ADVERTISEMENT
Wednesday, February 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL Auction Live : ಕನ್ನಡಿಗ ಕೆ ಗೌತಮ್ ಗೆ ಜಾಕ್ ಪಾಟ್

admin by admin
February 18, 2021
in Newsbeat, Sports, ಕ್ರೀಡೆ
K gowtham
Share on FacebookShare on TwitterShare on WhatsappShare on Telegram

IPL Auction Live : ಕನ್ನಡಿಗ ಕೆ ಗೌತಮ್ ಗೆ ಜಾಕ್ ಪಾಟ್

ಚೆನ್ನೈ : ದೇಸಿ ಟೂರ್ನಿಗಳಲ್ಲಿ ಮಿಂಚು ಹರಿಸುತ್ತಿರುವ ಕನ್ನಡಿಗ ಕೆ ಗೌತಮ್ ಗೆ ಜಾಕ್ ಪಾಟ್ ಹೊಡೆದಿದೆ. ಬರೋಬ್ಬರಿ 9.25 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅವರನ್ನು ಖರೀದಿ ಮಾಡಿದೆ.
14ನೇ ಆವೃತ್ತಿಯ ಐಪಿಎಲ್ ಗಾಗಿ ಹರಾಜು ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು,ಫ್ರಾಂಚೈಸಿಗಳು ಪಕ್ಕಾ ಲೆಕ್ಕಾಚಾರ ಹಾಕಿ ಆಟಗಾರರ ಖರೀದಿಗೆ ಮುಂದಾಗಿದ್ದಾರೆ.

Related posts

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಲೋಗೋ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಲೋಗೋ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

February 18, 2026
ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

February 18, 2026

ಸದ್ಯ ಹರಾಜು ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಕನ್ನಡಿಗ ಕೆ ಗೌತಮ್ ಬಂಪರ್ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಇವರಿಗಾಗಿ ಕೆಕೆಆರ್, ಹೈದರಾಬಾದ್ ಭಾರಿ ಪೈಪೋಟಿ ನಡೆಸಿದ್ದವು. ಕೊನೆಗೆ ಡಿ ಕಂಪನಿಗೆ ಗೌತಮ್ ಸೇಲ್ ಆಗಿದ್ದಾರೆ.

K gowtham

ಇತ್ತ ಯುವ ಪ್ರತಿಭೆಗಳಿಗೆ ಮಣೆ ಹಾಕುತ್ತಿರುವ ಪಂಜಾಬ್ ಇದೀಗ ಶಾರೂಕ್ ಖಾನ್ ಗೆ ಮಣೆ ಹಾಕಿದೆ. ಶಾರೂಕ್ ಗೆ ಮೂಲ ಬೆಲೆ 20 ಲಕ್ಷ ಇತ್ತು. ಭಾರಿ ಪೈಪೋಟಿ ನಡುವೆ ಪಂಜಾಬ್ 5.25ಕೋಟಿ ಕೊಟ್ಟ ಶಾರೂಕ್ ಅವರನ್ನ ಖರೀದಿ ಮಾಡಿದೆ.

ಇನ್ನ ಆರಂಭದಲ್ಲಿ ಗೂಳಿಯಂತೆ ಮುನ್ನುಗಿದ್ದ ಆರ್ ಸಿಬಿ ಸದ್ಯ ಯೋಚನೆ ಮಾಡಿ ಆಟಗಾರರನ್ನು ಖರೀದಿ ಮಾಡುತ್ತಿದೆ. ಈ ಹಿಂದೆ ಆರ್ ಸಿಬಿ ಪರ ಆಡಿದ್ದ ಸಚಿನ್ ಬೇಬಿಗೆ ಮತ್ತೆ ತಂಡ ಮಣೆ ಹಾಕಿದೆ. ಇದಲ್ಲದೇ ಹೊಸ ಪ್ರತಿಭೆ ರಜತ್ ಪಟೀಧಾರ್ ಗೆ ತಲಾ 20 ಲಕ್ಷ ನೀಡಿ ಖರೀದಿ ಮಾಡಿದೆ.

ಆಸೀಸ್ ನ ಯುವ ರೈಟ್ ಹ್ಯಾಂಡ್ ಫಾಸ್ಟ್ ಬೌಲರ್ ಜೆಯ್ ರಿಚರ್ಡ್ ಸನ್ ಗೆ ಪಂಜಾಬ್ ತಂಡ 14 ಕೋಟಿ ನೀಡಿ ಖರೀದಿ ಮಾಡಿದೆ. ರಿಚರ್ಡ್ ಸನ್ ಬಿಬಿಎಲ್ ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ಆಸೀಸ್ ಪರ 9 ಟಿ 20 ಪಂದ್ಯಗಳನ್ನಾಡಿರುವ ರಿಚರ್ಡ್ ಸನ್ 9 ವಿಕೆಟ್ ಕಬಳಿಸಿದ್ದಾರೆ.

ಇನ್ನು ಹರಾಜಿನಲ್ಲಿ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ 2.40 ಕೋಟಿಗೆ ಮುಂಬೈ ತಂಡ ಸೇರಿದ್ದಾರೆ.

ಹರಾಜಿನಲ್ಲಿ ಟೀಂ ಇಂಡಿಯಾದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಅನ್ ಸೋಲ್ಡ್ ಆಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಜ್ಜಿ ಟೂರ್ನಿ ಹೊರಬಿದ್ದಂತಾಗಿದೆ. ಇನ್ನು ವೇಗಿ ಉಮೇಶ್ ಯಾದವ್ ಡೆಲ್ಲಿ ತಂಡಕ್ಕೆ ಒಂದು ಕೋಟಿಗೆ ಸೇಲ್ ಆಗಿದ್ದಾರೆ.

ನಾಥನ್ ಕೌಲ್ಟರ್-ನೈಲ್ ಅವರನ್ನು ಮುಂಬೈ ತಂಡ ಐದು ಕೋಟಿಗೆ ಖರೀದಿ ಮಾಡಿದೆ. ಇನ್ನು ವೆಸ್ಟ್ ಇಂಡೀಸ್ ನ ಸೆಲ್ಯೋಟ್ ಬೌಲರ್ ಕಾಟ್ರೆಲ್ ಅನ್ ಸೋಲ್ಡ್ ಆಗಿದ್ದಾರೆ.

ಇನ್ನು ನ್ಯೂಜಿಲೆಂಡ್ ವೇಗಿ ಆಡಂ ಮಿಲಾನ್ ಮುಂಬೈ ತಂಡ ಸೇರಿದ್ದಾರೆ, ಅವರಿಗೆ 3.2 ಕೋಟಿ ಕೊಟ್ಟ ಮುಂಬೈ ಖರೀದಿ ಮಾಡಿದೆ. ಇನ್ನು ಬಾಂಗ್ಲಾ ವೇಗಿ ಮುಸ್ತಾಫಿಜುರ್ ರಹಮಾನ್ ಗೆ ಆರ್ ಆರ್ ತಂಡ 1 ಕೋಟಿ ಕೊಟ್ಟು ಖರೀದಿ ಮಾಡಿದೆ. ಇದಕ್ಕೂ ಮುನ್ನ ಕುಶಾಲ್ ಪೆರೇರಾ, ಕ್ಯಾರಿ, ಸ್ಯಾಮ್ ಬಿಲ್ಲಿಂಗ್ಸ್ ಅನ್ ಸೋಲ್ಡ್ ಆಗಿದ್ದಾರೆ.

ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಡೆವಿಡ್ ಮಲನ್ ಕೇವಲ ಒಂದು 1.50 ಕೋಟಿಗೆ ಪಂಜಾಬ್ ತಂಡವನ್ನ ಸೇರಿಕೊಂಡಿದ್ದಾರೆ.

ಇನ್ನ ಕಳೆದ ವರ್ಷ ಆರ್ ಸಿಬಿ ಪರ ಆಡಿದ್ದ ಕ್ರಿಸ್ ಮೋರಿಸ್ ದಾಖಲೆ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಅವರು 16.25 ಕೋಟಿಗೆ ಆರ್ ಆರ್ ಬಳಗ ಸೇರಿದ್ದಾರೆ.

ಶಿವಂ ದುಬೆ ರಾಜಸ್ಥಾನ ತೆಕ್ಕೆಗೆ ಸೇರಿದ್ದಾರೆ. ಅವರಿಗೆ 4 ಕೋಟಿ ಕೊಟ್ಟ ಆರ್ ಆರ್ ಖರೀದಿ ಮಾಡಿದೆ.

ಇಂಗ್ಲೆಂಡ್ ತಂಡ ಸ್ಟಾರ್ ಆಟಗಾರ ಮೊಯೀನ್ ಅಲಿ ಚೆನ್ನೈ ತಂಡಕ್ಕೆ ಸೇಲ್ ಆಗಿದ್ದಾರೆ. ಅವರಿಗೆ ಚೆನ್ನೈ 7 ಕೋಟಿ ನೀಡಿದೆ.

ಬಾಂಗ್ಲಾ ಆಲ್ ರೌಂಡರ್ ಶಖೀಬ್ ಅಲ್ ಹಸನ್ ಕೆಕೆಆರ್ ತಂಡಕ್ಕೆ ಮರಳಿದ್ದಾರೆ. ಇತ್ತ ಕಳೆದ ಐಪಿಎಲ್ ನಲ್ಲಿ ಠುಸ್ ಆಗಿದ್ದ ಕೇಧಾರ್ ಜಾಧವ್ ಅಲ್ ಸೋಲ್ಡ್ ಆಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಸೀಸ್ ಆಲ್ ರೌಂಡರ್ ಮ್ಯಾಕ್ಸ್ ವೆಲ್ ಗೆ14.25 ಕೋಟಿ ಕೊಟ್ಟು ಖರೀದಿ ಮಾಡಿದೆ.

ಮ್ಯಾಕ್ಸಿಗಾಗಿ ಆರ್ ಸಿಬಿ ಕೆಕೆ ಆರ್ ಚೆನ್ನೈ ಭಾರಿ ಪೈಪೋಟಿ ನಡೆಸಿದವು. ಕೊನೆಗೆ ಆರ್ ಸಿಬಿ 14.25 ಕೋಟಿಗೆ ಮ್ಯಾಕ್ಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ

ಕನ್ನಡಿಗ ಕರುಣ್ ನಾಯರ್ ಅನ್ ಸೋಲ್ಡ್ ಆಗಿದ್ದಾರೆ. ಸ್ಟೀವ್ ಸ್ಮಿತ್ 2.2 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಗೆ ಸೇಲ್ ಆಗಿದ್ದಾರೆ.

ಅಲೆಕ್ಸ್ ಹಾಲ್ಸ್ ಅನ್ ಸೋಲ್ಡ್ ಆಗಿದ್ದಾರೆ.

ಜಾಸನ್ ರೋಯ್ ಕೂಡ ಅನ್ ಸೋಲ್ಡ್ ಆಗಿದ್ದಾರೆ.

ಆರೋನ್ ಫಿಂಚ್ ಅನ್ ಸೋಲ್ಡ್ ಆಗಿದ್ದಾರೆ.

ಹನುಮ ವಿಹಾರಿ ಅನ್ ಸೋಲ್ಡ್ ಆಗಿದ್ದಾರೆ.

Tags: cskIPLK Gowtham
ShareTweetSendShare
Join us on:

Related Posts

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಲೋಗೋ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಲೋಗೋ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

by admin
February 18, 2026
0

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಲೋಗೋ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ ಬೆಂಗಳೂರು:  9 ಡ್ರೀಮ್ಸ್‌ ಸಂಸ್ಥೆಯಿಂದ ಆಯೋಜಿಸಲಾಗುತ್ತಿರುವ ವಿನೂತನ ಮಾದರಿಯ ಸಿಎಂ ಕಪ್‌ 2026 ಶಟಲ್‌...

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

by Shwetha
February 18, 2026
0

ಬೆಂಗಳೂರು/ಮೈಸೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಮುಖ ಶಾಸಕರು ಹಾಗೂ ಸಚಿವರುಗಳ ತಂಡ ವಿದೇಶ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಭಾರೀ...

ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

by Shwetha
February 18, 2026
0

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಕ್ಷದ ಕಚೇರಿಗಳಿಗಾಗಿ ಸಾರ್ವಜನಿಕ ಸೌಲಭ್ಯಗಳಿಗೆ ಮೀಸಲಾದ ಸಿಎ ಸೈಟ್‌ಗಳನ್ನು ಬಳಸಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ...

ರಾಜ್ಯ ರಾಜಕಾರಣಕ್ಕೆ ವಾಪಸ್ ಯೋಚನೆ ಇಲ್ಲ: ವಿ. ಸೋಮಣ್ಣ ಮಹತ್ವದ ಹೇಳಿಕೆ

ರಾಜ್ಯ ರಾಜಕಾರಣಕ್ಕೆ ವಾಪಸ್ ಯೋಚನೆ ಇಲ್ಲ: ವಿ. ಸೋಮಣ್ಣ ಮಹತ್ವದ ಹೇಳಿಕೆ

by Shwetha
February 18, 2026
0

ಕೇಂದ್ರ ಸಚಿವ ವಿ. ಸೋಮಣ್ಣ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಯಾವುದೇ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ರಾಜಕೀಯ...

ಮಹದೇವಪ್ಪ ಈಗ ಹೈಕಮಾಂಡ್ ಲೆವೆಲ್ ನಾಯಕರು, ಅಧಿಕಾರ ಹಂಚಿಕೆ ಗುಟ್ಟು ಸಿಎಂ ಬಾಯಲ್ಲೇ ಬರಲಿದೆ: ಡಿಕೆಶಿ ಖಡಕ್ ಮಾತು

ಮಹದೇವಪ್ಪ ಈಗ ಹೈಕಮಾಂಡ್ ಲೆವೆಲ್ ನಾಯಕರು, ಅಧಿಕಾರ ಹಂಚಿಕೆ ಗುಟ್ಟು ಸಿಎಂ ಬಾಯಲ್ಲೇ ಬರಲಿದೆ: ಡಿಕೆಶಿ ಖಡಕ್ ಮಾತು

by Shwetha
February 18, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆಯ ಗದ್ದಲ ಮತ್ತೆ ಮುನ್ನೆಲೆಗೆ ಬಂದಿದ್ದು, ಸಚಿವ ಎಚ್.ಸಿ ಮಹದೇವಪ್ಪ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಮ್ಮದೇ ಶೈಲಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram