಿ ಘೋಷಣೆಗಳಿಂದ ತುಂಬಿ ಹೋಗಿತ್ತು.
COVID-19 ಸಾಂಕ್ರಾಮಿಕ ರೋಗದಿಂದಾಗಿ ಸುಮಾರು ನಾಲ್ಕು ವರ್ಷಗಳ ನಂತರ RCB ತಂಡವನ್ನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಕಾಣಿಸಿಕೊಂಡಿದೆ. ಕ್ರಿಡಾಂಗಣಕ್ಕೆ ಕೊಹ್ಲಿ ಎಬಿಡಿ ಎಂಟ್ರಿ ಕೊಟ್ಟ ನಂತರ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.
IPL 2023: Royal Challengers unveil new jersey Kohli, Duplessis…