IPL auction 2023 : ಧೋನಿಯಿಂದ ಇಶಾನ್ ಕಿಶಾನ್ ವರಗೆ ದುಬಾರಿ ಬೆಲೆಗೆ ಮಾರಾಟವಾದ ಆಟಗಾರರು…
IPL 2023 ರ ಮಿನಿ ಹರಾಜು ನಾಳೆ ನಡೆಯಲಿದೆ. ಕಳೆದ ಬಾರಿಯಂತೆ ದೊಡ್ಡ ಹರಾಜು ನಡೆಯುದಿಲ್ಲವಾದರೂ, ದೊಡ್ಡ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುವ ಕಾರಣ ಕುತೂಹಲ ಕೆರಳಿಸಿದೆ. ಈ ಬಾರಿ ಯಾವ ಆಟಗಾರ ದುಬಾರಿ ಬೆಲೆಗೆ ಖರೀದಾಗುತ್ತಾನೆ ಎನ್ನುವ ಕುತೂಹಲವೂ ಇದೆ.
ಕಳೆದ ಬಾರಿಯ ಹರಾಜಿನಲ್ಲಿ ಇಶಾನ್ ಕಿಶನ್ ಅತ್ಯಧಿಕ ಬೆಲೆ ಪಡೆದಿದ್ದರು. ಧೋನಿಯಿಂದ ಹಿಡಿದು ಇಶಾನ್ ಕಿಶಾನ್ ವರೆಗೆ ಅತಿ ಹೆಚ್ಚು ಬೆಲೆ ಪಡೆದ ಎಲ್ಲಾ ಆಟಗಾರರ ಮಾಹಿತಿ ಹೀಗಿದೆ.
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ 2007 ರಲ್ಲಿ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡವನ್ನ ಮುನ್ನಡೆಸಿ ಚಾಂಪಿಯನ್ ಮಾಡಿದರು. ಆ ಸಮಯದಲ್ಲಿ ವಿಶ್ವದ ಬಿಗ್ ಸ್ಟಾರ್ ಆಗಿದ್ದ ಮಹಿಯನ್ನ ಕೊಂಡುಕೊಳ್ಳಲು ಐಪಿಎಲ್ನ ಮೊದಲ ಸೀಸನ್ ನಲ್ಲಿ ಚೆನೈ ಸೂಪರ್ ಕಿಂಗ್ಸ್ 9.5 ಕೋಟಿ ಗೆ ಬಿಡ್ ಮಾಡಿತ್ತು.
ಕೆವಿನ್ ಪೀಟರ್ಸನ್ ಮತ್ತು ಆಂಡ್ರ್ಯೂ ಫ್ಲಿಂಟಾಫ್
2009 ರಲ್ಲಿ ಇಬ್ಬರು ಇಂಗ್ಲೀಷ್ ಆಟಗಾರರಾದ ಕೆವಿನ್ ಪೀಟರ್ಸನ್ ಮತ್ತು ಆಂಡ್ರ್ಯೂ ಫ್ಲಿಂಟಾಫ್ ಅತ್ಯಧಿಕ ಬೆಲೆಗೆ ಬಿಡ್ ಆಗಿದ್ದರು. 9.8 ಕೋಟಿಗೆ ಫ್ಲಿಂಟಾಫ್ CSK ಮತ್ತು ಪೀಟರ್ಸನ್ RCB ತಂಡದ ಪಾಲಾಗಿದ್ದರು.
ಶೇನ್ ಬಾಂಡ್ ಮತ್ತು ಕೀರಾನ್ ಪೊಲಾರ್ಡ್
ಕೋಲ್ಕತ್ತಾ ನೈಟ್ ರೈಡರ್ಸ್ ನ್ಯೂಜಿಲೆಂಡ್ ಅನುಭವಿ ವೇಗದ ಬೌಲರ್ ಶೇನ್ ಬಾಂಡ್ ಮತ್ತು ಮುಂಬೈ ಇಂಡಿಯನ್ಸ್ ವೆಸ್ಟ್ ಇಂಡೀಸ್ ಆಲ್ ರೌಂಡರ್ ಕೀರಾನ್ ಪೊಲಾರ್ಡ್ ಅವರು 4.8 ಕೋಟಿಗೆ ಮಿನಿ ಹರಾಜಿನಲ್ಲಿ ಬಿಡ್ ಆಗಿದ್ದರು. ಪೊಲಾರ್ಡ್ ಮುಂಬೈ ಇಂಡಿಯನ್ಸ್ನ ದಂತಕಥೆಯಾಗಿ ಈ ವರ್ಷ ನಿವೃತ್ತಿಯಾಗಿದ್ದಾರೆ.
ಗೌತಮ್ ಗಂಭೀರ್
ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಗೆ 2011 ರಲ್ಲಿ ಅದೃಷ್ಟ ಕೈ ಹಿಡಿದಿತ್ತು. 14.9 ಕೋಟಿ ರೂ.ಗೆ ಗಂಭೀರ್ ಅವರನ್ನ ಕೊಲ್ಕತ್ತಾ ಬರಮಾಡಿಕೊಂಡಿತ್ತು. ಆನಂತರ ಗಂಭೀರ್ ತಂಡವನ್ನ ಎರಡು ಬಾರಿ ಚಾಂಪಿಯನ್ ಮಾಡಿದರು.
ರವೀಂದ್ರ ಜಡೇಜಾ
ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ನಂಬಿಕೆ ಇಟ್ಟು 2012ರಲ್ಲಿ 12.8 ಕೋಟಿ ಖರ್ಚು ಮಾಡಿ ತಮ್ಮ ತೆಕ್ಕೆಗೆ ಸೇರಿಸಿಕೊಂಡಿತ್ತು. ನಂತರದಲ್ಲಿ ಜಡೆಜಾ ಚೆನೈನ ಸ್ಟಾರ್ ಆಟಗಾರರಾಗಿ ಬೆಳೆದರು.
ಗ್ಲೆನ್ ಮ್ಯಾಕ್ಸ್ವೆಲ್
ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಮುಂಬೈ ಇಂಡಿಯನ್ಸ್ 2013 ಮಿನಿ ಹರಾಜಿನಲ್ಲಿ 6.3 ಕೋಟಿ ವೆಚ್ಚದಲ್ಲಿ ಖರೀದಿಸಿತು. ಪ್ರಸ್ತುತ ಮ್ಯಾಕ್ಸ್ ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದಾರೆ.
ಯುವರಾಜ್ ಸಿಂಗ್
ಭಾರತದ ಸ್ಟಾರ್ ಆಲ್ ರೌಂಡರ್ ಯುವರಾಜ್ ಸಿಂಗ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 2014 ರಲ್ಲಿ 14 ಕೋಟಿ ರೂ.ಗೆ ಬಿಡ್ ಮಾಡಿತ್ತು.
ಯುವರಾಜ್ ಸಿಂಗ್
ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಕೈಬಿಡಲ್ಪಟ್ಟ ನಂತರ ಯುವರಾಜ್ ಸಿಂಗ್ 2015 ರ ಹರಾಜಿನಲ್ಲಿ ಮತ್ತೆ ಕಾಣಿಸಿಕೊಂಡರು ಈ ಬಾರಿ ಗಂಭೀರ್ ದಾಖಲೆ ಮುರಿದ ಯುವಿ 16 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದರು.
ಶೇನ್ ವ್ಯಾಟ್ಸನ್
ಆಸ್ಟ್ರೇಲಿಯಾದ ಆಲ್ರೌಂಡರ್ ಶೇನ್ ವ್ಯಾಟ್ಸನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 9.5 ಕೋಟಿ ರೂ.ಗೆ ಸಹಿ ಮಾಡಿತ್ತು.
ಬೆನ್ ಸ್ಟೋಕ್ಸ್
ಐಪಿಎಲ್ನ ಹೊಸ ತಂಡ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಮ್ಮ ಎರಡನೇ ಋತುವಿನಲ್ಲಿ ಇಂಗ್ಲೆಂಡ್ನ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಖರೀದಿಸಲು ಬೊಕ್ಕಸದಿಂದ 14.5 ಕೋಟಿಗೆ ಖರ್ಚು ಮಾಡಿತ್ತು.
ಬೆನ್ ಸ್ಟೋಕ್ಸ್
ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ನಿಂದ ಹೊರಗುಳಿದ ನಂತರ ಸ್ಟೋಕ್ಸ್ ಮತ್ತೆ ಹರಾಜಿನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರಾಜಸ್ಥಾನ 12.5 ಕೋಟಿಗೆ ಕೊಂಡುಕೊಂಡಿತ್ತು.
ಜೈದೇವ್ ಉನಾದ್ಕತ್ ಮತ್ತು ವರುಣ್ ಚಕ್ರವರ್ತಿ
ಈ ಹರಾಜಿನಲ್ಲಿ ಎಡಗೈ ವೇಗದ ಬೌಲರ್ ಉನದ್ಕತ್ ಅವರನ್ನು ರಾಜಸ್ಥಾನ್ ರಾಯಲ್ಸ್ ಖರೀದಿಸಿದರೆ, ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 8.4 ಕೋಟಿ ರೂ.ಗೆ ಖರೀದಿಸಿತು. ವರುಣ್ ಈಗಲೂ ಕೋಲ್ಕತ್ತಾ ಪರ ಆಡುತ್ತಿದ್ದಾರೆ.
ಪ್ಯಾಟ್ ಕಮ್ಮಿನ್ಸ್
ಕೋಲ್ಕತ್ತಾ ನೈಟ್ ರೈಡರ್ಸ್ ಆಸ್ಟ್ರೇಲಿಯದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಮೇಲೆ 2020 ರಲ್ಲಿ ದೊಡ್ಡ ಹಣ ಹೂಡಿಕೆ ಮಾಡಿತ್ತು. 15.5 ಕೋಟಿ ರೂಗೆ ಖಾರುಖ್ ಒಡೆತನದ ತಂಡಕ್ಕೆ ಸೇರಿಕೊಂಡಿದ್ದರು.
ಕ್ರಿಸ್ ಮೋರಿಸ್
2021 ರ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮೋರಿಸ್ ಎಲ್ಲರನ್ನು ಅಚ್ಚರಿಗೊಳ್ಳುವಂತೆ ಮಾಡಿದ್ದರು. ರಾಜಸ್ಥಾನ್ ರಾಯಲ್ಸ್ ದಾಖಲೆಯ 16.25 ಕೋಟಿ ರೂ ಬಿಡ್ ಮಾಡಿ ಖರೀದಿಸಿತ್ತು.
ಇಶಾನ್ ಕಿಶನ್
2022 ರಲ್ಲಿ ವಿಕೆಟ್ ಕೀಪರ್ ಬ್ಯಾಟ್ಸಮನ್ ಇಶಾನ್ ಕಿಶಾನ್ ಅವರನ್ನ ರೀಟೇನ್ ಮಾಡದೇ ಬಿಟ್ಟ ಮುಂಬೈ ಮತ್ತೆ ಹರಾಜಿನಲ್ಲಿ 15.25 ಕೋಟಿ ಕೊಟ್ಟು ತಂಡಕ್ಕೆ ಸೇರಿಸಿಕೊಂಡಿತ್ತು.
IPL auction 2023: From Dhoni to Ishan Kishan, the players sold at a high price…