IPL auction 2023 : RCB ಪರ್ಸ್ ನಲ್ಲಿ ಎಷ್ಟು ಹಣವಿದೆ ? ಯಾರಿಗೆ ಬಿಡ್ ಮಾಡಲಿದೆ ಗೊತ್ತಾ ?
IPL 2023 ಕ್ಕೆ ಡಿಸೆಂಬರ್ 23 ರಂದು ಮಿನಿ ಹರಾಜು ನಡೆಯಲಿದೆ. ಕೊಚ್ಚಿಯಲ್ಲಿ ಮಧ್ಯಾಹ್ನ 2.30 ಕ್ಕೆ ಆರಂಭವಾಗುವ ಹರಾಜಿನಲ್ಲಿ ಎಲ್ಲಾ 10 ತಂಡಗಳು ತಮ್ಮ ಪರ್ಸ್ ಅಗತ್ಯಕ್ಕೆ ತಕ್ಕಂತೆ ಬಿಡ್ ಮಾಡಲಿವೆ. ಹರಾಜಿನಲ್ಲಿ ಭಾಗಿಯಾಗುವ ಎಲ್ಲಾ ತಂಡಗಳ ತಂತ್ರಗಳು ಸಹ ಶುಕ್ರವಾರವೇ ಬಯಲಾಗಲಿದೆ. ಸಧ್ಯಕ್ಕೆ ತಂಡಗಳ ಅಗತ್ಯಗಳೇನು ? ಯಾವ ತಂಡದ ಪರ್ಸ್ ನಲ್ಲಿ ಎಷ್ಟು ಹಣವಿದೆ ? ಯಾವ ತಂಡಗಳು ಯಾವ ಆಟಗಾರರನ್ನ ಗುರಿಯಾಗಿಸಿಕೊಂಡು ಬಿಡ್ ಮಾಡಲಿವೆ ಎಂಬುದನ್ನ ನೋಡೋಣ .
ರಾಯಲ್ ಚಾಲೆಂಜರ್ಸ್ ಬೆಂಗಳೂರು : 8.75 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡ ಕಡಿಮೆ ಹಣದೊಂದಿಗೆ ಮಿನಿ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದೆ. 18 ಆಟಗಾರರಿಗಾಗಿ 86.25 ಕೋಟಿ ಖರ್ಚು ಮಾಡಿರುವ ಆರ್ ಸಿ ಬಿ ಇದೀಗ 2 ವಿದೇಶಿ ಮತ್ತು 5 ಭಾರತೀಯ ಆಟಗಾರರಿಗಾಗಿ 8.75 ಕೋಟಿಯನ್ನ ಖರ್ಚು ಮಾಡಬೇಕಿದೆ. ಕಳೆದ ಭಾರಿ RCB ಎಂಟು ಗೆಲುವು ಮತ್ತು 6 ಸೋಲುಗಳೊಂದಿದೆ 16 ಅಂಕ ಗಳಿಸಿ ನಾಲ್ಕನೇ ಸ್ಥಾನ ತಲುಪಿತ್ತು.
ಪ್ಲೇಆಫ್ ನ ಮೊದಲ ಪಂದ್ಯ ಗೆದ್ದರು, ಕ್ವಾಲಿಫೈಯರ್-2 ನಲ್ಲಿ ಸೋತು ಮೂರನೆ ಸ್ಥಾನಕ್ಕೆ ತೃಪ್ತಿ ಪಟ್ಟಿತು.
ಪ್ರಸ್ತುತ ತಂಡದ : 18 ಆಟಗಾರರು | 6 ವಿದೇಶಿಗರು
ಫಾಫ್ ಡು ಪ್ಲೆಸಿಸ್ (ಸಿ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ರಜತ್ ಪಾಟಿದಾರ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಆಕಾಶದೀಪ್, ಅನುಜ್ ರಾವತ್, ಡೇವಿಡ್ ವಿಲ್ಲಿ, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್ವೆಲ್, ಜೋಸ್ ಹ್ಯಾಜಲ್ವುಡ್, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ಸಿದ್ಧಾರ್ಥ್ ಕೌಲ್ , ಸುಯ್ಯಶ್ ಪ್ರಭುದೇಸಾಯಿ ಮತ್ತು ವನಿಂದು ಹಸರಂಗ.
ಪ್ರಸ್ತುತ ಹರಾಜಿನಲ್ಲಿ RCB ಈ ಆಟಗಾರರನ್ನ ಟಾರ್ಗೆಟ್ ಮಾಡಿ ಬಿಡ್ ಮಾಡುವ ಸಾಧ್ಯತೆ ಇದೆ.
ಬ್ಯಾಟರ್ಸ್ – ಮಯಾಂಕ್ ಅಗರ್ವಾಲ್, ನಾರಾಯಣ್ ಜಗದೀಶ್, ಅಜಿಂಕ್ಯ ರಹಾನೆ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಶಶಾಂಕ್ ಸಿಂಗ್, ವಿಷ್ಣು ವಿನೋದ್, ಮೊಹಮ್ಮದ್ ಅಜರುದ್ದೀನ್.
ವೇಗಿಗಳು – ನಾಥನ್ ಕೌಲ್ಟರ್-ನೈಲ್, ಜ್ಯೆ ರಿಚರ್ಡ್ಸನ್, ರಿಲೆ ಮೆರೆಡಿತ್, ಆಡಮ್ ಮಿಲ್ನೆ, ರೀಸ್ ಟೋಪ್ಲಿ, ಕ್ರಿಸ್ ಜೋರ್ಡಾನ್, ಇಶಾಂತ್ ಶರ್ಮಾ, ವೈಭವ್ ಅರೋರಾ, ಶಿವಂ ಮಾವಿ, ಅರ್ಜನ್ ನಾಗ್ವಾಸ್ವಾಲಾ, ವರುಣ್ ಆರೋನ್, ಬಾಸಿಲ್ ಥಂಪಿ, ಡೇನಿಯಲ್ ಸಾಮ್ಸ್, ಜಯದೇವ್ ಉನದ್ಕಡ್.
ಸ್ಪಿನ್ನರ್ಗಳು – ಶಾಕಿಬ್ ಅಲ್ ಹಸನ್, ಮೊಹಮ್ಮದ್ ನಬಿ, ಶ್ರೇಯಸ್ ಗೋಪಾಲ್, ಮಯಾಂಕ್ ಮಾರ್ಕಂಡೆ, ಮುರುಗನ್ ಅಶ್ವಿನ್, ಫ್ಯಾಬಿಯನ್ ಅಲೆನ್.
ಐಪಿಎಲ್ ತಂಡದಲ್ಲಿ ಎಷ್ಟು ಆಟಗಾರರಿರಬಹುದು?
2023ರ ಐಪಿಎಲ್ ಋತುವಿನಲ್ಲಿ ಒಟ್ಟು 10 ತಂಡಗಳು ಇರುತ್ತವೆ. ಒಂದು ತಂಡವು ತನ್ನ ತಂಡದಲ್ಲಿ 18 ರಿಂದ 25 ಆಟಗಾರರನ್ನು ಹೊಂದಬಹುದು. ಇದರಲ್ಲಿ 8 ವಿದೇಶಿ ಆಟಗಾರರು ಇರಬಹುದು. ತಂಡಕ್ಕೆ 25 ಆಟಗಾರರನ್ನು ಖರೀದಿಸಲು ತಂಡಗಳು 95 ಕೋಟಿ ರೂ. ಆದರೆ, ಪಂದ್ಯದ ವೇಳೆ ಒಂದು ತಂಡದಲ್ಲಿ ಕೇವಲ 11 ಆಟಗಾರರು ಆಡುತ್ತಾರೆ. ಇದರಲ್ಲಿ ಗರಿಷ್ಠ 4 ಮಂದಿ ವಿದೇಶಿಯರಾಗಿರಬಹುದು.
IPL auction 2023: How much money is in RCB purse? Do you know who will bid?








