ADVERTISEMENT
Friday, February 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL Auction Live : ಆರ್ ಸಿಬಿಗೆ ಬಂದ `ರಸೆಲ್ 2.0′

admin by admin
February 18, 2021
in Newsbeat, Sports, ಕ್ರೀಡೆ
Kyle Jamieson
Share on FacebookShare on TwitterShare on WhatsappShare on Telegram

IPL Auction Live : ಆರ್ ಸಿಬಿಗೆ ಬಂದ ಮತ್ತೊಬ್ಬ `ರಸೆಲ್’

ಚೆನ್ನೈ : 14ನೇ ಆವೃತ್ತಿಯ ಐಪಿಎಲ್ ಗಾಗಿ ಹರಾಜು ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಫ್ರಾಂಚೈಸಿಗಳು ಪಕ್ಕಾ ಲೆಕ್ಕಾಚಾರ ಹಾಕಿ ಆಟಗಾರರ ಖರೀದಿಗೆ ಮುಂದಾಗಿದ್ದಾರೆ. ಇತ್ತ ಆರಂಭದಿಂದಲೂ ಪಕ್ಕಾ ಪ್ಲಾನಿಂಗ್ ನಿಂದ ಆಟಗಾರರ ಖರೀದಿ ಮಾಡುತ್ತಿರುವ ಆರ್ ಸಿಬಿ ತಂಡ ನ್ಯೂಜಿಲೆಂಡ್ ನ ವೇಗದ ಬೌಲರ್ 6.8 ಅಡಿ ಎತ್ತರ ಕೈಲ್ ಜೆಮಿಸನ್ ಅವರನ್ನು ಬರೋಬ್ಬರಿ 15 ಕೋಟಿ ರುಪಾಯಿಗೆ ಖರೀದಿ ಮಾಡಿದೆ.

Related posts

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

February 20, 2026
ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು!.. ರಾಜಕೀಯ ಚರ್ಚೆಗೆ ಕಾರಣ

ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು!.. ರಾಜಕೀಯ ಚರ್ಚೆಗೆ ಕಾರಣ

February 20, 2026

ಜೆಮಿಸನ್ ಕೇವಲ ಬೌಲಿಂಗ್ ಅಲ್ಲದೇ ಬ್ಯಾಟಿಂಗ್ ನಲ್ಲೂ ಉಪಯುಕ್ತ ಆಟವಾಡುವ ಸಾಮಥ್ರ್ಯ ಹೊಂದಿದ್ದಾರೆ. ಇವರನ್ನ ಮತ್ತೊಬ್ಬ ರಸೆಲ್ ಅಂತಾನೇ ಗೌತಮ್ ಗಂಭೀರ್ ಹೇಳಿದ್ದಾರೆ. ಆರು ಟೆಸ್ಟ್ ಮ್ಯಾಚ್ ಗಳಲ್ಲಿ ಇವರು 36 ವಿಕೆಟ್, 2 ಏಕದಿನ ಪಂದ್ಯಗಳಲ್ಲಿ 3 ವಿಕೆಟ್, ನಾಲ್ಕು ಟಿ 20 ಮ್ಯಾಚ್ ಗಳಲ್ಲಿ 3 ನಾಲ್ಕು ವಿಕೆಟ್ ಪಡೆದಿದ್ದಾರೆ.

Kyle Jamieson

ಇನ್ನು ಭಾರತ ಟೆಸ್ಟ್ ತಂಡದ ಆಧಾರ ಸ್ತಂಭ ಚೇತೇಶ್ವರ ಪೂಜಾರಾ ಚೆನ್ನೈ ತಂಡ ಸೇರಿದ್ದಾರೆ. ಅವರನ್ನು ಸಿಎಸ್ ಕೆ 50 ಲಕ್ಷ ನೀಡಿ ಖರೀದಿ ಮಾಡಿದೆ.

ಇನ್ನುಳಿದಂತೆ ಪವನ್ ನೇಗಿ, ಮಾರ್ಟಿನ್ ಗುಪ್ಟಿಲ್, ಡೆರಾನ್ ಬ್ರಾವೊ, ಕೊರಿ ಅಂಡರ್ ಸನ್ ಅನ್ ಸೋಲ್ಡ್ ಆಗಿದ್ದಾರೆ.

ಇತ್ತ ಆರ್ ಸಿಬಿ ಹೊಸ ಮುಖಗಳಿಗೆ ಮಣೆ ಹಾಕಿದ್ದು, ದೇಸಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಕ್ರಿಕೆಟ್ ದಿಗ್ಗಜರ ಪ್ರಶಂಸೆ ಪಾತ್ರರಾಗುತ್ತಿರುವ ಮೊಹಮ್ಮದ್ ಅಜರುದ್ದೀನ್ ಅವರನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಕನ್ನಡಿಗ ಕೆ ಗೌತಮ್ ಬಂಪರ್ ಮೊತ್ತಕ್ಕೆ ಸೇಲ್ ಆಗಿದ್ದಾರೆ. 9.25 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅವರನ್ನು ಖರೀದಿ ಮಾಡಿದೆ.

ಯುವ ಪ್ರತಿಭೆಗಳಿಗೆ ಮಣೆ ಹಾಕುತ್ತಿರುವ ಪಂಜಾಬ್ ಇದೀಗ ಶಾರೂಕ್ ಖಾನ್ ಗೆ ಮಣೆ ಹಾಕಿದೆ. ಶಾರೂಕ್ ಗೆ ಮೂಲ ಬೆಲೆ 20 ಲಕ್ಷ ಇತ್ತು. ಭಾರಿ ಪೈಪೋಟಿ ನಡುವೆ ಪಂಜಾಬ್ 5.25ಕೋಟಿ ಕೊಟ್ಟ ಶಾರೂಕ್ ಅವರನ್ನ ಖರೀದಿ ಮಾಡಿದೆ.

ಇನ್ನ ಆರಂಭದಲ್ಲಿ ಗೂಳಿಯಂತೆ ಮುನ್ನುಗಿದ್ದ ಆರ್ ಸಿಬಿ ಸದ್ಯ ಯೋಚನೆ ಮಾಡಿ ಆಟಗಾರರನ್ನು ಖರೀದಿ ಮಾಡುತ್ತಿದೆ. ಈ ಹಿಂದೆ ಆರ್ ಸಿಬಿ ಪರ ಆಡಿದ್ದ ಸಚಿನ್ ಬೇಬಿಗೆ ಮತ್ತೆ ತಂಡ ಮಣೆ ಹಾಕಿದೆ. ಇದಲ್ಲದೇ ಹೊಸ ಪ್ರತಿಭೆ ರಜತ್ ಪಟೀಧಾರ್ ಗೆ ತಲಾ 20 ಲಕ್ಷ ನೀಡಿ ಖರೀದಿ ಮಾಡಿದೆ.

ಆಸೀಸ್ ನ ಯುವ ರೈಟ್ ಹ್ಯಾಂಡ್ ಫಾಸ್ಟ್ ಬೌಲರ್ ಜೆಯ್ ರಿಚರ್ಡ್ ಸನ್ ಗೆ ಪಂಜಾಬ್ ತಂಡ 14 ಕೋಟಿ ನೀಡಿ ಖರೀದಿ ಮಾಡಿದೆ. ರಿಚರ್ಡ್ ಸನ್ ಬಿಬಿಎಲ್ ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ಆಸೀಸ್ ಪರ 9 ಟಿ 20 ಪಂದ್ಯಗಳನ್ನಾಡಿರುವ ರಿಚರ್ಡ್ ಸನ್ 9 ವಿಕೆಟ್ ಕಬಳಿಸಿದ್ದಾರೆ.

ಇನ್ನು ಹರಾಜಿನಲ್ಲಿ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ 2.40 ಕೋಟಿಗೆ ಮುಂಬೈ ತಂಡ ಸೇರಿದ್ದಾರೆ.

ಹರಾಜಿನಲ್ಲಿ ಟೀಂ ಇಂಡಿಯಾದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಅನ್ ಸೋಲ್ಡ್ ಆಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಜ್ಜಿ ಟೂರ್ನಿ ಹೊರಬಿದ್ದಂತಾಗಿದೆ. ಇನ್ನು ವೇಗಿ ಉಮೇಶ್ ಯಾದವ್ ಡೆಲ್ಲಿ ತಂಡಕ್ಕೆ ಒಂದು ಕೋಟಿಗೆ ಸೇಲ್ ಆಗಿದ್ದಾರೆ.

ನಾಥನ್ ಕೌಲ್ಟರ್-ನೈಲ್ ಅವರನ್ನು ಮುಂಬೈ ತಂಡ ಐದು ಕೋಟಿಗೆ ಖರೀದಿ ಮಾಡಿದೆ. ಇನ್ನು ವೆಸ್ಟ್ ಇಂಡೀಸ್ ನ ಸೆಲ್ಯೋಟ್ ಬೌಲರ್ ಕಾಟ್ರೆಲ್ ಅನ್ ಸೋಲ್ಡ್ ಆಗಿದ್ದಾರೆ.

ಇನ್ನು ನ್ಯೂಜಿಲೆಂಡ್ ವೇಗಿ ಆಡಂ ಮಿಲಾನ್ ಮುಂಬೈ ತಂಡ ಸೇರಿದ್ದಾರೆ, ಅವರಿಗೆ 3.2 ಕೋಟಿ ಕೊಟ್ಟ ಮುಂಬೈ ಖರೀದಿ ಮಾಡಿದೆ. ಇನ್ನು ಬಾಂಗ್ಲಾ ವೇಗಿ ಮುಸ್ತಾಫಿಜುರ್ ರಹಮಾನ್ ಗೆ ಆರ್ ಆರ್ ತಂಡ 1 ಕೋಟಿ ಕೊಟ್ಟು ಖರೀದಿ ಮಾಡಿದೆ. ಇದಕ್ಕೂ ಮುನ್ನ ಕುಶಾಲ್ ಪೆರೇರಾ, ಕ್ಯಾರಿ, ಸ್ಯಾಮ್ ಬಿಲ್ಲಿಂಗ್ಸ್ ಅನ್ ಸೋಲ್ಡ್ ಆಗಿದ್ದಾರೆ.

ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಡೆವಿಡ್ ಮಲನ್ ಕೇವಲ ಒಂದು 1.50 ಕೋಟಿಗೆ ಪಂಜಾಬ್ ತಂಡವನ್ನ ಸೇರಿಕೊಂಡಿದ್ದಾರೆ.

ಇನ್ನ ಕಳೆದ ವರ್ಷ ಆರ್ ಸಿಬಿ ಪರ ಆಡಿದ್ದ ಕ್ರಿಸ್ ಮೋರಿಸ್ ದಾಖಲೆ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಅವರು 16.25 ಕೋಟಿಗೆ ಆರ್ ಆರ್ ಬಳಗ ಸೇರಿದ್ದಾರೆ.

ಶಿವಂ ದುಬೆ ರಾಜಸ್ಥಾನ ತೆಕ್ಕೆಗೆ ಸೇರಿದ್ದಾರೆ. ಅವರಿಗೆ 4 ಕೋಟಿ ಕೊಟ್ಟ ಆರ್ ಆರ್ ಖರೀದಿ ಮಾಡಿದೆ.

ಇಂಗ್ಲೆಂಡ್ ತಂಡ ಸ್ಟಾರ್ ಆಟಗಾರ ಮೊಯೀನ್ ಅಲಿ ಚೆನ್ನೈ ತಂಡಕ್ಕೆ ಸೇಲ್ ಆಗಿದ್ದಾರೆ. ಅವರಿಗೆ ಚೆನ್ನೈ 7 ಕೋಟಿ ನೀಡಿದೆ.

ಬಾಂಗ್ಲಾ ಆಲ್ ರೌಂಡರ್ ಶಖೀಬ್ ಅಲ್ ಹಸನ್ ಕೆಕೆಆರ್ ತಂಡಕ್ಕೆ ಮರಳಿದ್ದಾರೆ. ಇತ್ತ ಕಳೆದ ಐಪಿಎಲ್ ನಲ್ಲಿ ಠುಸ್ ಆಗಿದ್ದ ಕೇಧಾರ್ ಜಾಧವ್ ಅಲ್ ಸೋಲ್ಡ್ ಆಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಸೀಸ್ ಆಲ್ ರೌಂಡರ್ ಮ್ಯಾಕ್ಸ್ ವೆಲ್ ಗೆ14.25 ಕೋಟಿ ಕೊಟ್ಟು ಖರೀದಿ ಮಾಡಿದೆ.

ಮ್ಯಾಕ್ಸಿಗಾಗಿ ಆರ್ ಸಿಬಿ ಕೆಕೆ ಆರ್ ಚೆನ್ನೈ ಭಾರಿ ಪೈಪೋಟಿ ನಡೆಸಿದವು. ಕೊನೆಗೆ ಆರ್ ಸಿಬಿ 14.25 ಕೋಟಿಗೆ ಮ್ಯಾಕ್ಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ

ಕನ್ನಡಿಗ ಕರುಣ್ ನಾಯರ್ ಅನ್ ಸೋಲ್ಡ್ ಆಗಿದ್ದಾರೆ. ಸ್ಟೀವ್ ಸ್ಮಿತ್ 2.2 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಗೆ ಸೇಲ್ ಆಗಿದ್ದಾರೆ.

ಅಲೆಕ್ಸ್ ಹಾಲ್ಸ್ ಅನ್ ಸೋಲ್ಡ್ ಆಗಿದ್ದಾರೆ.

ಜಾಸನ್ ರೋಯ್ ಕೂಡ ಅನ್ ಸೋಲ್ಡ್ ಆಗಿದ್ದಾರೆ.

ಆರೋನ್ ಫಿಂಚ್ ಅನ್ ಸೋಲ್ಡ್ ಆಗಿದ್ದಾರೆ.

ಹನುಮ ವಿಹಾರಿ ಅನ್ ಸೋಲ್ಡ್ ಆಗಿದ್ದಾರೆ.

Tags: IPLkyle jamiesonRCB
ShareTweetSendShare
Join us on:

Related Posts

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

by Shwetha
February 20, 2026
0

ಕರ್ನಾಟಕದ ಜನತೆಗೆ ವಿದ್ಯುತ್ ದರ ಏರಿಕೆಯ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಕಾಣಿಸಿಕೊಂಡಿದೆ. ಈ ಸಂಬಂಧ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಇಂದು ಮಹತ್ವದ ಸಭೆ...

ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು!.. ರಾಜಕೀಯ ಚರ್ಚೆಗೆ ಕಾರಣ

ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು!.. ರಾಜಕೀಯ ಚರ್ಚೆಗೆ ಕಾರಣ

by Shwetha
February 20, 2026
0

ರಾಜ್ಯ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿ ಮಾಡುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಬಗ್ಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ನೀಡಿ, ದಲಿತರು ಹಾಗೂ ಅಲ್ಪಸಂಖ್ಯಾತರಿಗೆ...

ದೆಹಲಿ ‘AI ಇಂಪ್ಯಾಕ್ಟ್ ಸಮಿಟ್’ ವಿಡಿಯೋ ವೈರಲ್… ಮೋದಿ ಜೊತೆ ಟೆಕ್ ದಿಗ್ಗಜರು ಒಂದೇ ಫ್ರೇಮ್‌ನಲ್ಲಿ

ದೆಹಲಿ ‘AI ಇಂಪ್ಯಾಕ್ಟ್ ಸಮಿಟ್’ ವಿಡಿಯೋ ವೈರಲ್… ಮೋದಿ ಜೊತೆ ಟೆಕ್ ದಿಗ್ಗಜರು ಒಂದೇ ಫ್ರೇಮ್‌ನಲ್ಲಿ

by Shwetha
February 20, 2026
0

ದೆಹಲಿ‌ನಲ್ಲಿ ಆಯೋಜಿಸಲಾದ ‘AI ಇಂಪ್ಯಾಕ್ಟ್ ಸಮಿಟ್’ನ ಒಂದು ವಿಡಿಯೋ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸುಂದ‌ರ್ ಪಿಚೈ, ಸ್ಯಾಮ್...

2028ರ ಸಿಎಂ ಗಾದಿಗೆ ಈಗಲೇ ಟವಲ್ ಹಾಕಿದ ದಳಪತಿಗಳು: ಕಮಲ ಪಾಳಯದ ಮುಂದೆ ಎಚ್‌ಡಿಕೆ ಇಟ್ಟ ಕಠಿಣ ಷರತ್ತುಗಳೇನು?

2028ರ ಸಿಎಂ ಗಾದಿಗೆ ಈಗಲೇ ಟವಲ್ ಹಾಕಿದ ದಳಪತಿಗಳು: ಕಮಲ ಪಾಳಯದ ಮುಂದೆ ಎಚ್‌ಡಿಕೆ ಇಟ್ಟ ಕಠಿಣ ಷರತ್ತುಗಳೇನು?

by Shwetha
February 20, 2026
0

ರಾಜ್ಯ ರಾಜಕಾರಣದಲ್ಲಿ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎಂದು ಕಂಡರೂ, ಆಂತರಿಕವಾಗಿ ಭವಿಷ್ಯದ ಅಧಿಕಾರ ಹಂಚಿಕೆಯ ಲೆಕ್ಕಾಚಾರಗಳು ಜೋರಾಗಿವೆ. 2028ರ ವಿಧಾನಸಭಾ...

ಸುಳ್ಳಿನ ಕೊಚ್ಚೆಯಲ್ಲಿ ಹೊರಳಾಡುವ ಬದಲು ಮೋದಿ ಎದುರು ನಿಂತು ರಾಜ್ಯದ ಹಿತಕ್ಕಾಗಿ ಧ್ವನಿ ಎತ್ತಿ: ಬಿಜೆಪಿ ನಾಯಕರಿಗೆ ಸಚಿವ ದಿನೇಶ್ ಗುಂಡೂರಾವ್ ಬಹಿರಂಗ ಸವಾಲು

ಸುಳ್ಳಿನ ಕೊಚ್ಚೆಯಲ್ಲಿ ಹೊರಳಾಡುವ ಬದಲು ಮೋದಿ ಎದುರು ನಿಂತು ರಾಜ್ಯದ ಹಿತಕ್ಕಾಗಿ ಧ್ವನಿ ಎತ್ತಿ: ಬಿಜೆಪಿ ನಾಯಕರಿಗೆ ಸಚಿವ ದಿನೇಶ್ ಗುಂಡೂರಾವ್ ಬಹಿರಂಗ ಸವಾಲು

by Shwetha
February 20, 2026
0

ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮತ್ತು ವಿರೋಧ ಪಕ್ಷದ ಬಿಜೆಪಿ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಆರೋಗ್ಯ ಇಲಾಖೆಯ ನಿರ್ವಹಣೆ ಕುರಿತಂತೆ ಬಿಜೆಪಿ ಮಾಡಿದ್ದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram