IPL 2023 : Virat Kohli : ಕಿಂಗ್ ಕೊಹ್ಲಿ ಜರ್ಸಿ ನಂಬರ್ 18 ರ ಕಥೆಯೇನು ಗೊತ್ತಾ..??
ಇಂಡಿಯನ್ ಪ್ರೀಮಿಯರ್ ಲೀಗ್ 2023 ರ 16 ನೇ ಆವೃತ್ತಿಯಲ್ಲಿ ಹತ್ತು ತಂಡಗಳು ಚಾಂಪಿಯನ್’ ಪ್ರಶಸ್ತಿಗಾಗಿ ಹೋರಾಡಲಿವೆ.
ಪ್ರತಿ ಬಾರಿಯಂತೆ ಈ ಬಾರಿಯೂ RCB ಕ್ರೇಜ್ ಹೆಚ್ಚಾಗಿಯೇ ಇರಲಿದೆ.. ವಿರಾಟ್ ಕೊಹ್ಲಿ ಅದೇ ಹಳೇ ಖದರ್ ನಲ್ಲೇ ಮಿಂಚಲಿದ್ದಾರೆ, ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಕಪ್ ನಮ್ದೇ ಅಂತ ಅಭಿಮಾನಿಗಳು ಬೀಗಲಿದ್ದಾರೆ..
ಈ ಬಾರಿಯಾದ್ರೂ ಕಪ್ ಗೆಲ್ಲಲೇ ಬೇಕೆಂಬ ತವಕದಲ್ಲಿ ಆರ್ ಸಿಬಿಯನ್ಸ್ ಇದ್ದಾರೆ..
ಅಂದ್ಹಾಗೆ ಪ್ರತಿ IPL ಸೀಸನ್ ನಲ್ಲೂ ವಿಶ್ವದ ಜನರ ಆಕರ್ಶಿಸುವುದು ಜರ್ಸಿ ನಂ. 18..
ಜರ್ಸಿ ನಂ. 18 ಅನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಧರಿಸುತ್ತಾರೆ.
ಮತ್ತು ಅಭಿಮಾನಿಗಳ ಭಾವನೆಗಳು ಈ ಸಂಖ್ಯೆಯೊಂದಿಗೆ ಭಾವನಾತ್ಮಕವಾಗಿಯೂ ಕನೆಕ್ಟ್ ಆಗಿದೆ.
ವಿರಾಟ್ ಕೊಹ್ಲಿ ವಿಶ್ವ ಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ನಿಸ್ಸಂದೇಹವಾಗಿ ಒಬ್ಬರು.
ಭಾರತೀಯ ನಾಯಕ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ. ಕೋಟ್ಯಾಂತರ ಅಭಿಮಾನಿಳನ್ನ ಹೊಂದಿದ್ದಾರೆ.
ವಿರಾಟ್ ಕೊಹ್ಲಿ ಅವರ ಅಸಾಧಾರಣ ಕ್ರಿಕೆಟ್ ಪ್ರದರ್ಶನದ ಪರಿಣಾಮವಾಗಿ ಅವರ ಜರ್ಸಿ ಸಂಖ್ಯೆ 18 ಶ್ರೇಷ್ಠವಾಗಿದೆ. ಅವರು ತಮ್ಮ ವೃತ್ತಿಜೀವನದ ಆರಂಭದಿಂದಲೂ 18 ನೇ ಸಂಖ್ಯೆಯ ಜರ್ಸಿಯನ್ನ ಧರಿಸಿದ್ದಾರೆ.
ವಿರಾಟ್ ಜೆರ್ಸಿ ಹೇಗೆ ಅಭಿಮಾನಿಗಳ ಜೊತೆಗೆ ಭಾವನಾತ್ಮಕವಾಗಿ ಬೆಸೆದಿದೆ..
ವಿರಾಟ್ ಕೊಹ್ಲಿ ತಮ್ಮ ಜರ್ಸಿ ನಂಬರ್ ಆಗಿ 18 ನೇ ಸಂಖ್ಯೆಯನ್ನು ಆಯ್ಕೆ ಮಾಡಲು ಕಾರಣ ಅವರ ತಂದೆ ಪ್ರೇಮ್ ಕೊಹ್ಲಿ. ಅವರ ಬಾಲ್ಯದ ವರ್ಷದಲ್ಲಿ, ಕೊಹ್ಲಿಯನ್ನು ಅವರ ತಂದೆ ಕ್ರಿಕೆಟ್ ಕೋಚಿಂಗ್ ಗೆ ಕಳುಹಿಸುತ್ತಿರು. ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವಾಗ ರಾಷ್ಟ್ರೀಯ ತಂಡಕ್ಕಾಗಿ ಆಡುವುದನ್ನು ನೋಡುವುದು ಅವರ ತಂದೆಯ ಕನಸಾಗಿತ್ತು.
ಕೊಹ್ಲಿಯ ತಂದೆ ಡಿಸೆಂಬರ್ 18, 2006 ರಂದು ನಿಧನರಾದರು. ಆಗಿನ್ನೂ ಕೊಹ್ಲಿ 18 ವರ್ಷದವರಾಗಿದ್ದರು.
ಹೀಗಾಗಿಯೇ ವಿರಾಟ್ 18 ರ ಸಂಖ್ಯೆಯದ್ದೇ ಜರ್ಸಿಯನ್ನ ಧರಿಸುತ್ತಾರೆ. ತಮ್ಮ ತಂದೆಗೆ ಈ ಮೂಲಕ ಅವರು ಸಲ್ಲಿಸುವ ಗೌರವ ಇದಾಗಿದೆ.
ಕೊಹ್ಲಿ ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ಪರ ಆಡುತ್ತಿದ್ದಾಗ, ದುರದೃಷ್ಟವಶಾತ್ ಅವರ ತಂದೆ ನಿಧನರಾದರು. ಕೊಹ್ಲಿ ನಂತರ 18 ನೇ ಸಂಖ್ಯೆಯ ಜರ್ಸಿ ಧರಿಸಿ 19 ವರ್ಷದೊಳಗಿನವರ ತಂಡದಲ್ಲಿ ಆಡಿದರು.
ಅವರು ಭಾರತ ಅಥವಾ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುವಾಗ ತಮ್ಮ ಜೆರ್ಸಿಯ ಹಿಂಭಾಗದಲ್ಲಿ 18 ಎಂದು ಮುದ್ರಿಸಿರುವುದಕ್ಕೆ ಇದು ನಿಜವಾದ ಕಾರಣ.
IPL 2023, Virat Kohli : Do you know the story of King Kohli jersey number 18..??








